ಪತಿಯ ಮನೆಗೆ ಹೊರಡುವ ಮಗಳ ಕೈಯಲ್ಲಿ ತಪ್ಪಿಯೂ ಈ ನಾಲ್ಕು ವಸ್ತುಗಳನ್ನು ಇಡಬೇಡಿ

ಹೆಣ್ಣುಮಗಳನ್ನು ಮಾಡುವೆ ಮಾಡಿಸಿ ಒಳ್ಳೆಯ ಮನೆ ಸೇರಿಸಬೇಕು ಎನ್ನುವುದು ಪ್ರತಿಯೊಬ್ಬ ಪೋಷಕರ ಕನಸಾಗಿರುತ್ತದೆ. ಮುದ್ದಾಗಿ ಸಾಕಿರುವ ಮಗಳು ಹೋದ ಮನೆಯಲ್ಲಿಯೂ ಅಷ್ಟೇ ಸುಖವಾಗಿ ಇರಬೇಕು ಎನುವುದು ಹೆತ್ತವರ ಬಯಕೆಯಾಗಿರುತ್ತದೆ. 

Written by - Ranjitha R K | Last Updated : Jul 16, 2021, 03:23 PM IST
  • ಮಗಳು ಹೋದ ಮನೆಯಲ್ಲಿಯೂ ಸುಖವಾಗಿ ಇರಬೇಕು ಎನುವುದು ಹೆತ್ತವರ ಬಯಕೆ
  • ಮಗಳ ಸುಖಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಹೆತ್ತವರು
  • ಪತಿಯ ಮನೆ ಸೇರುವ ಮಗಳಿಗೆ ನೀಡುವ ವಸ್ತುಗಳ ಬಗ್ಗೆ ಎಚ್ಚರವಿರಲಿ
ಪತಿಯ ಮನೆಗೆ ಹೊರಡುವ ಮಗಳ ಕೈಯಲ್ಲಿ ತಪ್ಪಿಯೂ ಈ ನಾಲ್ಕು ವಸ್ತುಗಳನ್ನು ಇಡಬೇಡಿ  title=
ಪತಿಯ ಮನೆ ಸೇರುವ ಮಗಳಿಗೆ ನೀಡುವ ವಸ್ತುಗಳ ಬಗ್ಗೆ ಎಚ್ಚರವಿರಲಿ (phoo india.com)

ನವದೆಹಲಿ : ಹೆಣ್ಣುಮಗಳನ್ನು ಮಾಡುವೆ ಮಾಡಿಸಿ ಒಳ್ಳೆಯ ಮನೆ ಸೇರಿಸಬೇಕು ಎನ್ನುವುದು ಪ್ರತಿಯೊಬ್ಬ ಪೋಷಕರ ಕನಸಾಗಿರುತ್ತದೆ. ಮುದ್ದಾಗಿ ಸಾಕಿರುವ ಮಗಳು ಹೋದ ಮನೆಯಲ್ಲಿಯೂ ಅಷ್ಟೇ ಸುಖವಾಗಿ ಇರಬೇಕು ಎನುವುದು ಹೆತ್ತವರ ಬಯಕೆಯಾಗಿರುತ್ತದೆ. ಗಂಡನ ಮನೆಯಲ್ಲಿಯೂ ತನ್ನ ಮಗಳಿಗೆ ತವರು ಮನೆಯ ಪ್ರೀತಿ, ಆದರ, ಗೌರವ ಸಿಗಬೇಕು ಎಂದು ಬಯಸುತ್ತಾರೆ.  ಆದರೆ ಅತಿಯಾದ ಪ್ರೀತಿಯ ಕಾರಣದಿಂದ ಕೆಲವು ತಾಯಿಯಂದಿರು ಕೆಲವು ತಪ್ಪುಗಳನ್ನು ಮಾಡಿ ಬಿಡುತ್ತಾರೆ. ಈ ತಪ್ಪಿನ ಕಾರಣದಿಂದಾಗಿ (Mistakes to be avoid on daughters marriage) ಮಗಳು ಜೀವನದುದ್ದಕ್ಕೂ ತೊಂದರೆ ಅನುಭವಿಸಬೇಕಾಗಬಹುದು. ಮಗಳನ್ನು ಗಂಡನ ಮನೆಗೆ ಕಳುಹಿಸಿ ಕೊಡುವ ಸಮಯದಲ್ಲಿ ಮಗಳಿಗೆ ನೀಡುವ ಕೆಲವು ವಸ್ತುಗಳು ಮಗಳ ಸುಖ ಜೀವನವನ್ನೇ ಹಾಳು ಮಾಡಿಬಿಡಬಹುದು. ಹಾಗಾದರೆ ತವರು ತೊರೆದು ಪತಿಯ ಮನೆ ಸೇರುವ ಮಗಳಿಗೆ ಯಾವೆಲ್ಲಾ ವಸ್ತುಗಳನ್ನು ನೀಡಬಾರದು ನೋಡೋಣ. 

ಮೆಣಸಿನಕಾಯಿ: ವಿದಾಯದ ಸಮಯದಲ್ಲಿ ಮಗಳಿಗೆ ಎಂದಿಗೂ ಮೆಣಸಿನಕಾಯಿ (Chilly) ನೀಡಬಾರದು. ಇದು ಅವರ ವೈವಾಹಿಕ ಜೀವನದಲ್ಲಿ ಕಲಹವನ್ನು ಉಂಟು ಮಾಡಲು ಕಾರಣವಾಗುತ್ತದೆ. ಹೆಣ್ಣುಮಗಳೊಂದಿಗೆ ಮೆಣಸಿನ ಕಾಯಿ ಕೊಟ್ಟು ಕಳುಹಿಸಿದರೆ ಹೊಸ ಸಂಬಂಧದಲ್ಲಿ (Relationship)  ವಿವಾದ ಮೂಡುತ್ತದೆಯಂತೆ. ಇದರ ಬದಲಿಗೆ ಪತಿಯ ಮನಗೆ ಹೋಗುವ ಮಗಳಿಗೆ ಡ್ರೈ ಫ್ರುಟ್ (Dry fruits) ನೀಡುವುದು ಶುಭ ಎಂದು ನಂಬಲಾಗಿದೆ.  

ಇದನ್ನೂ ಓದಿ : Sun Transit 2021: ನಾಳೆ ಕರ್ಕ ರಾಶಿಗೆ ಸೂರ್ಯ ಪ್ರವೇಶ, ಸೂರ್ಯನ ಗೋಚರದ ವಿಶೇಷತೆ ಇಲ್ಲಿದೆ

ಸ್ಟೋವ್ : ಪತಿಯ ಮನೆಗೆ ತೆರಳುವ ಸಮಯದಲ್ಲಿ ಕೆಲವರು ಮಗಳಿಗೆ ಸ್ಟೋವ್ ನೀಡುತ್ತಾರೆ. ಇದನ್ನು ಎಂದಿಗೂ ಮಾಡಬಾರದು. ಸ್ಟೋವ್ ನೀಡುವುದೆಂದರೆ, ಹೊಸ ಕುಟುಂಬಕ್ಕೆ ಹೋದ ಕೂಡಲೇ ಅಡುಗೆ ಮನೆಯನನ್ನು ಇಬ್ಭಾಗ ಮಾಡುವುದು ಎಂದರ್ಥ.  ಸ್ಟೋವ್ ನೀಡುವ ಬದಲು ಡಿನ್ನರ್ ಸೆಟ್ ಅಥವಾ ಮನೆಯವರಿಗೆ ಸಂಬಂಧಿಸಿದ ಇತರ ವಸ್ತುಗಳನ್ನು ನೀಡಬಹುದು.

ಉಪ್ಪು: ಇನ್ನು ಮಗಳಿಗೆ ಮರೆತು ಕೂಡಾ, ಉಪ್ಪು (Salt) ನೀಡಬಾರದು. ಗಂಡನ ಮನೆಗೆಹೋಗುವ ಮಗಳಿಗೆ ಉಪ್ಪು ನೀಡಿದರೆ ನೀವು ಮಗಳನ್ನು ಹೊಸ ಸಂಬಂಧಗಳೊಂದಿಗೆ ಬೆರೆಯುವುದನ್ನು ತಡೆದಂತೆ ಎನ್ನುತ್ತದೆ ಶಾಸ್ತ್ರ. ಹಾಗಾಗಿ ತವರಿನಿಂದ ಹೊರಡುವ ಮಗಳಿಗೆ ಉಪ್ಪಲ್ಲ. ಸಿಹಿ ಕೊಟ್ಟು ಕಳುಹಿಸಬೇಕಂತೆ . 

ಉಪ್ಪಿನಕಾಯಿ : ಉಪ್ಪಿನಕಾಯಿ (Pickle) ಕೂಡಾ ಮಗಳಿಗೆ ಕೊಟ್ಟು ಕಳುಹಿಸಬಾರದು. ಉಪ್ಪಿನಕಾಯಿ ನೀಡುವುದೆಂದರೆ ಹೊಸ ಸಂಬಂಧಗಳಲ್ಲಿ ಹುಳಿ ಹಿಂಡಿದಂತೆ ಎನ್ನುವುದು ನಂಬಿಕೆ. ಇದರ ಬದಲು ಉಳಿದ ಆಹಾರ ಮತ್ತು ಪಾನೀಯವನ್ನು ನೀಡಬಹುದು.

ಇದನ್ನೂ ಓದಿ : House Door Vastu Tips: ಮನೆಯ ಬಾಗಿಲು ಹೀಗಿದ್ದರೆ ಸುಖ ಶಾಂತಿಗೆ ಕೊರತೆಯಿರುವುದಿಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News