Shani Dev Vehicle:  ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಪ್ರತಿಯೊಂದು ದೇವತೆಗಳಿಗೂ ಒಂದು ವಾಹನವಿದೆ ಎಂದು ಉಲ್ಲೇಖಿಸಲಾಗಿದೆ.ದೇವ-ದೇವತೆಗಳ ವಾಹನಗಳಿಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಪ್ರಾಣಿಗಳು ಮತ್ತು ಪಕ್ಷಿಗಳು ಅವುಗಳ ನಡವಳಿಕೆಗೆ ಅನುಗುಣವಾಗಿ ದೇವರೊಂದಿಗೆ ಸಂಬಂಧ ಹೊಂದಿವೆ ಎಂದು ನಂಬಲಾಗಿದೆ. ಪ್ರಾಣಿ-ಪಕ್ಷಿಗಳನ್ನು ರಕ್ಷಿಸಲು, ಅವುಗಳನ್ನು ದೇವರ ವಾಹನವನ್ನಾಗಿಸಿ ಸಂಬಂಧ ಕಲ್ಪಿಸಲಾಗಿದೆ ಎಂಬ ನಂಬಿಕೆಯೂ ಕೂಡ ಇದೆ. ಇದರಿಂದ ಅವುಗಳ ಮೇಲೆ ಯಾವುದೇ ಹಿಂಸೆ ನಡೆಯುವುದಿಲ್ಲ. ಆದರೆ ಶನಿ ದೇವನಿಗೆ ಮಾತ್ರ ಹಲವು ವಾಹನಗಳ ಜೊತೆಗೆ ಸಂಬಂಧ ಕಲ್ಪಿಸಲಾಗಿದ್ದು, ಶನಿದೇವ ಹಲವು ವಾಹನಗಳ ಸವಾರಿ ನಡೆಸುತ್ತಾನೆ ಎನ್ನಲಾಗಿದೆ. ಗ್ರಂಥಗಳಲ್ಲಿ ಶನಿಯ ಒಟ್ಟು 9 ವಾಹನಗಳ ಉಲ್ಲೇಖವಿದೆ. ವ್ಯಕ್ತಿಯ ಜಾತಕದಲ್ಲಿ ನಕ್ಷತ್ರ, ವಾರ ಮತ್ತು ತಿಥಿಗಳನ್ನು ಲೆಕ್ಕ ಹಾಕುವ ಮೂಲಕ, ಶನಿದೇವನು ಯಾವ ವಾಹನದ ಮೂಲಕ ನಿಶ್ಚಿತ ರಾಶಿಯಲ್ಲಿ ಪ್ರವೇಶಿಸಿದ್ದಾನೆ ಎಂದು ಹೇಳಲಾಗುತ್ತದೆ. ಹಾಗಾದರೆ ಶನಿಯ ಯಾವ ವಾಹನದ ಮೂಲಕ ಪ್ರವೇಶ ನಿಮಗೆ ಶುಭ ಮತ್ತು ಯಾವುದು ಅಶುಭ ಎಂಬುದನ್ನು ತಿಳಿಯೋಣ.


COMMERCIAL BREAK
SCROLL TO CONTINUE READING

ಕುದುರೆ
ಕುದುರೆಯನ್ನು ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಶನಿದೇವನು ಅದರ ಮೇಲೆ ಸವಾರಿ ನಡೆಸಿ ರಾಶಿಯನ್ನು ಪ್ರವೇಶಿಸಿದರೆ, ಆ ಜಾತಕಕ್ಕೆ ಸೇರಿದ ವ್ಯಕ್ತಿ ತನ್ನ ಶತ್ರುವನ್ನು ಜಯಿಸುತ್ತಾನೆ, ಆದರೆ ಅತಿ ಉತ್ಸಾಹದಿಂದ ತನ್ನ ಪರಿಜ್ಞಾನ ಕಳೆದುಕೊಳ್ಳಬಾರದು. ಏಕೆಂದರೆ ಈ ಅವಧಿಯಲ್ಲಿ ವ್ಯಕ್ತಿಯು ಶಕ್ತಿಯಿಂದ ತುಂಬಿರುತ್ತಾನೆ.


ನರಿ
ಶನಿ ದೇವನು ನರಿ ಮೇಲೆ ಸವಾರಿ ನಡೆಸಿ ಯಾವುದಾದರೊಂದು ರಾಶಿಯನ್ನು ಪ್ರವೇಶಿಸಿದರೆ, ಈ ಅವಧಿಯಲ್ಲಿ ಜಾತಕಕ್ಕೆ ಸೇರಿದ ವ್ಯಕ್ತಿ  ಶುಭ ಫಲಿತಾಂಶಗಳನ್ನು ಪಡೆಯುವುದಿಲ್ಲ. ನರಿಯನ್ನು ಅಶುಭ ವಾಹನವೆಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜಾಗರೂಕರಾಗಿರಬೇಕು.ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ.


ಹಂಸ
ಹಂಸವನ್ನು ಶನಿಯ ಅತ್ಯಂತ ಮಂಗಳಕರ ವಾಹನ ಎಂದು ಪರಿಗಣಿಸಲಾಗುತ್ತದೆ. ಶನಿದೇವನು ಹಂಸದ ಮೇಲೆ ಸವಾರಿ ಮಾಡಿ ರಾಶಿ ಪ್ರವೇಶಿಸಿದರೆ, ಈ ಅವಧಿಯಲ್ಲಿ ಜಾತಕಕ್ಕೆ ಸೇರಿದ ವ್ಯಕ್ತಿಯ ಆರ್ಥಿಕತೆಯಲ್ಲಿ ಸುಧಾರಣೆ ಕಂಡುಬರುತ್ತದೆ. ಇದು ವ್ಯಕ್ತಿಯ ಗೌರವದ ಸಂಕೇತವೆಂದು ಪರಿಗಣಿಸಲಾಗಿದೆ.


ಕಾಗೆ
ಕಾಗೆಯನ್ನು ಶನಿದೇವನ ಅಶುಭ ವಾಹನವೆಂದು ಪರಿಗಣಿಸಲಾಗಿದೆ. ಕಾಗೆ ಸವಾರಿಯ ಮೂಲಕ ಶನಿ ರಾಶಿಯನ್ನು ಪ್ರವೇಶಿಸಿದರೆ, ವ್ಯಕ್ತಿಯ ಕುಟುಂಬದಲ್ಲಿ ಕ್ಲೇಶಗಳು ಹೆಚ್ಚಾಗುತ್ತವೆ. ಈ ಸಮಯದಲ್ಲಿ ತಾಳ್ಮೆಯಿಂದಿರಿ, ಆತುರದ ನಿರ್ಧಾರವು ಹಾನಿಕಾರಕ ಸಾಬೀತಾಗಬಹುದು .ಸಂಯಮದಿಂದ ಕೆಲಸ ಮಾಡಿ.


ಎಮ್ಮೆ
ಶನಿದೇವನು ಎಮ್ಮೆ ಮೇಲೆ ಸವಾರಿ ನಡೆಸಿ ರಾಶಿ ಪ್ರವೇಶಿಸಿದರೆ, ವ್ಯಕ್ತಿ ಬುದ್ಧಿವಂತಿಕೆಯಿಂದ ವರ್ತಿಸಬೇಕು. ಶನಿದೇವನ ವಾಹನ ಎಮ್ಮೆಯನ್ನು ಶುಭ ಮತ್ತು ಅಶುಭವೆಂದು ಎರಡೂ ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಮಿಶ್ರ ಫಲಿತಾಂಶಗಳು ಪ್ರಾಪ್ತಿಯಾಗುತ್ತವೆ.


ಕತ್ತೆ
ಕತ್ತೆಯನ್ನು ಶನಿದೇವನ ಅಶುಭ ವಾಹನವೆಂದು ಪರಿಗಣಿಸಲಾಗುತ್ತದೆ. ಕತ್ತೆಯ ಮೇಲೆ ಸವಾರಿ ನಡೆಸಿ ಶನಿ ರಾಶಿಯನ್ನು ಪ್ರವೇಶಿಸಿದರೆ, ವ್ಯಕ್ತಿ ಈ ಸಂದರ್ಭದಲ್ಲಿ ಸಾಕಷ್ಟು ಹೋರಾಟ ನಡೆಸಬೇಕಾಗುತ್ತದೆ. ಸಾಕಷ್ಟು ಪ್ರಯತ್ನದ ನಂತರ ಯಶಸ್ಸು ಸಿಗುತ್ತದೆ.


ಆನೆ
ಆನೆ ಸವಾರಿ ಶನಿ ದೇವನ ಮಂಗಳಕರ ಸವಾರಿ ಎಂದು ಪರಿಗಣಿಸಲಾಗುವುದುಲ್ಲ. ಇದು ನಿಮ್ಮ ನಿರೀಕ್ಷೆಗಳಿಗೆ ವಿರುದ್ಧವಾದ ಫಲಿತಾಂಶಗಳನ್ನು ನೀಡುತ್ತದೆ.ಈ ಅವಧಿಯಲ್ಲಿ ಧೈರ್ಯದಿಂದಿರಿ.


ಸಿಂಹ
ನ್ಯಾಯದ ದೇವರು ಎಂದೇ ಕರಯಲಾಗುವ ಶನಿಯ ಸವಾರಿ ಸಿಂಹವಾಗಿದ್ದರೆ, ಅದು ಶತ್ರುಗಳನ್ನು ಜಯಿಸಲು ಸಹಾಯ ಮಾಡುತ್ತದೆ. ಈ ವಾಹನವನ್ನು ಮಂಗಳಕರವೆಂದು ಪರಿಗಣಿಸಲಾಗಿದೆ.


ಇದನ್ನೂ ಓದಿ-Chanakya Niti: ಈ ಜನರು ಜೊತೆಗಿದ್ದರೆ ಸುಖೀ ಜೀವನವೂ ನರಕವಾಗುತ್ತದೆ, ತಕ್ಷಣ ಅಂತರ ಕಾಯ್ದುಕೊಳ್ಳಿ


ನವಿಲು
ಶನಿಯ ವಾಹನ ನವಿಲು ಆಗಿದ್ದರೆ ಶುಭ ಪ್ರಾಪ್ತಿಯಾಗುತ್ತವೆ. ಇದನ್ನು ಜೀವನದಲ್ಲಿ ಉತ್ಸಾಹದ ಸೂಚಕವೆಂದು ಪರಿಗಣಿಸಲಾಗುತ್ತದೆ.ಶನಿದೇವನು ಇದರ ಮೇಲೆ ಸವಾರಿ ಮಾಡುವಾಗ, ವ್ಯಕ್ತಿಗೆ ಸಾಕಷ್ಟು ಅದೃಷ್ಟವನ್ನು ದಯಪಾಲಿಸುತ್ತಾನೆ.


ಇದನ್ನೂ ಓದಿ-Chanakya Niti : ಈ ಗುಣಗಳನ್ನು ಹೊಂದಿರುವ ಮಹಿಳೆಯರು ಅತ್ಯುತ್ತಮ ಪತ್ನಿ ಮತ್ತು ತಾಯಿಯಂತೆ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.