ಬೆಂಗಳೂರು :  ಕರ್ಮಫಲದಾತ ಶನಿ ದೇವನು ವ್ಯಕ್ತಿಯ ಕರ್ಮಕ್ಕೆ  ಅನುಗುಣವಾಗಿ ಫಲವನ್ನು ನೀಡುತ್ತಾನೆ. ಶನಿದೇವನ ಕ್ರೋಧಕ್ಕೆ ಸಾಮಾನ್ಯ ಜನರು ಮಾತ್ರವಲ್ಲ ದೇವತೆಗಳೂ ನಡುಗಿ ಹೋಗುತ್ತಾರೆ.  ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಶನಿಯ ಕೃಪೆಯನ್ನು ಉಳಿಸಿಕೊಳ್ಳಲು ಬಯಸುತ್ತಾರೆ. ಶನಿ ಸಾಡೇಸಾತಿ, ಧೈಯ್ಯಾ ಮತ್ತು ಶನಿ ಮಹಾದಶದಿಂದ ಬಳಲುತ್ತಿರುವ ಜನರು ತಮ್ಮ ಜೀವನದಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ.  


COMMERCIAL BREAK
SCROLL TO CONTINUE READING

ಶನಿದೆಸೆಯಿಂದ ಬಳಲುತ್ತಿರುವ ಜನರು ದೈಹಿಕವಾಗಿ, ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.  ಆದರೆ ಶನಿಯ ಅನುಗ್ರಹ  ಯಾರ ಮೇಲೆ ಬೀಳುತ್ತದೆಯೋ,  ಇದ್ದಕ್ಕಿದ್ದಂತೆ ಅವರ ಜೀವನವೇ ಬದಲಾಗಿ ಬಿಡುತ್ತದೆ. ಶನಿಯ ಅನುಗ್ರಹ ಸಿಗಬೇಕಾದರೆ, ಜಾತಕದಲ್ಲಿ ಶನಿಯು ಯಾವ ಮನೆಯಲ್ಲಿದ್ದಾನೇ ಎನ್ನುವುದು ಮುಖ್ಯವಾಗುತ್ತದೆ. 


ಇದನ್ನೂ  ಓದಿ :   Shani Effect : ಈ ರಾಶಿಯವರಿಗೆ 3 ವರ್ಷ ಶನಿ ಕಾಟ, ತಡೆಗಟ್ಟುವ ಕ್ರಮಗಳು ಇಲ್ಲಿವೆ!


ಜಾತಕದ ಈ ಮನೆಯಲ್ಲಿದ್ದಾನೆಯೇ ಶನಿ : 
ಜಾತಕದ ಏಳನೇ ಮನೆಯಲ್ಲಿ ಶನಿಗ್ರಹವಿದ್ದರೆ  ಲಾಭದಾಯಕವೆಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಈ ಅವಧಿಯಲ್ಲಿ ವ್ಯಕ್ತಿಯು ವ್ಯಾಪಾರ-ಉದ್ಯೋಗದಲ್ಲಿ ಬಡ್ತಿಯನ್ನು ಪಡೆಯುತ್ತಾನೆ.  ಗೌರವ ಹೆಚ್ಚಾಗುತ್ತದೆ.  ಈ  ಸಮಯದಲ್ಲಿ, ಹೊಸ ವ್ಯವಹಾರ ಆರಂಭಿಸುವುದು ಕೂಡಾ ಶುಭ ಎಂದು ಹೇಳಲಾಗುತ್ತದೆ. 


 ಇದು ವೈವಾಹಿಕ ಜೀವನಕ್ಕೆ ಒಳ್ಳೆಯದಲ್ಲ :
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜಾತಕದಲ್ಲಿ ಶನಿಯ ಏಳನೇ ಮನೆಯಲ್ಲಿರುವುದು ವ್ಯಾಪಾರ-ಉದ್ಯೋಗ ಇತ್ಯಾದಿಗಳಿಗೆ ಮಂಗಳಕರವೆಂದು ಪರಿಗಣಿಸಲಾಗಿದೆ. ಆದರೆ ವ್ಯಕ್ತಿಯ ವೈವಾಹಿಕ ಜೀವನಕ್ಕೆ ಇದು ಮಂಗಳಕರವಲ್ಲ. ಏಳನೇ ಮನೆಯಲ್ಲಿ ಶನಿಯ ಉಪಸ್ಥಿತಿಯಿಂದಾಗಿ, ವ್ಯಕ್ತಿಯ ವೈವಾಹಿಕ ಜೀವನವು ಒತ್ತಡದಿಂದ ತುಂಬಿರುತ್ತದೆ. ಸಣ್ಣಪುಟ್ಟ ವಿಚಾರಗಳಿಗೆ ಪತಿ ಪತ್ನಿಯರ ನಡುವೆ ಮನಸ್ತಾಪ ಉಂಟಾಗುತ್ತದೆ. 


ಇದನ್ನೂ  ಓದಿ : ನಕ್ಷತ್ರ ಬದಲಿಸಿದ ಸೂರ್ಯ ಬೆಳಗಲಿದ್ದಾನೆ ಈ ಮೂರು ರಾಶಿಯವರ ಅದೃಷ್ಟ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.