ನವದೆಹಲಿ : ಶನಿ ದೇವನನ್ನು (Shani Dev)  ಸೂರ್ಯನ ಪುತ್ರ  ಮಗ ಮತ್ತು ಕರ್ಮ ಫಲದಾತ ಎಂದು ಕರೆಯಲಾಗುತ್ತದೆ.  ಜೀವನದಲ್ಲಿ ಘಟಿಸುವ ಎಲ್ಲಾ, ಅಶುಭ ಮತ್ತು ದುಃಖಕ್ಕೆ ಶನಿ ದೇವನೇ ಮೂಲಕ ಕಾರಣ ಎನ್ನಲಾಗುತ್ತದೆ. ಆದರೆ, ಇದು ಸಂಪೂರ್ಣ ಸತ್ಯವಲ್ಲ. ಶನಿ ಶತ್ರುವಲ್ಲ ಮಿತ್ರ ಕೂಡಾ . 


COMMERCIAL BREAK
SCROLL TO CONTINUE READING

ಶನಿ ಸಂತೃಪ್ತನಾದರೆ ಎಂಥವರು ಬೇಕಾದರೂ ರಾಜರಾಗುತ್ತಾರೆ :
ಶನಿ ದೇವ (Shani Dev) ಒಬ್ಬ ವ್ಯಕ್ತಿಗೆ ಮೋಕ್ಷವನ್ನು ನೀಡುವ ಏಕೈಕ ಗ್ರಹ. ಶನಿ ಪ್ರಕೃತಿಯಲ್ಲಿ ಸಮತೋಲನವನ್ನು ಸೃಷ್ಟಿಸುತ್ತಾನೆ ಮತ್ತು ಪ್ರತಿ ಜೀವಿಗೆ ಸರಿಯಾದ ನ್ಯಾಯವನ್ನು ನೀಡುತ್ತಾನೆ. ಅನ್ಯಾಯ ಮತ್ತು ಅಸಹಜ ಸಮಾನತೆಗೆ ಆಶ್ರಯ ನೀಡಿದವರನ್ನು ಮಾತ್ರ ಶನಿ ಶಿಕ್ಷಿಸುತ್ತಾನೆ. ಶನಿಯು ಮಂಗಳಕರವಾಗಿದ್ದಾಗ, ಎಂಥವರು ಕೂಡಾ ರಾಜರಾಗುತ್ತಾರೆ.  


ಇದನ್ನೂ ಓದಿ : ನವರಾತ್ರಿಯಲ್ಲಿ ತಪ್ಪಿಯೂ ಮಾಡದಿರಿ ಈ ಕೆಲಸಗಳನ್ನು , ದುರ್ಗೆಯ ಮುನಿಸಿಗೆ ಕಾರಣವಾಗಬಹುದು


ಅಕ್ಟೋಬರ್ 11 ರಿಂದ ಶನಿಯ ಹಿಮ್ಮುಖ ಚಲನೆ : 
ಅಕ್ಟೋಬರ್ 11 ರಿಂದ ಶನಿ ದೇವನ ಹಿಮ್ಮುಖ ಚಲನೆ ಆರಂಭವಾಗಲಿದೆ. ಈ ಬದಲಾವಣೆಯು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟ ತರಲಿದೆ. ಆ ರಾಶಿಚಕ್ರ (Zodiac sign) ಚಿಹ್ನೆಗಳ ನಿಂತು ಹೋದ ಕೆಲಸಗಳು ಸುಗಮವಾಗಿ ಸಾಗುತ್ತವೆ. ಇದರೊಂದಿಗೆ ಆ ಜನರ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ. ಯಾವ ಯಾವ ರಾಶಿಯವರು,  ಶನಿಯ ಅನುಗ್ರಹ ಪಡೆಯಲಿದ್ದಾರೆ ನೋಡೋಣ.  


ಹೊಸ ಶುಭ ಕಾರ್ಯಗಳನ್ನು ಮಾಡುವುದರಿಂದ ಲಾಭ :
ಕರ್ಕಾಟಕ ರಾಶಿಯವರು (Cancer) ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶವನ್ನು ಪಡೆಯುತ್ತಾರೆ. ಹೊಸ ಕೆಲಸ ಆರಂಭಿಸುವುದು ಲಾಭದಾಯಕವಾಗಿ ಸಾಬೀತಾಗಲಿದೆ. ನಿಮಗೆ ತುಂಬಾ ಗೌರವ ಸಿಗುತ್ತದೆ. ಅವನ ಆರ್ಥಿಕ ಸ್ಥಿತಿ ಕೂಡಾ ಉತ್ತಮವಾಗಿರಲಿದೆ.  


ಇದನ್ನೂ ಓದಿ : Mysuru Dasara: ಸಾಂಸ್ಕೃತಿಕ ನಗರಿಯಲ್ಲಿ ನಾಡಹಬ್ಬಕ್ಕೆ ಚಾಲನೆ ನೀಡಿದ ಮಾಜಿ ಸಿಎಂ ಎಸ್.ಎಂ. ಕೃಷ್ಣ


ಆರ್ಥಿಕ ಲಾಭವಾಗಲಿದೆ : 
ಶನಿಯ ಚಲನೆ ಬದಲಾಗುವಾಗ ಕನ್ಯಾರಾಶಿ ರಾಶಿಯ  (Virgo) ಜನರ ಗೌರವ ಮತ್ತು ಪ್ರತಿಷ್ಠೆ ಹೆಚ್ಚುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ.  ವೈವಾಹಿಕ ಜೀವನ ಸುಖಕರವಾಗಿರುತ್ತದೆ. ಅಲ್ಲದೆ, ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭವಾಗಲಿದೆ. 


ಸ್ನೇಹಿತರೊಂದಿಗೆ ಸಮಯ ಕಳೆಯಬಹುದು : 
ಮೇಷ ರಾಶಿಯ (Aries) ಜನರ ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಅವರು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತರಾಗುವಿರಿ. ಸ್ನೇಹಿತರೊಂದಿಗೆ ಸಮಯ ಕಳೆಯುತ್ತೀರಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.