ಈ ಐದು ರಾಶಿಯವರ ಭಾಗ್ಯ ತೆರೆಯಲಿದೆ, ಮುಂದಿನ 11 ದಿನ ಇವರಿಗೆ ಅತ್ಯಂತ ಶುಭ

 ಜಾತಕದಲ್ಲಿ ಸೂರ್ಯನು ಶುಭ ಸ್ಥಾನದಲ್ಲಿದ್ದರೆ, ವ್ಯಕ್ತಿಯ ಅದೃಷ್ಟ ಕೂಡಾ ಹೊಳೆಯುತ್ತದೆ. ಸೂರ್ಯನ ಕೃಪೆಯಿಂದ ಅವರು ಉನ್ನತ ಸ್ಥಾನವನ್ನು ಅಲಂಕರಿಸುತ್ತಾರೆ.

Written by - Ranjitha R K | Last Updated : Oct 6, 2021, 01:50 PM IST
  • ಸೂರ್ಯ ಕನ್ಯಾರಾಶಿಯಲ್ಲಿರುತ್ತಾನೆ
  • 5 ರಾಶಿಗಳ ಭವಿಷ್ಯವು ಅಕ್ಟೋಬರ್ 17 ರವರೆಗೆ ಹೊಳೆಯುತ್ತಿರುತ್ತದೆ.
  • ವೃತ್ತಿ ಪ್ರಗತಿ ಮತ್ತು ಆರ್ಥಿಕ ಲಾಭವಾಗಲಿದೆ
ಈ ಐದು ರಾಶಿಯವರ ಭಾಗ್ಯ ತೆರೆಯಲಿದೆ, ಮುಂದಿನ 11 ದಿನ ಇವರಿಗೆ ಅತ್ಯಂತ ಶುಭ   title=
5 ರಾಶಿಗಳ ಭವಿಷ್ಯವು ಅಕ್ಟೋಬರ್ 17 ರವರೆಗೆ ಹೊಳೆಯುತ್ತಿರುತ್ತದೆ. (file photo)

ನವದೆಹಲಿ : ಯಶಸ್ಸು, ಆರೋಗ್ಯ, ಆತ್ಮವಿಶ್ವಾಸದ ಅಂಶವಾದ ಸೂರ್ಯನ (Sun) ಸ್ಥಾನದಲ್ಲಿ ಆಗುವ ಬದಲಾವಣೆ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಜಾತಕದಲ್ಲಿ ಸೂರ್ಯನು ಶುಭ ಸ್ಥಾನದಲ್ಲಿದ್ದರೆ, ವ್ಯಕ್ತಿಯ ಅದೃಷ್ಟ ಕೂಡಾ ಹೊಳೆಯುತ್ತದೆ. ಸೂರ್ಯನ ಕೃಪೆಯಿಂದ ಅವರು ಉನ್ನತ ಸ್ಥಾನವನ್ನು ಅಲಂಕರಿಸುತ್ತಾರೆ. ಇತ್ತೀಚೆಗೆ, ಸೂರ್ಯನು ರಾಶಿಚಕ್ರ ಚಿಹ್ನೆಯನ್ನು (Zodiac sign) ಬದಲಾಯಿಸುವ ಮೂಲಕ ಕನ್ಯಾರಾಶಿ ಪ್ರವೇಶಿಸಿದ್ದಾನೆ.  ಅಕ್ಟೋಬರ್ 17 ರವರೆಗೆ ಈ ರಾಶಿಯಲ್ಲಿಯೇ ಉಳಿಯಲಿದ್ದಾನೆ. ಈ ಸಮಯದಲ್ಲಿ, 5 ರಾಶಿಚಕ್ರದ ಜನರಿಗೆ ಮಂಗಳಕರವಾಗಿ ಸಾಬೀತಾಗಲಿದೆ.  

 ಹೊಳೆಯಲಿದೆ ಈ ರಾಶಿಯವರ ಅದೃಷ್ಟ :
ಮೇಷ : ಮೇಷ ರಾಶಿಯವರಿಗೆ (Aries) ಅಕ್ಟೋಬರ್ 17ಕ್ಕಿಂತ ಮೊದಲು ಗೌರವ ಸಿಗಲಿದೆ. ಹಣ ಗಳಿಕೆಗೆ ಹೆಚ್ಚಿನ ಅವಕಾಶಗಳು ಸಿಗಲಿವೆ.  ಆರೋಗ್ಯ (Health) ಕೂಡಾ ಉತ್ತಮವಾಗಿರಲಿದೆ. ಜೀವನದಲ್ಲಿ ಸಂತೋಷ ಮನೆ ಮಾಡಲಿದೆ.  

ಇದನ್ನೂ ಓದಿ : Navratri 2021: ನವರಾತ್ರಿಯ ಉಪವಾಸದ ನಿಯಮಗಳು; ಮರೆತೂ ಮಾಡದಿರಿ ಈ ತಪ್ಪು

ಮಿಥುನ : ಮಿಥುನ ರಾಶಿಯ (Gemini) ಜನರು ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ನಿರುದ್ಯೋಗಿಗಳಿಗೆ ಬಯಸಿದ ಕೆಲಸ ಸಿಗುತ್ತದೆ. ಆತ್ಮವಿಶ್ವಾಸದಿಂದ ಕೆಲಸ ಮಾಡಿದರೆ, ಕೆಲಸದಲ್ಲಿ ಯಶಸ್ಸು ಸಿಗಲಿದೆ. ಹಣಕಾಸಿನ ಸ್ಥಿತಿಯೂ ಉತ್ತಮವಾಗಿರುತ್ತದೆ. 

ಸಿಂಹ : ಸಿಂಹ ರಾಶಿಯವರಿಗೆ (Leo) ಈ ಸಮಯ ಶುಭಕರವಾಗಿರುತ್ತದೆ. ಪ್ರಚಾರದೊಂದಿಗೆ, ಆರ್ಥಿಕ ಲಾಭ ಕೂಡಾ ಆಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಭವಿಷ್ಯಕ್ಕಾಗಿ ಲಾಭದಾಯಕ ಯೋಜನೆಗಳನ್ನು ಮಾಡಲಾಗುವುದು. ಹಳೆಯ ವಹಿವಾಟು ಬಾಕಿಯಿದ್ದರೆ, ಈ ಅವಧಿಯಲ್ಲಿ ಅದನ್ನು ಇತ್ಯರ್ಥಗೊಳಿಸಿ. 

ಇದನ್ನೂ ಓದಿ : Navratri 2021: ಡೋಲಿಯಲ್ಲಿ ದೇವಿ ದುರ್ಗೆಯ ಆಗಮನ-ಆನೆಯ ಮೇಲೆ ನಿರ್ಗಮನ, ಈ ಬಾರಿಯ ನವರಾತ್ರಿ ಪ್ರಭಾವ ಹೇಗಿರಲಿದೆ?

ವೃಶ್ಚಿಕ: ವೃಶ್ಚಿಕ ರಾಶಿಯ (Scorpio) ಜನರು ಅರ್ಥಿಕ ಲಾಭ ಪಡೆಯುತ್ತಾರೆ. ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ವೃತ್ತಿಜೀವನದಲ್ಲಿ ಪ್ರಗತಿ ಇರುತ್ತದೆ. ವ್ಯಾಪಾರಿಗಳು ದೊಡ್ಡ ಆರ್ಡರ್ ಗಳನ್ನು ಪಡೆಯುತ್ತಾರೆ.  

ಧನು : ಧನು ರಾಶಿಯ (Sagittarius) ಜನರ ಹಳೆಯ ಸ್ಥಗಿತಗೊಂಡ ಕೆಲಸ ಪೂರ್ಣಗೊಳ್ಳಲಿದೆ. ಕೆಲಸದ ಸ್ಥಳದಲ್ಲಿ ಜವಾಬ್ದಾರಿಗಳು ಹೆಚ್ಚಾಗಬಹುದು.  ಇದು ಪ್ರಯೋಜನಕಾರಿಯಾಗಿ ಸಾಬೀತಾಗಲಿದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News