ನವದೆಹಲಿ : ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಯಾವುದೇ ಗ್ರಹದ ಹಿಮ್ಮುಖ ಚಲನೆಯು ವ್ಯಕ್ತಿಯ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಏಕೆಂದರೆ ಗ್ರಹಗಳು ಮತ್ತು ನಕ್ಷತ್ರಪುಂಜಗಳು ನೇರವಾಗಿ ಜೀವನಕ್ಕೆ ಸಂಬಂಧಿಸಿವೆ. ಈ ವರ್ಷ ಅನೇಕ ಗ್ರಹಗಳು ತಮ್ಮ ನಡೆಯನ್ನು ಬದಲಿಸಲಿವೆ. ಇದು ನ್ಯಾಯದ ದೇವರು ಶನಿದೇವ ಕೂಡಾ ತನ್ನ ನಡೆಯನ್ನು ಬದಲಿಸಲಿದ್ದಾನೆ. ಶನಿದೇವನು (Shanidev) ಜೂನ್ 5 ರಿಂದ ಹಿಮ್ಮುಖವಾಗಿ ಚಲಿಸುತ್ತಾನೆ.  ಅಕ್ಟೋಬರ್ 23 ರವರೆಗೆ ಶನಿ ಅದೇ  ಸ್ಥಿತಿಯಲ್ಲಿ ಇರುತ್ತಾನೆ. ಶನಿಯ ಹಿಮ್ಮುಖ ಚಲನೆ ಈ 4 ರಾಶಿಚಕ್ರದ (Zodiac sign) ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.   


COMMERCIAL BREAK
SCROLL TO CONTINUE READING

ಕಟಕ ರಾಶಿ :
ಶನಿಯ (Shani) ಹಿಮ್ಮುಖ ಚಲನೆಯು ಕರ್ಕಾಟಕ ರಾಶಿಯ (Cancer) ಜನರ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಈ ಹಂತದಲ್ಲಿ, ಉದ್ಯೋಗ ಮತ್ತು ಉದ್ಯೋಗದ ಸ್ಥಳದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕರ್ಕ ರಾಶಿಯ ಅಧಿಪತಿ ಚಂದ್ರ. ಚಂದ್ರ (Moon) ಮತ್ತು ಶನಿಯ ನಡುವೆ ಶತ್ರುತ್ವ ಇರುತ್ತದೆ.  ಈ ಹಿನ್ನೆಲೆಯಲ್ಲಿ ಕಟಕ ರಾಶಿಯ ಜನರು ತುಂಬಾ ಜಾಗರೂಕರಾಗಿರಬೇಕು. ಅದರಲ್ಲಿಯೂ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. 


ಇದನ್ನೂ ಓದಿ : Popularity Tips: ನಿಮಗೂ ಫೇಮಸ್ ಆಗುವ ಬಯಕೆಯೇ? ಈ ಸುಲಭ ಉಪಾಯಗಳನ್ನು ಅನುಸರಿಸಿ ಝಟ್ ಅಂತ ಪ್ರಸಿದ್ಧಿ ಪಡೆಯಿರಿ


ಸಿಂಹ ರಾಶಿ :
ಸಿಂಹ ರಾಶಿಯವರಿಗೆ (Leo) ಶನಿ ಹಿನ್ನಡೆಯ ಸಮಯದಲ್ಲಿ ಅನಗತ್ಯ ಖರ್ಚುಗಳು ಹೆಚ್ಚಾಗುತ್ತವೆ. ಸಾಲದ ಸಮಸ್ಯೆ ನಿಮ್ಮನ್ನು ಕಾಡಲಿದೆ. ಆರೋಗ್ಯ ಹದಗೆಡಬಹುದು. ಆಹಾರದ ಬಗ್ಗೆ ವಿಶೇಷ ಗಮನ ನೀಡಬೇಕು. ಇದಲ್ಲದೆ, ಕೆಲಸದ ಸ್ಥಳದಲ್ಲಿ ಹಲವಾರು ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. 


ವೃಶ್ಚಿಕ ರಾಶಿ :
ವೃಶ್ಚಿಕ ರಾಶಿಯ (Scorpio) ಜನರು ಶನಿಯ ಹಿಮ್ಮುಖ ಚಲನೆಯಿಂದ ತೊಂದರೆಗೆ ಒಳಗಾಗಬಹುದು. ಶನಿಯ (Shani transit) ಹಿಮ್ಮುಖ ಚಲನೆಯ ಪರಿಣಾಮದಿಂದಾಗಿ, ಆರ್ಥಿಕ ಪರಿಸ್ಥಿತಿಯು ಹದಗೆಡಬಹುದು. ವೃಶ್ಚಿಕ ರಾಶಿಯ ಅಧಿಪತಿ ಮಂಗಳ. ಮಂಗಳ ಮತ್ತು ಶನಿಯ ನಡುವೆ ದ್ವೇಷದ ಭಾವನೆ ಇದೆ. ಇದರಿಂದಾಗಿ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಡಬಹುದು. ಆದ್ದರಿಂದ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.


ಇದನ್ನೂ ಓದಿ : ಮನೆಯಲ್ಲಿ ಈ ಗಿಡವಿದ್ದರೆ , ಲಕ್ಷ್ಮೀ ಸುರಿಸುತ್ತಾಳೆ ದುಡ್ಡಿನ ಮಳೆ


ಮಕರ ರಾಶಿ : 
ಮಕರ ರಾಶಿಯವರು (Capricorn) ಶನಿಯ ಹಿನ್ನಡೆಯಿಂದ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಸ್ನೇಹಿತರೊಂದಿಗೆ ಕೂಡಾ ಸಮಸ್ಯೆಗಳು ಎದುರಾಗಬಹುದು. ಕೆಲಸದ ಸ್ಥಳದಲ್ಲಿ ಅಧಿಕಾರಿಗಳಿಂದ ತೊಂದರೆ ಎದುರಾಗಬಹುದು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.