ನವದೆಹಲಿ : ವಾಸ್ತುಶಾಸ್ತ್ರದ ಪ್ರಕಾರ (Vastu shastra), ಕೆಲವು ಸಸ್ಯಗಳು ಮನೆಯ ನಕಾರಾತ್ಮಕ ಶಕ್ತಿಯನ್ನು (Negetive energy) ತೊಡೆದುಹಾಕುವ ಮೂಲಕ ಧನಾತ್ಮಕ ಶಕ್ತಿಯನ್ನು ರವಾನಿಸುತ್ತವೆ. ಮನೆಯಲ್ಲಿ ನೆಲ್ಲಿಕಾಯಿ ಗಿಡ, ಶಮಿ, ತುಳಸಿ ಇತ್ಯಾದಿ ಗಿಡಗಳನ್ನು ನೆಡುವುದರಿಂದ ಸಂತೋಷ, ಸಮೃದ್ದಿ ವೃದ್ದಿಯಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದರೊಂದಿಗೆ ಕಣಗಿಲೆ ಗಿಡವನ್ನು ಕೂಡಾ ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಈ ಸಸ್ಯದ ದೈವಿಕ ಗುಣದಿಂದಾಗಿ, ಮನೆಯಲ್ಲಿ ಪರಸ್ಪರ ಭಿನ್ನಾಭಿಪ್ರಾಯವನ್ನು ಶಮನಗೊಳಿಸಲು ಈ ಗಿಡ ಸಹಾಯ ಮಾಡುತ್ತದೆ.
ಲಕ್ಷ್ಮೀ ದೇವಿ ಮತ್ತು ಭಗವಾನ್ ವಿಷ್ಣುಗೆ ಅತ್ಯಂತ ಪ್ರಿಯ ಈ ಸಸ್ಯ :
ವಾಸ್ತು ಶಾಸ್ತ್ರದಲ್ಲಿ, ಕಣಗಿಲೆ ಸಸ್ಯವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಸಸ್ಯದಲ್ಲಿ ವಿಷ್ಣು ನೆಲೆಸಿರುತ್ತಾನೆ ಎನ್ನುವುದು ನಂಬಿಕೆ. ಕಣಗಿಲೆ ಗಿಡದಲ್ಲಿ ಎರಡು ವಿಧಗಳಿವೆ . ಒಂದು ಬಿಳಿ ಮತ್ತು ಇನ್ನೊಂದು ಹಳದಿ. ಬಿಳಿ ಹೂವುಗಳನ್ನು ಹೊಂದಿರುವ ಗಿಡವು ಲಕ್ಷ್ಮೀ ದೇವಿಗೆ (godess lakshmi) ಪ್ರಿಯವಾಗಿದ್ದರೆ, ಹಳದಿ ಬಣ್ಣದ ಕಣಗಿಲೆ ಗಿಡ ವಿಷ್ಣುವಿನ (Lord Vishnu) ವಾಸಸ್ಥಾನ ಎನ್ನುವುದನ್ನು ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ : Panchagrahi Yoga: ಶನಿಯ ರಾಶಿಯಲ್ಲಿ 5 ಗ್ರಹಗಳ 'ಮಹಾಸಂಯೋಗ'! ಈ 3 ರಾಶಿಯವರಿಗೆ ಸಂಕಷ್ಟ
ಸಂಪತ್ತು ಹೆಚ್ಚಾಗಲು ಸಹಾಯ ಮಾಡುತ್ತದೆ :
ಕಣಗಿಲೆ ಗಿಡದಲ್ಲಿ ವರ್ಷವಿಡೀ ಹೂವುಗಳು ತುಂಬಿ ತುಳುಕುತ್ತಿರುತ್ತವೆ. ಈ ಗಿಡದಲ್ಲಿ ಹೇಗೆ ವರ್ಷ ಪೂರ್ತಿ ಹೂವು ಇರುತ್ತದೆಯೋ ಹಾಗೆಯೇ, ಮನೆಯಲ್ಲಿ ಈ ಗಿಡವನ್ನು ನೆಟ್ಟರೆ ಸಂಪತ್ತು ಕೂಡಾ ನೆಲೆಯಾಗುತ್ತದೆ. ಕಣಗಿಲೆ ಗಿಡ ವಾತಾವರಣವನ್ನು ಶಾಂತವಾಗಿರಿಸುತ್ತದೆ. ಅದೆ ರೀಒತಿ ಈ ಗಿಡ ಮನೆಯಲ್ಲಿಯೂ ಸಕಾರಾತ್ಮಕತೆ (Negetive energy) ಲೆಯಾಗುವಂತೆ ಮಾಡುತ್ತದೆ. ಮನೆಯ ಪೂರ್ವ ಅಥವಾ ಪೂರ್ವ-ಉತ್ತರ ಕೋನದಲ್ಲಿ ಈ ಗಿಡವನ್ನು ನೆಟ್ಟರೆ, ಲಕ್ಷ್ಮೀ ದೇವಿಯ ಕೃಪೆ ಸಿಗುತ್ತದೆ ಎನ್ನಲಾಗಿದೆ. ಮತ್ತೊಂದೆಡೆ, ಮನೆಯಲ್ಲಿ ಹಳದಿ ಬಣ್ಣದ ಕಣಗಿಲೆ ಗಿಡವನ್ನು (Kaner flower) ನೆಟ್ಟು ಅದರ ಹೂವುಗಳಿಂದ ವಿಷ್ಣುವನ್ನು ಪೂಜಿಸುವುದರಿಂದ ಮನೆಯಲ್ಲಿ ಸಂತೋಷ ನೆಲೆಸುತ್ತದೆ. ಅಷ್ಟು ಮಾತ್ರವಲ್ಲ ಸಂಪತ್ತು ಹೆಚ್ಚುತ್ತದೆ. ಅಲ್ಲದೆ, ಯಾವುದೇ ಶುಭ ಕಾರ್ಯಗಳು ಅಡೆತಡೆಯಿಲ್ಲದೆ ನೆರೆವೇರುತ್ತದೆ.
ಈ ವಿಚಾರ ಕೂಡಾ ಸದಾ ನೆನಪಿನಲ್ಲಿರಲಿ :
ಕಣಗಿಲೆ ಸಸ್ಯಗಳು ಅನೇಕ ವಿಧದ ರೋಗಗಳಿಗೆ ಔಷಧವಾಗಿ ಕಾರ್ಯನಿರ್ವಹಿಸುತ್ತವೆ. ಆದರೆ ಅದರ ಹೂವುಗಳು ಮತ್ತು ಬೀಜಗಳು ವಿಷಕಾರಿ ಎನ್ನುವುದು ನೆನಪಿರಲಿ. ಆದ್ದರಿಂದ, ಅದನ್ನು ಚಿಕ್ಕ ಮಕ್ಕಳ ವ್ಯಾಪ್ತಿಯಿಂದ ಇದನ್ನು ದೂರವಿಡಬೇಕು .
ಇದನ್ನೂ ಓದಿ : Snakes Indications ಹಾವುಗಳಿಗೆ ಸಂಬಂಧಿಸಿದ ಶುಭ-ಅಶುಭ ಶಕುನಗಳ ಬಗ್ಗೆ ನಿಮಗೆ ತಿಳಿದಿದೆಯೇ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.