ಹಿಂದೂ ಧರ್ಮದಲ್ಲಿ ಶನಿ ಗ್ರಹಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಇದಕ್ಕೆ ಕಾರಣ ಶನಿಯನ್ನು ಕರ್ಮ ಫಲದಾತ ಎಂದು ಸಂಬೋಧಿಸುವುದು. ಶನಿ ಮನುಷ್ಯನ ಉತ್ತಮ ಮತ್ತು ಕೆಟ್ಟ ನಡತೆಗಳ ಆಧಾರದಲ್ಲಿ ಕರ್ಮಗಳನ್ನು ನೀಡುವವನು. ಹೀಗಾಗಿ ಶನಿಯನ್ನು ಪೂಜಿಸುವಾಗ ಬಹಳಷ್ಟು ಎಚ್ಚರಿಕೆ ವಹಿಸಲಾಗುತ್ತದೆ.


COMMERCIAL BREAK
SCROLL TO CONTINUE READING

ಇನ್ನು ಯಾರ ಮೇಲೆ ಶನಿಯ ವಕ್ರ ದೃಷ್ಟಿ ಬೀಳುತ್ತದೆಯೋ ಆ ವ್ಯಕ್ತಿ ಜೀವನದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸುತ್ತಾನೆ. ಆದರೆ ಈ ವರ್ಷ ಅಕ್ಟೋಬರ್ ತಿಂಗಳಿನಿಂದ ಕೆಲ ರಾಶಿಯ ಮೇಲೆ ಶನಿ ಮಹಾರಾಜ ಅದೃಷ್ಟದ ಸುರಿಮಳೆಗೈಯಲಿದ್ದಾನೆ. ಅಕ್ಟೋಬರ್ 23ರಿಂದ ಶನಿ ಗ್ರಹವು ಮಕರ ರಾಶಿಯಲ್ಲಿ ನೇರವಾಗಿ ಚಲಿಸಲು ಪ್ರಾರಂಭಿಸುತ್ತದೆ. ಹೀಗಾಗಿ ಕೆಲ ರಾಶಿಯವರ ಮೇಲೆ ಧನಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ.   


ಇದನ್ನೂ ಓದಿ: Mole on Body: ನಿಮ್ಮ ದೇಹದ ಈ ಭಾಗದಲ್ಲಿರುವ ಮಚ್ಚೆ ಹೇಳುತ್ತೆ ಜೀವನ ಸಂಗಾತಿಯ ಗುಟ್ಟು!


ಮೇಷ ರಾಶಿಯ ಜನರಿಗೆ ಈ ಬಾರಿ ಅದೃಷ್ಟದ ಸುರಿಮಳೆಯಾಗಲಿದೆ. ಶನಿಯು ನಿಮ್ಮ ರಾಶಿಯ ಹತ್ತನೇ ಮನೆಯಲ್ಲಿ ಕುಳಿತಿದ್ದಾನೆ. ಹೀಗಾಗಿ ನೀವು ವೃತ್ತಿ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸುತ್ತೀರಿ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲಿತಾಂಶವನ್ನು ಲಭಿಸಲಿದೆ. ಈ ರಾಶಿಚಕ್ರದ ಉದ್ಯಮಿಗಳು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಹೀಗೆ ಮಾಡಿದರೆ ಮಾತ್ರ ಯಶಸ್ಸು ಲಭಿಸುತ್ತದೆ.


ಇನ್ನು ಕಟಕ ರಾಶಿಯ ಜನರ ಮೇಲು ಶನಿಯ ಧನಾತ್ಮಕ ಪ್ರಭಾವ ಬೀಳಲಿದೆ. ಶನಿಯು ಏಳನೇ ಮನೆಯಲ್ಲಿ ಸಂಚಾರ ಮಾಡಲಿದ್ದು, ಅಕ್ಟೋಬರ್ 23ರ ನಂತರ ಅನೇಕ ಸಮಸ್ಯೆಗಳು ಪರಿಹಾರವಾಗುವ ಸಾಧ್ಯತೆಯಿದೆ. ವೈವಾಹಿಕ ಜೀವನ, ವೃತ್ತಿಗಳಲ್ಲಿ ಅಥವಾ ಇನ್ಯಾವುದೋ ಸಮಸ್ಯೆಗಳಿದ್ದರೆ ಈ ಸಮಯದಲ್ಲಿ ಬಗೆಹರಿಯುತ್ತದೆ. ಅಷ್ಟೇ ಅಲ್ಲದೆ, ಆರೋಗ್ಯದಲ್ಲೂ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ.


ತುಲಾ ರಾಶಿಯ ಜನರು ಶನಿಯ ಧೈಯಾ ಪ್ರಭಾವಕ್ಕೆ ಒಳಗಾಗುತ್ತಾರೆ. ಹೀಗಿದ್ದರೂ ಸಹ ಶನಿಯ ಪ್ರಭಾವ ಈ ರಾಶಿಯ ಜನರ ಮೇಲೆ ಸಕಾರಾತ್ಮಕವಾಗಿ ಬೀರುವುದರಿಂದ ಅನೇಕ ವಿಧಗಳಲ್ಲಿ ಮಂಗಳವಾಗಲಿದೆ. ಆರ್ಥಿಕ ಸಮಸ್ಯೆಗಳು, ಅನಾರೋಗ್ಯ ಮುಂತಾದ ಸಮಸ್ಯೆಗಳು ಈ ತಿಂಗಳ ಬಳಿಕ ನಿವಾರಣೆಯಾಗಲಿದೆ.  


ವೃಶ್ಚಿಕ ರಾಶಿಯ ಜನರ ಮೇಲೆ ಶನಿ ಸಂಕ್ರಮಣದ ಬಳಿಕ ಸಕಾರಾತ್ಮಕ ಅಂಶ ಬೀರಲು ಪ್ರಾರಂಭವಾಗುತ್ತದೆ. ಈ ತಿಂಗಳಲ್ಲಿ ಆದಾಯವೂ ಹೆಚ್ಚಳವಾಗಲಿದೆ. ದಾಂಪತ್ಯದಲ್ಲಿ ಸಮಸ್ಯೆಗಳಿದ್ದರೂ ಸಹ ಈ ಸಮಯದಲ್ಲಿ ನಿವಾರಣೆಯಾಗುತ್ತದೆ.


ಇದನ್ನೂ ಓದಿ: Budh Margi 2022 : ಬುಧ ಗ್ರಹದ ಸ್ಥಾನ ಪಲ್ಲಟ, ಎಚ್ಚರದಿಂದರಬೇಕು ಈ ರಾಶಿಯವರು, ಇಲ್ಲಿದೆ ಪರಿಹಾರಗಳು!


ಇನ್ನು ಶನಿಯ ಮಾರ್ಗವು ಮೀನ ರಾಶಿಯವರಿಗೆ ಮಂಗಳಕರವೆಂದು ಹೇಳಬಹುದು. ಏಕೆಂದರೆ ಶನಿಯು ನಿಮ್ಮ ರಾಶಿಯ ಲಾಭದಾಯಕ ಮನೆಯಲ್ಲಿರಲಿದ್ದಾನೆ. ಈ ಸಮಯದಲ್ಲಿ ನೀವು ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ. ಉತ್ತಮ ಬದಲಾವಣೆಗಳು ಈ ರಾಶಿಯವರ ಜೀವನದಲ್ಲಿ ಆಗಲಿದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.