Love Failure Tips : ಪ್ರೀತಿ ಅತ್ಯಂತ ಸುಂದರವಾದ ಭಾವನೆ. ಪ್ರೀತಿಯಲ್ಲಿದ್ದಾಗ, ಜಗತ್ತನ್ನೇ ಮರೆಯುತ್ತೇವೆ. ಅದೇನೋ ಅಂತಾರಲ್ಲ ʼಪ್ರೀತಿ ಕುರುಡು ಪ್ರೇಮಿ ಕುರುಡುʼ ಅಂತ ಹಾಗೆ, ಲವ್ ಒಂಥರಾ ಮ್ಯಾಜಿಕ್ ಇದ್ದಹಾಗೆ. ಗೆಳತಿ/ಗೆಳೆಯ ಜೊತೆ ಇದ್ದಾಗ ಸಂತೋಷ, ಕೈಕೊಟ್ರೆ ಸ್ವರ್ಗವೂ ನರಕ. ಲವ್ ಫೈಲ್ಯೂರ್ ಆದ್ರೆ ಜೀವನವೇ ಸಾಕು ಅನ್ಸತ್ತೆ ಅಷ್ಟು ಗಾಢ ಈ ಲವ್. ನಿಮಗೂ ಪ್ರೇಮ ವೈಫಲ್ಯ ಕಾಡುತ್ತಿದ್ದರೆ ಇಲ್ಲಿವೆ ನೋಡಿ ಸಲಹೆಗಳು.
ವಾಸ್ತವವನ್ನು ಒಪ್ಪಿಕೊಳ್ಳಿ : ಜೊತೆಗಿದ್ದ ಜೀವ ಇಂದು ನಮ್ಮ ಜೊತೆ ಇಲ್ಲ ಅಂದಾಗ ನೋವು ಸಹಜ. ಆದ್ರೆ, ನೀವು ಅದರಲ್ಲೇ ಕುಳಿತುಕೊಂಡ್ರೆ ಜೀವನ ಸಾಗದು. ನಾವು ವಾಸ್ತವವನ್ನು ಒಪ್ಪಿಕೊಂಡು ಅದರಿಂದ ಹೊರಬರಬೇಕು. ಬಂದೇ ಬರುತ್ತಾಳೆ/ ಬರುತ್ತಾನೆ ಎಂಬ ಸುಳ್ಳು ಭರವಸೆಗೆ ಅಂಟಿಕೊಳ್ಳಬೇಡಿ. ಅದರಿಂದ ಹೊರ ಬಂದು ಸಾಧನೆ ಕಡೆಗೆ ಹೆಜ್ಜೆ ಇಡಿ.
ಇದನ್ನೂ ಓದಿ: ಶಂಕಿತ ಉಗ್ರರ ಬಂಧನದಿಂದ ದೊಡ್ಡ ಅನಾಹುತ ತಪ್ಪಿದೆ..!
ಅವಳು/ಅವನನ್ನು ನೆನಪಿಸಿಕೊಳ್ಳುವುದು ಬಿಟ್ಟು ಬಿಡಿ : ನಿಮ್ಮ ಸಂಗಾತಿಯ ಬಗ್ಗೆ ಅತಿಯಾಗಿ ಯೋಚಿಸುವುದನ್ನು ಬಿಡಿ. ಸಂಬಂಧದಲ್ಲಿ ಬಿರುಕು ಬಂದಾಗ ದೂರವಾಗಲು ಕಾರಣಬೇಕಷ್ಟೆ. ಆದದ್ದು ಆಯ್ತು ಅಂತ ಸುಮ್ಮನಿದ್ದು ಬಿಡಿ. ಗಾಯ ಕೆದಕಿದಷ್ಟು ದೊಡ್ಡದಾಗುತ್ತದೆ. ಏನಾದರೊಂದು ಹೊಸತನ್ನು ಕಲಿಯಿರಿ ಡ್ರೈವಿಂಗ್, ಡ್ರಾಯಿಂಗ್, ಈಜು, ಪುಸ್ತಕ ಓದುವುದು ಹೀಗೆ ಹಲವಾರು ಹವ್ಯಾಸಗಳನ್ನು ಬೆಳೆಸಿಕೊಳ್ಳಿ ಆದಷ್ಟು ಬ್ಯುಸಿಯಾಗಿರಿ. ಮೆದುಳಿಗೆ ಕೆಲಸಕೊಡಿ ಅವಳ/ಅವನ ನೆನೆಪಿಗಲ್ಲ. ಹಾಗೆ ಯಾವುದೇ ಕಾರಣಕ್ಕೂ ದೂರವಾದ ನಿಮ್ಮ ಸಂಗಾತಿಯ ಮೇಲೆ ದ್ವೇಷ ಬೆಳೆಸಿಕೊಳ್ಳಬೇಡಿ.
ಇತರ ಸಂಬಂಧಗಳಿಗೆ ಆದ್ಯತೆ ನೀಡಿ : ಅವಳಿಲ್ಲ/ಅವನಿಲ್ಲ ಎಂದು ಮನೆಯ ಮೂಲೆಯಲ್ಲಿ ಕುಳಿತುಕೊಳ್ಳುವ ಬದಲು ತಂದೆ, ತಾಯಿ, ಸ್ನೇಹಿತರು, ಸಂಬಂಧಿಕರ ಜೊತೆ ಆದಷ್ಟು ಬೆರೆಯಲು ನೋಡಿ. ಸಾಧ್ಯವಾದ್ರೆ ನಿಮ್ಮನ್ನು ಯಾರು ಪ್ರೀತಿಸುತ್ತಾರೋ ಅವರೊಂದಿಗೆ ಸಮಯ ಕಳೆಯಿರಿ. ಯಾಕಂದ್ರೆ ಅವರ ಮಾತು ನಿಮ್ಮ ನೋವುಗಳಿಗೆ ಔಷದಿಯಂತೆ ಕೆಲಸ ಮಾಡುತ್ತದೆ. ಅವರಿಗೆ ನೀವೇನು ಅಂತ ಗೊತ್ತಿರುತ್ತದೆ. ಅವರು ನಿಮ್ಮ ಹಳೆಯ ಘಟನೆಗಳನ್ನು ನೆನೆಪಿಸಿ ಹೀಯಾಳಿಸುವುದಿಲ್ಲ. ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿ ಆದ್ರೆ ಬಾರ್‌ಗೆ ಅಲ್ಲ.
ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ : ಅಪಘಾತದಲ್ಲಿ ಕೈ, ಕಾಲು ಮುರಿದುಕೊಂಡವರು ನಮ್ಮ ದೇಹದ ಒಂದು ಭಾಗ ಇಲ್ಲ ಎಂದು ಯಾವತ್ತೂ ಮೂಲೆಯಲ್ಲಿ ಕೂರುವುದಿಲ್ಲ. ಇನ್ನೊಂದು ಮಾರ್ಗವನ್ನು ಹುಡುಕುತ್ತಾರೆ. ಹೌದು ಹೃದಯಕ್ಕೆ ನೋವಾದರೆ ಅದು ಸರಿಹೋಗಲು ಸಾಕಷ್ಟು ಸಮಯಬೇಕು. ಹಂತ ಹಂತವಾಗಿ ಇದು ಸಾಧ್ಯವಾಗುತ್ತದೆ. ಪರವಾಗಿಲ್ಲ ನಿಮ್ಮೊಂದಿಗೆ ನೀವು ಇದ್ದಿರಾ ನಿಮ್ಮನ್ನು ನಿಮ್ಮಷ್ಟು ಯಾರೂ ಪ್ರೀತಿಸಲಾರರು ಎಂದು ಅರಿತುಕೊಂಡು ನಡೆಯಿರಿ.
ನಿಮ್ಮನ್ನು ಪ್ರೀತಿಸುವವರನ್ನು ಪ್ರೀತಿಸಿ : ಕೆಲವೊಮ್ಮೆ ನಾವು ತಪ್ಪಾದ ಹೃದಯನ್ನು ಆಯ್ಕೆಮಾಡಿಕೊಂಡು ಅದೇ ನಮ್ಮದು ಅಂತ ಬಲವಾಗಿ ನಂಬಿ ಮೋಸ ಹೋಗುತ್ತೇವೆ. ನಾವು ಎಷ್ಟೇ ಪ್ರೀತಿ ಮಾಡಿದ್ರೂ ಸಹ ಅವರು ಅದನ್ನ ಟೈಮ್ ಪಾಸ್ ಆಗಿಯೇ ತೆಗೆದುಕೊಳ್ಳುತ್ತಾರೆ. ಪ್ರೀತಿಯಲ್ಲಿ ಹೆಚ್ಚು ಕಡಿಮೆ ಎನ್ನುವುದೇ ಇಲ್ಲ. ಪ್ರೀತಿ ಸಮುದ್ರದಷ್ಟಿರಬೇಕು ಅದರಲ್ಲಿ ನಂಬಿಕೆ ಉಪ್ಪಿನಂತಿರಬೇಕು. ಏಕಂದ್ರೆ ಯಾವತ್ತೂ ಸಮುದ್ರದಿಂದ ಉಪ್ಪನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಪ್ರೀತಿಸುವದಕ್ಕೂ ಮುಂಚೆ ಹಣ, ಸೌಂದರ್ಯ, ಮೈಮಾಟ ನೋಟದೆ ನಿಮ್ಮನ್ನ ಆ ಹೃದಯ ಎಷ್ಟು ಲವ್ ಮಾಡುತ್ತೇ ಅನ್ನೋದನ್ನ ಅರಿತುಕೊಳ್ಳಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.