ಬೆಂಗಳೂರು : ಕಳೆದ ಏಪ್ರಿಲ್‌ 29 ರಂದು ಶನಿಮಹಾತ್ಮನು ತನ್ನ ರಾಶಿಯನ್ನು  ಬದಲಾಯಿಸಿದ್ದಾನೆ. ಶನಿದೇವನು ರಾಶಿ ಬದಲಿಸಿ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಹೀಗೆ ಶನಿ ಗ್ರಹ ರಾಶಿ ಪರಿವರ್ತನೆ ಮಾಡಿದ ನಂತರ ಎರಡು ರಾಶಿಗಳ ಶನಿ ಧೈಯ್ಯಾ ಅಂದರೆ ಎರಡೂವರೆ ವರ್ಷಗಳ ಶನಿಕಾಟ ಕೊನೆಯಾಗಿತ್ತು. ಆದರೆ ಜುಲೈನಲ್ಲಿ ಶನಿ ಮತ್ತೆ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. 


COMMERCIAL BREAK
SCROLL TO CONTINUE READING

 ಶನಿಯ ರಾಶಿ ಪರಿವರ್ತನೆಯಿಂದ ಎರಡು ರಾಶಿಗಳ ಶನಿಯ ಧೈಯ್ಯಾ ಕೊನೆಯಾಗಿತ್ತು. ಹೌದು ಮಿಥುನ ಮತ್ತು ತುಲಾ ರಾಶಿಯವರು ಎರಡೂವರೆ ವರ್ಷದ ಶನಿ ಕಾಟದಿಂದ ಮುಕ್ತಿ ಪಡೆದಿದ್ದರು. ಆದರೆ ಈಗ ಜುಲೈನಿಂದ, ಶನಿಯು ಮತ್ತೆ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ಇದರಿಂದಾಗಿ ಈ ಎರಡೂ ರಾಶಿಯವರಿಗೆ ಮತ್ತೆ ಶನಿ ಕಾಟ ಆರಂಭವಾಗಲಿದೆ.  ಶನಿ ಮತ್ತೆ ಈ ಎರಡು ರಾಶಿಗಳ ಮೇಲೆ ತನ್ನ ಪ್ರಭಾವ ಬೀರಲಿದ್ದಾನೆ.  


ಇದನ್ನೂ ಓದಿ :  Shukra Rashi Parivartan: ಮೇ 23 ರಿಂದ ಬೆಳಗಲಿದೆ ಈ ಐದು ರಾಶಿಯವರ ಅದೃಷ್ಟ


ಶನಿಯ ಹಿಮ್ಮುಖ ಚಲನೆಯಿಂದಾಗಿ ಮಿಥುನ ಮತ್ತು ತುಲಾ ರಾಶಿಯವರ ಕರ್ಮಕ್ಕೆ ಅನುಸಾರವಾಗಿ ಶನಿ ಫಲಿತಾಂಶಗಳನ್ನು ನೀಡಲಿದ್ದಾನೆ.  ಶನಿಯು ರಾಶಿಚಕ್ರವನ್ನು ಎರಡು ಹಂತಗಳಲ್ಲಿ ಬದಲಾಯಿಸುತ್ತದೆ. ಶನಿ ದೆಸೆಯ ಸಂದರ್ಭದಲ್ಲಿ ವ್ಯಾಪಾರದಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಬೇಕು. ಈ ಸಮಯದಲ್ಲಿ ಹಣಕಾಸಿನ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ವೃತ್ತಿ ಮತ್ತು ಉದ್ಯೋಗದಲ್ಲಿ ಕೂಡಾ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಿಗುವುದಿಲ್ಲ. 


ಈ ರಾಶಿಯವರು ಶನಿವಾರದಂದು ಶನಿ ಪರಿಹಾರಗಳನ್ನು ಮಾಡಿದರೆ, ಈ ರಾಶಿಯವರಿಗೆ ವಿಶೇಷ ಲಾಭಗಳು ಸಿಗುತ್ತವೆ. ಶನಿ ಜಯಂತಿಯ ದಿನ ಶನಿದೇವಾಲಯದಲ್ಲಿ ಎಳ್ಳೆಣ್ಣೆ ದೀಪವನ್ನು ಹಚ್ಚಿ,  ದಾನ ಮಾಡುವುದರಿಂದ ಶನಿಯ ಅಶುಭ ಫಲಗಳು ಕಡಿಮೆಯಾಗುತ್ತವೆ. ಶನಿಜಯಂತಿಯಂದು ಮತ್ತು ಶನಿವಾರದಂದು ಬಡವರಿಗೆ ದಾನ ಮಾಡಬೇಕು. ಹೀಗೆ ಮಾಡುವುದರಿಂದ ಸಂಕಟಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ :  ಇಷ್ಟಾರ್ಥ ಸಿದ್ಧಿಗಾಗಿ ಸಂಕಷ್ಟಿ ಚತುರ್ಥಿಯ ದಿನ ದರ್ಬೆಯ ಈ ಪರಿಹಾರ ಮಾಡಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.