ಸಂಕಷ್ಟ ಚತುರ್ಥಿ 2022: ಗುರುವಾರ, ಮೇ 19 ರಂದು, ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಚತುರ್ಥಿಯ ದಿನದಂದು ಸಂಕಷ್ಟ ಚತುರ್ಥಿಯ ಉಪವಾಸವನ್ನು ಆಚರಿಸಲಾಗುತ್ತದೆ. ಈ ದಿನ ಭಕ್ತರು ಗಣೇಶನ ಆಶೀರ್ವಾದ ಪಡೆಯಲು ಪ್ರಾರ್ಥನೆ ಸಲ್ಲಿಸುತ್ತಾರೆ. ಭಕ್ತರು ಇಡೀ ದಿನ ಉಪವಾಸ ಮಾಡಿ ಗಣಪತಿಯನ್ನು ಪೂಜಿಸುತ್ತಾರೆ. ಈ ದಿನ ಗಣಪತಿಗೆ ಇಷ್ಟವಾದ ವಸ್ತುಗಳನ್ನು ಅರ್ಪಿಸಲಾಗುತ್ತದೆ. ಗಣೇಶನಿಗೆ ಇಷ್ಟವಾದ ವಸ್ತುಗಳನ್ನು ಅರ್ಪಿಸುವುದರಿಂದ ಇಷ್ಟಾರ್ಥಗಳು ಸಿದ್ಧಿಯಾಗಲಿವೆ. ಇದರಿಂದ ಗಣೇಶನು ಪ್ರಸನ್ನನಾಗುತ್ತಾನೆ ಮತ್ತು ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂದು ನಂಬಲಾಗಿದೆ.
ಗಣೇಶನಿಗೆ ಪ್ರಿಯವಾದ ವಸ್ತುಗಳು ಎಂದರೆ ಮೊದಲು ನೆನಪಾಗುವುದು ದೂರ್ವಾ ಅಥವಾ ದರ್ಬೆ. ಇದನ್ನು ಸಂಕಷ್ಟ ಚತುರ್ಥಿಯ ಪೂಜೆಯಲ್ಲಿ ವಿಶೇಷವಾಗಿ ಬಳಸಲಾಗುತ್ತದೆ. ದೂರ್ವಾವಿಲ್ಲದೆ ಗಣೇಶನ ಆರಾಧನೆಯು ಅಪೂರ್ಣವೆಂದು ಪರಿಗಣಿಸಲಾಗಿದೆ. ಇದರೊಂದಿಗೆ ಗೃಹಪ್ರವೇಶ, ಮುಂಡನ, ಮದುವೆ ಮುಂತಾದ ಶುಭ ಕಾರ್ಯಗಳಿಗೂ ದೂರ್ವಾವನ್ನು ಬಳಸಲಾಗುತ್ತದೆ. ಇದಲ್ಲದೆ, ದೂರ್ವಾವನ್ನು ಬುಧವಾರ ಮತ್ತು ಚತುರ್ಥಿಯ ಪೂಜೆಯಲ್ಲಿ ಬಳಸಲಾಗುತ್ತದೆ. ಹಾಗಾಗಿಯೇ ಸಂಕಷ್ಟ ಚತುರ್ಥಿಯ ದಿನದಂದು ದರ್ಬೆಯ ಕೆಲವು ಪರಿಹಾರಗಳನ್ನು ಮಾಡುವುದರಿಂದ ಜೀವನದಲ್ಲಿ ಎದುರಾಗುವ ಕಷ್ಟಗಳಿಂದ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ. ಜೊತೆಗೆ ಈ ಪರಿಹಾರಗಳ ಮೂಲಕ ಭಕ್ತರ ಮನೋಕಾಮನೆಗಳೂ ಈಡೇರುತ್ತವೆ ಎಂದು ನಂಬಲಾಗಿದೆ. ಹಾಗಿದ್ದರೆ ಸಂಕಷ್ಟಹರ ಚತುರ್ಥಿ ದಿನದಂದು ಕೈಗೊಳ್ಳಬೇಕಾದ ದರ್ಬೆಯ ಪರಿಹಾರಗಳು ಯಾವುವು ಎಂದು ತಿಳಿಯೋಣ...
ಇದನ್ನೂ ಓದಿ- Vastu Tips: ಹಣ ಎಣಿಸುವಾಗ ಈ ತಪ್ಪುಗಳಾಗದಂತೆ ನಿಗಾವಹಿಸಿ
ಸಂಕಷ್ಟಿ ಚತುರ್ಥಿಯ ದಿನದಂದು ದೂರ್ವಾ ಪರಿಹಾರಗಳು :-
- ನೀವು ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದರೆ ಮತ್ತು ನಿಮ್ಮ ಬಳಿ ಹಣವಿಲ್ಲದಿದ್ದರೆ, ನೀವು ಗಣೇಶ ಚತುರ್ಥಿಯಂದು ಅಥವಾ ಯಾವುದೇ ಮಂಗಳಕರ ಸಮಯದಲ್ಲಿ 21 ದರ್ಬೆಯನ್ನು ದಾರದಲ್ಲಿ ಕಟ್ಟಿ ಗಣೇಶನಿಗೆ ಮತ್ತು 5 ದರ್ಬೆಯನ್ನು ಕಟ್ಟಿ ತಾಯಿ ಲಕ್ಷ್ಮಿಗೆ ಅರ್ಪಿಸಬೇಕು. ಹೀಗೆ ಮಾಡುವುದರಿಂದ ಆರ್ಥಿಕ ಬಿಕ್ಕಟ್ಟಿನಿಂದ ಬೇಗ ಮುಕ್ತರಾಗುತ್ತಾರೆ ಎಂಬ ನಂಬಿಕೆ ಇದೆ.
- ಮನದ ಆಸೆ ಈಡೇರಲು ದರ್ಬೆಯನ್ನು ಹಸುವಿನ ಹಾಲಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿ ಹಣೆಗೆ ತಿಲಕವನ್ನಿಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಆಸೆ ಬೇಗನೇ ಈಡೇರುತ್ತದೆ.
- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮನೆಯ ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕಲು ಹಸುವಿಗೆ ದೂರ್ವೆಯ ಹಸಿರು ಹುಲ್ಲನ್ನು ತಿನ್ನಿಸಿ. ಹೀಗೆ ಮಾಡುವುದರಿಂದ ಪ್ರೀತಿಯ ಭಾವನೆ ಹೆಚ್ಚುತ್ತದೆ.
ಇದನ್ನೂ ಓದಿ- ಜ್ಯೇಷ್ಠ ಮಾಸದ ಮೊದಲ ಉಪವಾಸ ಯಾವಾಗ? ದಿನಾಂಕ, ಪೂಜೆ ಮುಹೂರ್ತ ಮತ್ತು ಮಹತ್ವ ತಿಳಿಯಿರಿ
- ಆರ್ಥಿಕ ಲಾಭಕ್ಕಾಗಿ ಗಣೇಶ ಚತುರ್ಥಿಯ ದಿನದಂದು ಅಥವಾ ಬುಧವಾರದಂದು ಗಣೇಶನಿಗೆ 11 ಅಥವಾ 12 ದರ್ಬೆಯನ್ನು ಅರ್ಪಿಸಿ. ಆದರೆ ದರ್ಬೆಯು ಜೋಡಿಯಾಗಿರಬೇಕೆಂಬುದರ ಬಗ್ಗೆ ವಿಶೇಷ ಕಾಳಜಿ ವಹಿಸಿ. ಹೀಗೆ ಮಾಡುವುದರಿಂದ ಗಣೇಶನ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗುತ್ತದೆ.
- ಗಣೇಶನ ಪೂಜೆಯಲ್ಲಿ ದೂರ್ವಾವನ್ನು ಬಳಸುವುದರಿಂದ ಕುಬೇರನಿಗೆ ಸಮಾನವಾದ ಸಂಪತ್ತು ಸಿಗುತ್ತದೆ ಎಂದು ನಂಬಲಾಗಿದೆ.
- ಬುಧವಾರ ಅಥವಾ ಚತುರ್ಥಿಯಂದು ಗಣೇಶನ ದೇವಸ್ಥಾನದಲ್ಲಿ 11 ದರ್ಬೆಯನ್ನು ದಾರದಲ್ಲಿ ಕಟ್ಟಿ ಅರ್ಪಿಸಿ. ಇದರಿಂದ ಗಣಪತಿಯು ಪ್ರಸನ್ನನಾಗುತ್ತಾನೆ ಮತ್ತು ಬುಧ ದೋಷ ನಿವಾರಣೆಯಾಗುತ್ತದೆ. ಗಣೇಶನಿಗೆ ದರ್ಬೆಯನ್ನು ಅರ್ಪಿಸಲು ಅದನ್ನು ಶುದ್ಧವಾದ ಸ್ಥಳದಿಂದ ತಂದಿರಬೇಕು ಎಂಬುದನ್ನು ನೆನಪಿನಲ್ಲಿಡಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.