Shani Mantra Jaap: ಶನಿದೇವನ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಜೋತಿಷ್ಯ ಶಾಸ್ತ್ರದಲ್ಲಿ  ಶನಿವಾರದ ದಿನ ಮಾಡಬೇಕಾದ ಕೆಲ ಉಪಾಯಗಳನ್ನು ಸೂಚಿಸಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಶನಿದೇವನ ಪೂಜೆ ಪುನಸ್ಕಾರ ಹಾಗೂ ಆತನಿಗೆ ಸಂಬಂಧಿಸಿದ ಕೆಲಸ-ಕಾರ್ಯಗಳನ್ನು ಮಾಡಿದರೆ ಶನಿದೋಷದಿಂದ ಮುಕ್ತಿ ಸಿಗುತ್ತದೆ ಎನ್ನಲಾಗಿದೆ. ಅಷ್ಟೇ ಅಲ್ಲ ಶನಿಯ ಎರಡೂವರೆ ವರ್ಷಗಳ ಕಾಟ ಹಾಗೂ ಸಾಡೆಸಾತಿ ಇಂದ ಕೂಡ ಮುಕ್ತಿ ಸಿಗುತ್ತದೆ. ಶನಿಗೆ ಪೂಜೆ ಸಲ್ಲಿಸುವಾಗ ಕೆಲ ನಿಯಮಗಳ ಪಾಲಿಸಬೇಕು ಎಂದು ಜೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಪೂಜೆಯ ಅವಧಿಯಲ್ಲಿ ಕರಿ ಎಳ್ಳು, ಸಾಸಿವೆ ಎಣ್ಣೆ ಹಾಗೂ ನೀಲಿ ಹೂವುಗಳ ವಿಶೇಷ ಮಹತ್ವವಿದೆ. ಶನಿಯ ಮಹಾದೆಸೆಯನ್ನು ಎದುರಿಸುತ್ತಿರುವವರು, ಶನಿವಾರದ ದಿನ ಉಪವಾಸ ವ್ರತ ಪಾಲಿಸಬೇಕು ಎಂದು ಸಲಹೆ ನೀಡಲಾಗಿದೆ.


COMMERCIAL BREAK
SCROLL TO CONTINUE READING

ಶಾಸ್ರಗಳಲ್ಲಿ ಶನಿದೇವನನ್ನು ನ್ಯಾಯದ ದೇವರು ಹಾಗೂ ಕರ್ಮ ಫಲದಾತ ಎಂದು ಕರೆಯಲಾಗಿದೆ. ವ್ಯಕ್ತಿಗಳ ಒಳ್ಳೆಯ  ಹಾಗೂ ಕೆಟ್ಟ ಕರ್ಮಗಳ ಆಧಾರದ ಮೇಲೆ ಶನಿ ಫಲಗಳನ್ನು ದಯಪಾಲಿಸುತ್ತಾನೆ. ಶನಿದೇವನನ್ನು ಪ್ರಸನ್ನಗೊಳಿಸಲು ಮತ್ತು ಆತನ ಕೃಪೆ ಪಡೆಯಲು ಶನಿವಾರದ ದಿನ ಪೂಜೆ ಪುನಸ್ಕಾರದ ಜೊತೆಗೆ ವ್ರತ ಹಾಗೂ ಶನಿ ಮಂತ್ರ ಜಪಿಸುವುದು ಉತ್ತಮ ಎಂದು ಸಲಹೆ ನೀಡಲಾಗುತ್ತದೆ ಮತ್ತು ಇದರಿಂದ ವಿಶೇಷ ಲಾಭ ಸಿಗುತ್ತವೆ. ಇಂದು ಶನಿಶ್ಚರಿ ಅಮಾವಾಸ್ಯೆ ಇರುವ ಕಾರಣ ಇಂದಿನ ದಿನ ತುಂಬಾ ವಿಶೇಷವಾಗಿದೆ. ಹೀಗಾಗಿ ಇಂದು ನಿಮ್ಮ ನಿಮ್ಮ ರಾಶಿಗಳಿಗೆ ಅನುಗುಣವಾಗಿ ಈ ಮಂತ್ರಗಳನ್ನು  ಜಪಿಸಿದರೆ, ಅವು ವಿಶೇಷ ಫಲದಾಯಿ ಸಾಬೀತಾಗುತ್ತವೆ.


ರಾಶಿಗಳಿಗೆ ಅನುಗುಣವಾಗಿ ಇಂದು ಶನಿದೇವನ ಈ ಮಂತ್ರಗಳನ್ನು ಜಪಿಸಿ
>> ಮೇಷ-
ಓಂ ಶಾಂತಾಯೆನಮಃ
>> ವೃಷಭ- ಓಂ ವರೆಣ್ಣಾಯೆನಮಃ
>> ಮಿಥುನ- ಓಂ ಮಂದಾಯೆನಮಃ
>> ಕರ್ಕ- ಓಂ ಸುಂದರಾಯನಮಃ
>> ಸಿಂಹ- ಓಂ ಸೂರ್ಯಪುತ್ರಯನಮಃ
>> ಕನ್ಯಾ- ಓಂ ಮಹನೀಯಗುಣಾತ್ಮನೆನಮಃ
>> ತುಲಾ- ಓಂ ಛಾಯಾಪುತ್ರಾಯನಮಃ
>> ವೃಶ್ಚಿಕ- ಓಂ ನೀಲವರ್ಣಾಯನಮಃ 
>> ಧನು- ಓಂ ಘನಸಾರವಿಲೋಪಾಯನಮಃ
>> ಮಕರ- ಓಂ ಶರ್ವಾಯನಮಃ 
>> ಕುಂಭ- ಓಂ ಮಹೇಶಾಯನಮಃ 
>> ಮೀನ- ಓಂ ಸುಂದರಾಯನಮಃ


ರಾಶಿಗೆ ಅನುಗುಣವಾಗಿ ಶನಿದೇವನ ಈ ಉಪಾಯಗಳನ್ನು ಮಾಡಿ
ಮೇಷ ರಾಶಿ-
ಮನೆಯಲ್ಲಿಯೇ ಶಿವನಿಗೆ ರುದ್ರಾಭಿಷೇಕ ಮಾಡಿ.


ವೃಷಭ ರಾಶಿ- ಈ ದಿನ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿ.


ಮಿಥುನ ರಾಶಿ- ಮಹಾರಾಜ ದಶರಥ ಬರೆದ ನೀಲ ಶನಿ ಸ್ತೋತ್ರವನ್ನು ಪಠಿಸುವುದರಿಂದ ವಿಶೇಷ ಲಾಭ ದೊರೆಯುತ್ತದೆ.


ಕರ್ಕ ರಾಶಿ- ಇಂದು ನೆರಳು ದಾನ ಮಾಡಿ. ಕಬ್ಬಿಣದ ಬಟ್ಟಲಿನಲ್ಲಿ ಸಾಸಿವೆ ಎಣ್ಣೆಯನ್ನು ತುಂಬಿಸಿ ಮತ್ತು ನಿಮ್ಮ ಮುಖವನ್ನು ಅದರಲ್ಲಿ ನೋಡಿ. ನಂತರ ಬಟ್ಟಲಿನ ಸಮೇತ ಎಣ್ಣೆಯನ್ನು ದಾನ ಮಾಡಿ.


ಸಿಂಹ ರಾಶಿ- ಕಪ್ಪು ಎಳ್ಳು ಮತ್ತು ಪೂರ್ಣ ಪ್ರಮಾಣದ ಉದ್ದಿನ ಬೇಳೆ ದಾನ ಮಾಡುವುದರಿಂದ ಶನಿದೇವನ ಆಶೀರ್ವಾದ ಲಭಿಸುತ್ತದೆ.


ಕನ್ಯಾ ರಾಶಿ- ಶನಿ ದೇವನ ಬೀಜ ಮಂತ್ರವಾಗಿರುವ 'ಓಂ ಪ್ರಾಂ ಪ್ರಿಂ ಪ್ರೌಂ ಸಃ ಶನೈಸ್ಚರಾಯನಮಃ ನಿಯಮಿತವಾಗಿ ಪಠಿಸುವುದರಿಂದ ಶನಿದೇವನ ಆಶೀರ್ವಾದ ಸಿಗುತ್ತದೆ.


ತುಲಾ ರಾಶಿ- ಶಮಿ ವೃಕ್ಷಕ್ಕೆ ನಿಯಮಿತವಾಗಿ ನೀರು ಕೊಡುವುದರಿಂದ ಶನಿದೇವನ ಕೃಪಾವೃಷ್ಟಿಯಾಗುತ್ತದೆ.


ವೃಶ್ಚಿಕ ರಾಶಿ - ಶನಿವಾರ ಅಥವಾ ನಿಯಮಿತವಾಗಿ ಬಡವರಿಗೆ ಮತ್ತು ನಿರ್ಗತಿಕರಿಗೆ ಸಾಧ್ಯವಾದಷ್ಟು ಸಹಾಯ ಮಾಡಿ.


ಧನು ರಾಶಿ- ಶನಿ ಅಮಾವಾಸ್ಯೆ, ಶನಿವಾರ ಅಥವಾ ಶನಿ ಜಯಂತಿಯಂದು ಇರುವೆಗಳಿಗೆ ಸಕ್ಕರೆ ಅಥವಾ ಗೋಧಿ ಹಿಟ್ಟನ್ನು ನೀಡುವುದು ಶುಭ ಫಲಿತಾಂಶಗಳನ್ನು ನೀಡುತ್ತದೆ.


ಮಕರ ರಾಶಿ- ಮಹಾರಾಜ ದಶರಥ ಬರೆದ ನೀಲ ಶನಿ ಸ್ತೋತ್ರವನ್ನು ಪಠಿಸಿ.


ಕುಂಭ ರಾಶಿ- ಜ್ಯೋತಿಷ್ಯ ಪಂಡಿತರ ಸಲಹೆ ಪಡೆದು ಈ ರಾಶಿಯ ಜನರು ಶನಿಯ ನಕ್ಷತ್ರಗಳು ಮತ್ತು ಶನಿಯ ಹೋರಾಗಾಗಿ ಉತ್ತಮ ಗುಣಮಟ್ಟದ ನೀಲಮಣಿಯನ್ನು ಧರಿಸಬೇಕು.


ಇದನ್ನೂ ಓದಿ-ಕಿಚನ್ ನಲ್ಲಿರುವ ಈ ವಸ್ತು ಮನೆಗೆ ಸಮೃದ್ಧಿ ತರುತ್ತದೆ: ಅದಕ್ಕೆ ನೀವು ಮಾಡಬೇಕಾಗಿರೋದು ಸಣ್ಣ ಕಾರ್ಯ


ಮೀನ ರಾಶಿ- ಚಿಕ್ಕ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಮತ್ತು ಧಾರ್ಮಿಕ ಸ್ಥಳದ ಮುಖ್ಯ ದ್ವಾರವನ್ನು ಶುಚಿಗೊಳಿಸುವುದು ವಿಶೇಷ ಪ್ರಯೋಜನಗಳನ್ನು ನೀಡುತ್ತದೆ.


ಇದನ್ನೂ ಓದಿ-ಎಂತಹವರನ್ನೇ ಆದರೂ ತಮ್ಮತ್ತ ಆಕರ್ಷಿಸುತ್ತಾರೆ ಈ 4 ರಾಶಿಯ ಜನ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.