ಫ್ರಿಜ್ ನಲ್ಲಿಟ್ಟರೆ ಸಾರ ಕಳೆದುಕೊಳ್ಳುತ್ತವೆ ಈ ಹಣ್ಣುಗಳು
Fruits You Should Never Refrigerate: ಕೆಲವೊಂದು ಹಣ್ಣುಗಳನ್ನು ಫ್ರಿಜ್ ನಲ್ಲಿಟ್ಟರೆ ಅವುಗಳು ಸಾರವನ್ನೇ ಕಳೆದುಕೊಳ್ಳುತ್ತವೆ. ಈ ಹಣ್ಣುಗಳಲ್ಲಿರುವ ಎಲ್ಲಾ ಪೋಷಕಾಂಶಗಳು ನಾಶವಾಗುತ್ತವೆ. ನಂತರ ಅವುಗಳನ್ನು ತಿಂದರೂ ಕೂಡಾ ದೇಹಕ್ಕೆ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ.
Fruits You Should Never Refrigerate : ತರಕಾರಿಗಳಂತೆ ಒಂದಷ್ಟು ಹಣ್ಣುಗಳನ್ನು ಕೂಡಾ ಒಟ್ಟಿಗೆ ಖರೀದಿಸುವ ಅಭ್ಯಾಸ ಸಾಮಾನ್ಯವಾಗಿ ಬಹುತೇಕರಿಗೆ ಇರುತ್ತದೆ. ಖರೀದಿಸುವುದು ಮಾತ್ರವಲ್ಲ, ತರಕಾರಿಗಳಂತೆ ಆ ಹಣ್ಣುಗಳನ್ನು ಕೂಡಾ ಫ್ರಿಜ್ ನಲ್ಲಿ ಇಡಲಾಗುತ್ತದೆ. ಬೇಗನೆ ಕೆಡಬಾರದು ಎನ್ನುವ ಕಾರಣಕ್ಕೆ ಹಣ್ಣುಗಳನ್ನು ಕೂಡಾ ಫ್ರಿಜ್ ನಲ್ಲಿಡಲಾಗುತ್ತದೆ. ಆದರೆ ಇದು ಅತ್ಯಂತ ಕೆಟ್ಟ ಹವ್ಯಾಸ. ಫ್ರೆಶ್ ಇರಲಿ ಎನ್ನುವ ಕಾರಣಕ್ಕೆ ಕೆಲವೊಂದು ಹಣ್ಣುಗಳನ್ನು ಫ್ರಿಜ್ ನಲ್ಲಿಟ್ಟರೆ ಅವುಗಳು ಸಾರವನ್ನೇ ಕಳೆದುಕೊಳ್ಳುತ್ತವೆ. ಈ ಹಣ್ಣುಗಳಲ್ಲಿರುವ ಎಲ್ಲಾ ಪೋಷಕಾಂಶಗಳು ನಾಶವಾಗುತ್ತವೆ. ನಂತರ ಅವುಗಳನ್ನು ತಿಂದರೂ ಕೂಡಾ ದೇಹಕ್ಕೆ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ.
ಈ ಹಣ್ಣುಗಳನ್ನು ಯಾವ ಕಾರಣಕ್ಕೂ ಫ್ರಿಜ್ ನಲ್ಲಿಡಬಾರದು:
1. ಬಾಳೆಹಣ್ಣು :
ಬಾಳೆಹಣ್ಣನ್ನು ಕೋಣೆಯ ಉಷ್ಣಾಂಶದಲ್ಲಿ ಇಡುವುದೇ ಉತ್ತಮ, ಬಾಳೆ ಹಣ್ಣನ್ನು ರೆಫ್ರಿಜಿರೇಟರ್ ನಲ್ಲಿ ಇರಿಸಿದರೆ, ಅದು ಕಪ್ಪು ಬಣ್ಣಕ್ಕೆ ತಿರುಗಿ ಬೇಗನೆ ಹಾಳಾಗುತ್ತದೆ. ಈ ಹಣ್ಣಿನಿಂದ ಎಥಿಲೀನ್ ಅನಿಲ ಬಿಡುಗಡೆಯಾಗುತ್ತದೆ.
ಇದನ್ನೂ ಓದಿ : ಕಿಡ್ನಿ ಸ್ಟೋನ್ ರೋಗಿಗಳು ತಪ್ಪಿಯೂ ಈ 5 ಹಣ್ಣುಗಳನ್ನು ಸೇವಿಸಬಾರದು
2. ಸೇಬು :
ಸೇಬು ತುಂಬಾ ರುಚಿಕರವಾದ ಮತ್ತು ಪೌಷ್ಟಿಕಾಂಶ ಹೊಂದಿರುವ ಹಣ್ಣು. ಸೇಬು ಹಣ್ಣನ್ನು ಫ್ರಿಜ್ ನಲ್ಲಿ ಇರಿಸಿದರೆ, ಅದರ ಪೋಷಕಾಂಶಗಳು ಮರೆಯಾಗುತ್ತವೆ. ರೆಫ್ರಿಜರೇಟರ್ ನಲ್ಲಿ ಈ ಹಣ್ಣನ್ನು ಇರಿಸಲೇ ಬೇಕು ಎನ್ನುವುದು ಅನಿವಾರ್ಯವಾದರೆ ಮೊದಲು ಹಣ್ಣನ್ನು ಪೇಪರ್ ನಲ್ಲಿ ಸುತ್ತಿ ನಂತರ್ ಫ್ರಿಜ್ ನಲ್ಲಿದುವುದು ಸೂಕ್ತ.
3. ಕಲ್ಲಂಗಡಿ :
ಕಲ್ಲಂಗಡಿಯಲ್ಲಿ ನೀರಿನ ಅಂಶ ಅಧಿಕವಾಗಿರುತ್ತದೆ. ಇದು ದೇಹವನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ. ಈ ಹಣ್ಣನ್ನು ಫ್ರಿಜ್ ನಲ್ಲಿಟ್ಟರೆ ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಮತ್ತು ಪೋಷಕಾಂಶಗಳು ನಾಶವಾಗುತ್ತವೆ.
4. ಲಿಚಿ :
ಲಿಚಿಯನ್ನು ಕೂಡಾ ಫ್ರಿಡ್ಜ್‌ನಲ್ಲಿಟ್ಟರೆ ಅದು ಒಳಗಿನಿಂದಲೇ ಕರಗಲು ಪ್ರಾರಂಭಿಸುತ್ತದೆ. ಹೀಗಾದಾಗ ಹಣ್ಣಿನಲ್ಲಿರುವ ಎಲ್ಲಾ ಪೋಷಕಾಂಶಗಳು ಕಣ್ಮರೆಯಾಗುತ್ತವೆ. ಆದ್ದರಿಂದ ಈ ಹಣ್ಣನ್ನು ಖರೀದಿಸುವಾಗ ಒಂದು ದಿನಕ್ಕೆ ಎಷ್ಟು ತಿನ್ನಬಹುದು ಅಷ್ಟು ಮಾತ್ರ ಖರೀದಿಸಿ ತನ್ನಿ.
ಇದನ್ನೂ ಓದಿ : ನಿತ್ಯ ಮೊಟ್ಟೆ ಸೇವಿಸಿದರೂ ಬರುವುದು ಹಾರ್ಟ್ ಅಟ್ಯಾಕ್ .! ಸಂಶೋಧನೆಯಿಂದ ಬಹಿರಂಗವಾಯಿತು ಮಾಹಿತಿ
5.ಮಾವಿನ ಹಣ್ಣು :
ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣನ್ನು ತಿನ್ನದಿದ್ದರೆ ಸೀಸನ್ ಅಪೂರ್ಣ ಎನಿಸುತ್ತದೆ. ಮಾವಿನ ಹಣ್ಣುಗಳು ಬೇಗನೆ ಹಣ್ಣಾದರೆ ಕೆಡುತ್ತದೆ. ಹಾಗಂತ ಫ್ರಿಜ್ ನಲ್ಲಿಟ್ಟರೆ ಹಣ್ಣು ತಿಂದರೂ ಪ್ರಯೋಜನವಾಗುವುದಿಲ್ಲ. ಮಾವಿನಹಣ್ಣನ್ನು ಫ್ರಿಜ್ ನಲ್ಲಿಟ್ಟರೆ ಅದರಲ್ಲಿರುವ ಪೋಷಕಾಂಶಗಳು ಮತ್ತು ಆಂಟಿಆಕ್ಸಿಡೆಂಟ್‌ಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ. ಈ ಹಿನ್ನೆಲೆಯಲ್ಲಿ ಮಾವಿನಹಣ್ಣನ್ನು ಕೂಡಾ ಫ್ರಿಜ್ ನಲ್ಲಿಟ್ಟು ತಿನ್ನಬಾರದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.