ನವದೆಹಲಿ : ಮಧುಮೇಹ ಅಥವಾ ಡಯಾಬಿಟಿಸ್ (Diabetes) ಇರುವವರು ಏನು ತಿನ್ನಬೇಕು ಏನು ತಿನ್ನಬಾರದು ಎಂಬ  ಸಂದಿಗ್ಧತೆ ಯಾವಾಗಲೂ ಇರುತ್ತದೆ. ಕೆಲವರು ತುಪ್ಪ, ಎಣ್ಣೆ ಮತ್ತು ಮಸಾಲೆಗಳನ್ನು ಆಹಾರದಿಂದ ಕೈ ಬಿಡುವಂತೆ ಶಿಫಾರಸು ಮಾಡುತ್ತಾರೆ. ಇನ್ನು ಕೆಲವರು, ತುಪ್ಪದ (Desi Ghee) ಬಳಕೆಯನ್ನು ನಿಲ್ಲಿಸಿಯೇ ಬಿಡಬೇಕು ಎಂದು ಹೇಳುತ್ತಾರೆ. ಹಾಗಿದ್ದರೆ ನಿಜವಾಗಿಯೂ ಏನು ಮಾಡಬೇಕು? ಮಧುಮೇಹ ಇರುವವರು ತುಪ್ಪವನ್ನು ಸೇವಿಸಬೇಕೇ ಅಥವಾ ಬೇಡವೇ ತಜ್ಞರು ಏನು ಹೇಳುತ್ತಾರೆ ನೋಡೋಣ. 


COMMERCIAL BREAK
SCROLL TO CONTINUE READING

ತುಪ್ಪ ಸೇವಿಸಿದರೆ ಸಕ್ಕರೆ ಮಟ್ಟ ನಿಯಂತ್ರನದಲ್ಲಿರುತ್ತದೆ : 
ಆಹಾರ ತಜ್ಞರ ಪ್ರಕಾರ, ದೇಸಿ ತುಪ್ಪದಲ್ಲಿ (Ghee)  ಆರೋಗ್ಯಕರ ಕೊಬ್ಬು ಇದ್ದು ಅದು ನಿಮ್ಮ ಆಹಾರದಲ್ಲಿರುವ ಪೋಷಕಾಂಶಗಳನ್ನು ನಾಶಮಾಡಲು ಬಿಡುವುದಿಲ್ಲ. ಈ ಪ್ರಕ್ರಿಯೆಯಿಂದಾಗಿ, ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ (Blood Sugar Level)  ಬರುತ್ತದೆ. ಅಂದರೆ, ಮಧುಮೇಹಿ ರೋಗಿಗಳು ತಮ್ಮ ಆಹಾರದಲ್ಲಿ ದೇಸಿ ತುಪ್ಪವನ್ನು ತೆಗೆದುಕೊಳ್ಳಬಹುದು. ಆದರೆ ಅದರ ಪ್ರಮಾಣವು ಅತಿಯಾಗಿರಬಾರದು. ಸೂಕ್ತ ಕಾಳಜಿ ವಹಿಸಿ ತುಪ್ಪವನ್ನು ಬಳಸಿದರೆ, ಯಾವ ರೀತಿಯ ಕೆಟ್ಟ ಪರಿಣಾಮವೂ ಬೀರುವುದಿಲ್ಲ. 


ಇದನ್ನೂ ಓದಿ : Spinach Benefits: ಈ ಅದ್ಬುತ ಪ್ರಯೋಜನಗಳಿಗಾಗಿಯೇ ಊಟದಲ್ಲಿರಬೇಕು ಪಾಲಕ್


ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿರುತ್ತದೆ :
ಅಷ್ಟೇ ಅಲ್ಲ, ದೇಸಿ ತುಪ್ಪವನ್ನು ಸೇವಿಸಿದರೆ,  ದೇಹದ ಕೊಲೆಸ್ಟ್ರಾಲ್ ಮಟ್ಟವೂ (Cholesterol Level) ನಿಯಂತ್ರಣದಲ್ಲಿರುತ್ತದೆ. ಅಲ್ಲದೆ, ಕರುಳಿನ ಹಾರ್ಮೋನುಗಳ (Gut hormones) ಕಾರ್ಯನಿರ್ವಹಣೆ ಉತ್ತಮವಾಗಿರುತ್ತದೆ. ಇದು ಮಧುಮೇಹವನ್ನು ನಿಯಂತ್ರಣದಲ್ಲಿರಿಸುತ್ತದೆ. ಅನೇಕ ಆಹಾರ ತಜ್ಞರ ಪ್ರಕಾರ, ದೇಸಿ ತುಪ್ಪದ ಬಳಕೆಯು ಪ್ರಯೋಜನಕಾರಿಯಾಗಿದೆ. 


ಅಡುಗೆಯಲ್ಲಿ ಎಣ್ಣೆಯ ಬಳಕೆ ನಿಲ್ಲಿಸುವುದು ಸೂಕ್ತ : 
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೀವು ಸಂಸ್ಕರಿಸಿದ ಅಥವಾ ಯಾವುದೇ ರೀತಿಯ ಎಣ್ಣೆಯನ್ನು (Cooking oil) ಬಳಸುವಂತಿಲ್ಲ. ಒಂದು ವೇಳೆ ನೀವೇನಾದರೂ ಹೀಗೆ ಮಾಡಿದರೆ ಸಮಸ್ಯೆ ಎದುರಾಗಬಹುದು. ಮಧುಮೇಹ ರೋಗಿಗಳು ಅಡುಗೆ ಎಣ್ಣೆಯನ್ನು ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಎಣ್ಣೆಯ ಬದಲು ತುಪ್ಪವನ್ನು ಬಳಸುವುದು ಸೂಕ್ತ.  


ಇದನ್ನೂ ಓದಿ : Benefits of Fennel with Milk : ಪ್ರತಿದಿನ ಒಂದು ಚಿಟಿಕೆ ಸೊಂಪುನ್ನ ಹಾಲಿನೊಂದಿಗೆ ಬೆರೆಸಿ ಕುಡಿಯಿರಿ, ಈ ರೋಗಗಳಿಂದ ದೂರವಿರಿ!


ಒಂದು ದಿನಕ್ಕೆ ಎಷ್ಟು ತುಪ್ಪ ತಿನ್ನಬಹುದು ?
ಮಧುಮೇಹ ಹೊಂದಿರುವ ರೋಗಿಗಳು ಹೆಚ್ಚುವರಿ ಕೊಬ್ಬನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಕೆಲವರು ಅಡುಗೆಗೆ ಬಳಸಿರುವ ಹೊರತಾಗಿಯೂ, ಉಟಕ್ಕೆ ಕುಳಿತುಕೊಳ್ಳುವಾಗ, ಹೆಚ್ಚುವರಿಯಾಗಿ ತುಪ್ಪವನ್ನು ಬಳಸುತ್ತಾರೆ. ನೀವು ಮಧುಮೇಹ ರೋಗಿಯಾಗಿದ್ದರೆ, ಹಾಗೆ ಮಾಡುವುದನ್ನು ತಪ್ಪಿಸಿ. ದೇಸಿ ತುಪ್ಪವು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಹೌದು. ಹಾಗಂತ ಅತಿಯಾಗಿ ಸೇವಿಸುವುದು ಸಲ್ಲದು. ಒಂದು ದಿನಕ್ಕೆ ಎರಡು ಚಮಚಕ್ಕಿಂತ ಹೆಚ್ಚು ತುಪ್ಪವನ್ನು ಸೇವಿಸಬಾರದು.


ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆ :
ತುಪ್ಪದಲ್ಲಿ ವಿಟಮಿನ್‌ಗಳು ಮತ್ತು ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸುತ್ತದೆ. ಇದು ಮಧುಮೇಹದ ಅಪಾಯವನ್ನು ಕಡಿಮೆ ಮಾಡುವುದರ ಜೊತೆಗೆ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.