Foods That Responsible For Baldness : ಹಿಂದಿನ ಕಾಲದಲ್ಲಿ ವಯಸ್ಸಾದಂತೆ ತಲೆ ಕೂದಲು ಉದುರುವುದು ಮತ್ತು ತಲೆ ಬೋಳಾಗುವುದು  ಸಾಮಾನ್ಯವಾಗಿತ್ತು.  ಆದರೆ ಇತ್ತೀಚಿನ ದಿನಗಳಲ್ಲಿ 25 ರಿಂದ 30 ವರ್ಷ ವಯಸ್ಸಿನ ಯುವಕರು ಕೂಡ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅನೇಕ ಜನರು ಮದುವೆಯಾಗುವ ಮೊದಲೇ ತಮ್ಮ ಕೂದಲನ್ನು ಕಳೆದುಕೊಳ್ಳುತ್ತಿದ್ದಾರೆ. ಕೆಲವು ಸಂದರ್ಭಗಳಲ್ಲಿ ಇದು ಆನುವಂಶಿಕ ಕಾರಣಗಳಿಂದ ಉಂಟಾಗಬಹುದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಇದು ಅನಾರೋಗ್ಯಕರ ಆಹಾರ ಪದ್ಧತಿಗಳಿಂದಲೇ ಉಂಟಾಗುತ್ತದೆ. 


COMMERCIAL BREAK
SCROLL TO CONTINUE READING

ಇವುಗಳ ಸೇವನೆಯೇ ಕೂದಲು ಉದುರಲು ಕಾರಣ : 
1. ಶುಗರ್
ಡಯಾಬಿಟೀಸ್ ರೋಗಿಗಳಿಗೆ ಸಕ್ಕರೆಯನ್ನು ಕಡಿಮೆ ತಿನ್ನಲು ಸಲಹೆ ನೀಡಲಾಗುತ್ತದೆ.   ಸಕ್ಕರೆಯ ಸೇವನೆಯಿಂದ ಕೂದಲು ಬೇಗನೆ ಉದುರಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮಿತಿ ಮೀರಿ  ಸಿಹಿ ಪದಾರ್ಥಗಳನ್ನು ಸೇವಿಸಿದರೆ ಕೂದಲು ಉದುರುವುದಕ್ಕೆ ಕಾರಣವಾಗಬಹುದು.  ದೇಹಕ್ಕೆ ಶಕ್ತಿ ಪಡೆಯಲು ಬೇಕಾಗುವ ಹಾಗೆ ಸಕ್ಕರೆ ಸೇವನೆ ಮಿತಿಯಲ್ಲಿರಲಿ. 


ಇದನ್ನೂ ಓದಿ : ಹೈ ಕೊಲೆಸ್ಟ್ರಾಲ್ ಜೊತೆಗೆ ಹೈ ಬಿಪಿಯನ್ನೂ ನಿಯಂತ್ರಿಸುತ್ತೆ ಈ ಒಂದು ತರಕಾರಿ


2. ಜಂಕ್ ಮತ್ತು ಫಾಸ್ಟ್ ಫುಡ್ : 
ಫಾಸ್ಟ್ ಫುಡ್ಸ್ ಮಾರುಕಟ್ಟೆಯಲ್ಲಿ ಸಿಗುವ ಜಂಕ್ ಮತ್ತು ಫಾಸ್ಟ್ ಫುಡ್ ಗಳು ರುಚಿಯಾಗಿದ್ದು, ತಿನ್ನಲು ಇಷ್ಟವಾಗಬಹುದು. ಆದರೆ ಆಹಾರ ಆರೋಗ್ಯವನ್ನು ಸಂಪೂರ್ಣವಾಗಿ ಹಾಳು ಮಾಡುತ್ತವೆ. ಇದರಲ್ಲಿರುವ ಸ್ಯಾಚುರೇಟೆಡ್ ಕೊಬ್ಬು ತೂಕವನ್ನು ಹೆಚ್ಚಿಸುವುದಲ್ಲದೆ, ಕೂದಲಿಗೆ ಸಾಕಷ್ಟು ಹಾನಿಯನ್ನುಂಟುಮಾಡುತ್ತದೆ. ಇದರಲ್ಲಿ ಕಂಡುಬರುವ DHT ಎಂಬ ಆಂಡ್ರೋಜನ್ ಕೂದಲು ಉದುರುವಿಕೆಯನ್ನು ಹೆಚ್ಚಿಸುತ್ತದೆ. 


3.  ಕೆಟ್ಟಿರುವ ಮೀನುಗಳು :
ಮೀನು ತಿನ್ನುವುದರಿಂದ ದೇಹಕ್ಕೆ ಕ್ಯಾಲ್ಸಿಯಂನಂತಹ ಪ್ರಮುಖ ಪೋಷಕಾಂಶಗಳು ಸಿಗುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಕಲುಷಿತ ಮೀನುಗಳನ್ನು ಮಾರುಕಟ್ಟೆಯಿಂದ ಖರೀದಿಸಿ ತಿಂದರೆ, ಅದರಲ್ಲಿರುವ ಪಾದರಸವು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಹಾಗಾಗಿ ಮೀನು ಖರೀದಿಸುವಾಗ ಜಾಗರೂಕರಾಗಿರಿ.


ಇದನ್ನೂ ಓದಿ : ತೂಕ ಕಳೆದುಕೊಳ್ಳುವ ಭರಾಟೆಯಲ್ಲಿ ಮುಂಜಾನೆ ಈ ತಪುಗಳನ್ನು ಮಾಡದಿರಿ


4. ಮದ್ಯ 
ಯುವಜನರಲ್ಲಿ ಮದ್ಯದ ಚಟವು ವೇಗವಾಗಿ ಹೆಚ್ಚುತ್ತಿದೆ. ಆದರೆ ಅದರ ಪರಿಣಾಮವು ಅವರ ಕೂದಲಿನಲ್ಲಿಯೂ ಸ್ಪಷ್ಟವಾಗಿ ಕಂಡುಬರುತ್ತದೆ. ನಮ್ಮ ಕೂದಲು ಕೆರಾಟಿನ್ ಎಂಬ ಪ್ರೋಟೀನ್‌ನಿಂದ ಮಾಡಲ್ಪಟ್ಟಿದೆ. ಆಲ್ಕೋಹಾಲ್ ಸೇವಿಸಿದರೆ ಅದು ಪ್ರೋಟೀನ್ ಸಿಂತೊಸಿಸ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಕೂದಲನ್ನು ದುರ್ಬಲಗೊಳಿಸುವುದಲ್ಲದೆ, ಅದರ ಹೊಳಪನ್ನು ಕೂಡಾ ಕಳೆದುಕೊಳ್ಳುವಂತೆ ಮಾಡುತ್ತದೆ. 


5. ಹಸಿ ಮೊಟ್ಟೆಯ ಬಿಳಿ ಮೊಟ್ಟೆ :
ಮೊಟ್ಟೆ ತಿನ್ನುವುದರಿಂದ ದೇಹಕ್ಕೆ ಪ್ರೋಟೀನ್ ಮತ್ತು ನೈಸರ್ಗಿಕ ಕೊಬ್ಬು ಸಿಗುತ್ತದೆ.   ಇಡೀ ಕಾರಣಕ್ಕೆ ಇದನ್ನೂ ಕೂದಲಿನ ಬೆಳವಣಿಗೆಯಾ ಉದ್ದೇಶದಿಂದ ತಲೆಗೂ  ಲೇಪಿಸಲಾಗುತ್ತದೆ. ಆದರೆ ತಪ್ಪಿಯೂ ಕೂಡಾ ಹಸಿ ಮೊಟ್ಟೆಯನ್ನು ತಿನ್ನಬೇಡಿ.  ಇಲ್ಲದಿದ್ದರೆ ಇಲಿ ಬಯೋಟಿನ್ ಕೊರತೆ ಉಂಟಾಗಿ ಕೆರಾಟಿನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಇದು ನಮ್ಮ ಕೂದಲಿನ ಮೇಲೆ ನೇರ ಪರಿಣಾಮ ಬೀರುತ್ತದೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.