ಮೊಟ್ಟೆಯನ್ನು ಈ ರೀತಿ ಬಳಸಿದರೆ ಕೆಲವೇ ದಿನಗಳಲ್ಲಿ ನಿಮ್ಮದಾಗಲಿದೆ ಉದ್ದನೆಯ ಕೇಶ ಕಾಂತಿ

long Hair by Egg: ಕೂದಲು ಬೆಳೆಯಲು ಮೊಟ್ಟೆಯನ್ನು  ಬಳಸುವುದು ಹೇಗೆ ? ಇದು ಸಾಮಾನ್ಯವಾಗಿ ಕೇಳುವ ಪ್ರಶ್ನೆ. ಹಾಗಾದರೆ ಕೂದಲು ಹೇಗೆ ವೇಗವಾಗಿ ಬೆಳೆಯಬೇಕಾದರೆ ಮೊಟ್ಟೆಯನ್ನು ಹೇಗೆ ಹಚ್ಚಬೇಕು ನೋಡೋಣ. 

Written by - Ranjitha R K | Last Updated : Jul 6, 2022, 12:35 PM IST
  • ಉದ್ದನೆಯ ಕೂದಲು ಎಲ್ಲರಿಗೂ ಇಷ್ಟ
  • ಮೊಟ್ಟೆಯಿಂದ ಕೂದಲು ಹೇಗೆ ಬೆಳೆಯುತ್ತದೆ ?
  • ಕೂದಲಿಗೆ ಮೊಟ್ಟೆ ಮತ್ತು ಆಲಿವ್ ಎಣ್ಣೆಯನ್ನು ಹೇಗೆ ಹಚ್ಚಬೇಕು ?
ಮೊಟ್ಟೆಯನ್ನು ಈ ರೀತಿ ಬಳಸಿದರೆ ಕೆಲವೇ ದಿನಗಳಲ್ಲಿ ನಿಮ್ಮದಾಗಲಿದೆ ಉದ್ದನೆಯ ಕೇಶ ಕಾಂತಿ  title=
egg benfits on hai (file photo)

long Hair by Egg : ಉದ್ದನೆಯ ಕೂದಲು ಯಾರಿಗೆ ತಾನೇ ಇಷ್ಟವಿರುವುದಿಲ್ಲ. ಉದ್ದನೆಯ ಕೂದಲನ್ನು ಪಡೆಯಬೇಕೆನ್ನುವ ಹಂಬಲದಿಂದ ಹೆಣ್ಣು ಮಕ್ಕಳು ಅದೆಷ್ಟೋ ತಂತ್ರಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ. ದುಬಾರಿ ಶಾಂಪು, ಎಣ್ಣೆ, ಕಂಡೀಶನರ್ ಎಂದು ಹಣ ಖರ್ಚು ಮಾಡುತ್ತಾರೆ. ಆದರೂ ನಿರೀಕ್ಷೆಗೆ ತಕ್ಕ ಫಲ ಸಿಗುವುದಿಲ್ಲ. ಆದರೆ ಕೇವಲ ಒಂದು ಮೊಟ್ಟೆಯನ್ನು ಬಳಸಿ, ಉದ್ದನೆಯ ಕೂದಲನ್ನು ಪಡೆಯುವುದು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ  ಕೂದಲಿಗೆ ಹೊಳಪು ನೀಡಲು ಮೊಟ್ಟೆ ಬಳಸಬೇಕು ಎಂದು ಹೇಳಲಾಗುತ್ತದೆ. ಆದರೆ ಮೊಟ್ಟೆ ಕೂದಲಿಗೆ ಹೊಳಲು ನೀಡುವುದರ ಜೊತೆಗೆ ಕೂದಲು ಬೆಳೆಯಲು ಕೂಡಾ ಕಾರಣವಾಗುತ್ತದೆ.

ಮೊಟ್ಟೆಯಿಂದ ಕೂದಲು ಹೇಗೆ ಬೆಳೆಯುತ್ತದೆ ? :
ಕೂದಲನ್ನು ಉದ್ದವಾಗಿ ಬೆಳೆಸಬೇಕಾದರೆ ಮೊಟ್ಟೆ ಮಾತ್ರವಲ್ಲ, ಅದರ ಜೊತೆಗೆ ಆಲಿವ್ ಎಣ್ಣೆಯೂ ಬೇಕಾಗುತ್ತದೆ. ಈ ಎರಡು ಕೂದಲನ್ನು ಬೆರೆಸುವ ಮೂಲಕ  ಉದ್ದನೆಯ ಕೂದಲನ್ನು ಪಡೆಯುವುದು ಸಾಧ್ಯವಾಗುತ್ತದೆ. 

ಇದನ್ನೂ ಓದಿ : ಈ ಒಂದು ವಸ್ತುವನ್ನು ಸೇವಿಸಿದರೆ ಶುಗರ್ ಲೆವೆಲ್ ಕ್ಷಣ ಮಾತ್ರದಲ್ಲಿ ಕಡಿಮೆಯಾಗುತ್ತದೆ ..!

ಕೂದಲಿಗೆ ಮೊಟ್ಟೆ ಮತ್ತು ಆಲಿವ್ ಎಣ್ಣೆಯನ್ನು ಹೇಗೆ  ಹಚ್ಚಬೇಕು ? :  
1. ಇದಕ್ಕಾಗಿ ಒಂದು ಬಟ್ಟಲಿನಲ್ಲಿ ಮೊಟ್ಟೆಯ ಹಳದಿ ಲೋಳೆ ಮತ್ತು ಆಲಿವ್ ಎಣ್ಣೆಯನ್ನು ಚೆನ್ನಾಗಿ ಬೀಟ್ ಮಾಡಿಕೊಳ್ಳಿ. 
2. ನಂತರ, ಸಿದ್ಧಪಡಿಸಿದ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ. 
3. 20 ನಿಮಿಷಗಳ ಕಾಲ ಹಾಗೆಯೇ ಒಣಗಳು ಬಿಡಿ. 
4.ಮಿಶ್ರಣವು ಒಣಗಿದ ನಂತರ, ತಂಪಾದ ನೀರು, ಶಾಂಪೂ ಮತ್ತು ಕಂಡಿಷನರ್ ನಿಂದ  ಕೂದಲನ್ನು ತೊಳೆಯಿರಿ. ಹೀಗೆ ನಿಯಮಿತವಾಗಿ ಮಾಡುತ್ತಾ ಬಂದರೆ ಶೀಘ್ರದಲ್ಲಿಯೇ ಉದ್ದನೆಯ ಕಾಂತಿಯುತವಾದ ಕೂದಲು ನಿಮ್ಮದಾಗುತ್ತದೆ. 

ಇದನ್ನೂ ಓದಿ :  Cholesterol Control Tips: ಈ ಬೀಜಗಳ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತೆ

 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News