Nail Cutting Astro Tips: ವಾರದಲ್ಲಿ ಕೆಲವು ದಿನಗಳಲ್ಲಿ ಉಗುರುಗಳನ್ನು ಕತ್ತರಿಸಬಾರದು ಎಂದು ಮನೆಯ ಹಿರಿಯರಿಂದ ನೀವು ಅನೇಕ ಬಾರಿ ಕೇಳಿರಬೇಕು. ಇದರೊಂದಿಗೆ, ಕೆಲವು ದಿನಗಳಲ್ಲಿ ಕ್ಷೌರವನ್ನು ಸಹ ನಿಷೇಧಿಸಲಾಗಿದೆ. ಅಷ್ಟಕ್ಕೂ ಎಲ್ಲ ಮನೆಗಳಲ್ಲೂ ಯಾಕೆ ಹೀಗೆ ಹೇಳ್ತಾರೆ. ಜ್ಯೋತಿಷಿಗಳ ಪ್ರಕಾರ, ವಾರದ ಎಲ್ಲಾ ದಿನಗಳು ವಿವಿಧ ಗ್ರಹಗಳೊಂದಿಗೆ ನೇರ ಸಂಬಂಧವನ್ನು ಹೊಂದಿವೆ. ಮಂಗಳವಾರ, ಗುರುವಾರ ಮತ್ತು ಶನಿವಾರದಂದು ನಾವು ಉಗುರುಗಳನ್ನು ಕತ್ತರಿಸಿದರೆ, ಅದು ಗ್ರಹ ದೋಷಗಳನ್ನು ಉಂಟುಮಾಡುತ್ತದೆ. ಈ ಕಾರಣಕ್ಕಾಗಿಯೇ ಈ 3 ದಿನಗಳಲ್ಲಿ ಉಗುರುಗಳನ್ನು ಕತ್ತರಿಸಬೇಡಿ ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಮಂಗಳವಾರ ಉಗುರು ಕತ್ತರಿಸಬೇಡಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳವಾರ ಮಂಗಳ ಗ್ರಹಕ್ಕೆ ಸಂಬಂಧಿಸಿದ್ದು ಎಂದು ಪರಿಗಣಿಸಲಾಗಿದೆ. ಮಂಗಳವು ರಕ್ತಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ ಮಂಗಳವಾರ ಉಗುರುಗಳನ್ನು ಕತ್ತರಿಸುವುದರಿಂದ ರಕ್ತ ಸಂಬಂಧಿತ ಅಸ್ವಸ್ಥತೆಗಳು ಉಂಟಾಗಬಹುದು. ಆದ್ದರಿಂದ, ಈ ದಿನ ಉಗುರುಗಳು, ಕೂದಲು ಮತ್ತು ಗಡ್ಡವನ್ನು ಕತ್ತರಿಸುವುದನ್ನು ತಪ್ಪಿಸಬೇಕು.


ಇದನ್ನೂ ಓದಿ: ಸ್ಟ್ಯಾಂಡ್‌ನಲ್ಲಿ ಫ್ಯಾನ್‌ ಹಿಡಿದ ಕ್ಯಾಚ್ ನೋಡಿ ಗಿಲ್‌ ಶಾಕ್? ವೈರಲ್‌ ಆಯ್ತು ಎಕ್ಷ್‌ಪ್ರೇಷನ್‌!‌


ಹಣದ ನಷ್ಟ ಎದುರಿಸಬೇಕಾಗುತ್ತೆ : ಗುರುವಾರವನ್ನು ದೇವ ಗುರು ಬೃಹಸ್ಪತಿಯ ಆರಾಧನೆಯ ದಿನ ಎಂದು ಕರೆಯಲಾಗುತ್ತದೆ. ಬುದ್ಧಿ, ಜ್ಞಾನ, ವಿದ್ಯೆ ಮತ್ತು ಶುಭ ಕಾರ್ಯಗಳಿಗೆ ಅವನು ಕಾರಣ. ಗುರುವಾರದಂದು ಅಪ್ಪಿತಪ್ಪಿಯೂ ಉಗುರುಗಳನ್ನು ಕತ್ತರಿಸಬಾರದು ಎಂಬುದು ನಂಬಿಕೆ. ಇದರೊಂದಿಗೆ ಕೂದಲು ಕತ್ತರಿಸುವುದು ಮತ್ತು ಶೇವಿಂಗ್ ಮಾಡುವುದನ್ನು ತಪ್ಪಿಸಬೇಕು. ಹೀಗೆ ಮಾಡುವುದರಿಂದ ಜನರು ಹಣದ ನಷ್ಟವನ್ನು ಎದುರಿಸಬೇಕಾಗಬಹುದು.


ಬಿಕ್ಕಟ್ಟು ಪ್ರಾರಂಭವಾಗುತ್ತದೆ : ಶನಿವಾರದಂದು ಶನಿ ದೇವನನ್ನು ಪೂಜಿಸಲಾಗುತ್ತದೆ. ಜ್ಯೋತಿಷ್ಯದಲ್ಲಿ, ಶನಿಯ ಸಂಬಂಧವನ್ನು ಮನುಷ್ಯನ ಮೂಳೆಗಳು, ಸ್ನಾಯುಗಳು ಮತ್ತು ಕಫಗಳೊಂದಿಗೆ ಹೇಳಲಾಗುತ್ತದೆ. ಶನಿವಾರದಂದು ಉಗುರುಗಳು, ಕೂದಲು ಮತ್ತು ಗಡ್ಡವನ್ನು ಕತ್ತರಿಸುವವರು ಶನಿ ದೋಷವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಇದು ಅವನ ಜೀವನದಲ್ಲಿ ಬಿಕ್ಕಟ್ಟಿನ ಅವಧಿಯನ್ನು ಪ್ರಾರಂಭಿಸುತ್ತದೆ.


ಇದನ್ನೂ ಓದಿ: ಶನಿಯ ಅನುಗ್ರಹದಿಂದ ಈ 5 ರಾಶಿಗಳಿಗೆ ಅನಿರೀಕ್ಷಿತ ಹಣದ ಮಳೆ, ಉದ್ಯೋಗದಲ್ಲಿ ಬಡ್ತಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.