Astrology- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಮಾಸ ಕೆಲ ರಾಶಿಗಳ ಜನರ ಪಾಲಿಗೆ ಅತ್ಯಂತ ಶುಭ ಸಾಬೀತಾದರೆ, ಉಳಿದ ರಾಶಿಗಳ ಪಾಲಿಗೆ ಅಶುಭವಾಗಿರುತ್ತದೆ. ಗ್ರಹ ಹಾಗೂ ನಕ್ಷತ್ರಗಳ ಸ್ಥಾನದ ಆಧಾರದ ಮೇಲೆ, ಯಾವ ರಾಶಿಗೆ ಪ್ರಯೋಜನ ಸಿಗಲಿದೆ ಎಂಬುದನ್ನು ನಿರ್ಧರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಶ್ರಾವಣ ಮಾಸಕ್ಕೆ ವಿಶೇಷ ಮಹತ್ವವಿದೆ. ಈ ಪವಿತ್ರ ಮಾಸವನ್ನು ದೇವಾದಿದೇವ ಮಹಾದೇವನಿಗೆ ಸಮರ್ಪಿಸಲಾಗಿದೆ. ಈ ಬಾರಿ ಶ್ರಾವಣ ಮಾಸ ಜುಲೈ 29 ರಿಂದ ಆರಂಭವಾಗಲಿದ್ದು, ಆಗಸ್ಟ್ 27ರವರೆಗೆ ಇರಲಿದೆ. ಈ ಬಾರಿಯ ಶ್ರಾವಣ ಮಾಸದಲ್ಲಿ ಒಟ್ಟು ನಾಲ್ಕು ಸೋಮವಾರಗಳು ಬರಲಿವೆ.


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶ್ರಾವಣ ಮಾಸದಲ್ಲಿ ಪೂಜೆ ಮತ್ತು ಉಪವಾಸ ಮಾಡುವುದರಿಂದ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ ಎನ್ನಲಾಗುತ್ತದೆ. ಈ ಬಾರಿಯ ಶ್ರಾವಣ ಮಾಸದಲ್ಲಿ ಯಾವ 3 ರಾಶಿಯವರಿಗೆ ಶಿವನ ಕೃಪಾಶಿರ್ವಾದ ಸಿಗಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಈ ಅವಧಿಯಲ್ಲಿ, ಅವರಿಗೆ ಸಾಕಷ್ಟು ಪ್ರಗತಿ ಪ್ರಾಪ್ತಿಯಾಗಲಿದೆ.


ಶ್ರಾವಣ ಮಾಸದಲ್ಲಿ ಈ 3 ರಾಶಿಗಳ ಜನರ ಮೇಲೆ ಶಿವನ ಕೃಪಾವೃಷ್ಟಿ
ಮೇಷ ರಾಶಿ -
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಬಾರಿಯ ಶ್ರಾವಣ ಮಾಸ ಮೇಷ ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಶುಭವಾಗಿರಲಿದೆ. ಅವರ ಆರ್ಥಿಕ ಸ್ಥಿತಿ ಸುಧಾರಿಸಲಿದೆ ಮತ್ತು ಶಿವ ಶಂಕರನ ಕೃಪಾವೃಷ್ಟಿ ಅವರ ಮೇಲಾಗಲಿದೆ ಎನ್ನಲಾಗಿದೆ. ಈ ಅವಧಿಯಲ್ಲಿ, ಮೇಷ ರಾಶಿಯವರ ಎಲ್ಲಾ ಇಷ್ಟಾರ್ಥಗಳು ನೆರವೇರಲಿವೆ. ಅಷ್ಟೇ ಅಲ್ಲ ಮೇಷ ರಾಶಿಯವರಿಗೆ ಶ್ರಾವಣ ಮಾಸದಲ್ಲಿ ಆತ್ಮೀಯರ ಬೆಂಬಲ ಸಿಗಲಿದೆ. ಸ್ಥಗಿತಗೊಂಡ ಕೆಲಸ ಕಾರ್ಯಗಳಲ್ಲಿ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ.


ಕರ್ಕ ರಾಶಿ - ಶ್ರಾವಣ ಮಾಸದಲ್ಲಿ ಶಿವನು ಈ ರಾಶಿಯ ಜನರ ಮೇಲೂ ಕೂಡ ತನ್ನ ಕೃಪಾದೃಷ್ಟಿ ಬೀರಲಿದ್ದಾನೆ. ಈ ಅವಧಿಯಲ್ಲಿ ಕೆಲಸ ಕಾರ್ಯಗಳಲ್ಲಿನ ಎಲ್ಲಾ ರೀತಿಯ ಅಡೆತಡೆಗಳು ದೂರಾಗಳಿವೆ. ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕ ಅಭಿವೃದ್ಧಿಯ ಎಲ್ಲಾ ಸಾಧ್ಯತೆಗಳಿವೆ. ಆದಾಯದಲ್ಲಿ ಹಠಾತ್ ಹೆಚ್ಚಳವಾಗಬಹುದು. ನೀವು ಯಾವುದೇ ಹೊಸ ಕೆಲಸವನ್ನು ಮಾಡಲು ಯೋಚಿಸುತ್ತಿದ್ದರೆ, ಈ ಸಮಯದಲ್ಲಿ ನೀವು ಅದನ್ನು ಆರಂಭಿಸಬಹುದು. ವ್ಯಾಪಾರ-ವ್ಯವಹಾರದಲ್ಲಿ ಲಾಭ ಇರಲಿದ್ದು ಮತ್ತು ಆದಾಯವು ಉತ್ತಮವಾಗಿರಲಿದೆ. ನ್ಯಾಯಾಲಯದ ಪ್ರಕರಣಗಳಲ್ಲಿ ಜಯ ನಿಮ್ಮದಾಗಲಿದೆ.


ಇದನ್ನೂ ಓದಿ-Chanakya Niti: ಆಚಾರ್ಯ ಚಾಣಕ್ಯರ ಪ್ರಕಾರ ಮನೆಯಲ್ಲಿ ಕುಮಾರಿ ಕನ್ಯೆಯ ಸ್ಥಾನ-ಮಾನ ಹೇಗಿರಬೇಕು ಗೊತ್ತಾ?


ಕನ್ಯಾ ರಾಶಿ - ಈ ರಾಶಿಯವರಿಗೆ ಶ್ರಾವಣ ಮಾಸವು ಸಂತಸದಿಂದ ಕೂಡಿರಲಿದೆ. ಈ ಅವಧಿಯಲ್ಲಿ, ನೀವು ಕೆಲಸದ ಸ್ಥಳದಲ್ಲಿ ನಿಮ್ಮ ಸ್ವಂತ ಛಾಪನ್ನು ಮೂಡಿಸುವಿರಿ. ಈ ಅವಧಿಯಲ್ಲಿ ನೀವು ಪ್ರಯಾಣ ಕೈಗೊಳ್ಳಬಹುದು ಮತ್ತು ಈ ಪ್ರಯಾಣವು ನಿಮ್ಮ ಪಾಲಿಗೆ ಪ್ರಯೋಜನಕಾರಿ ಸಬೀತಾಗಲಿದೆ. ಹೂಡಿಕೆಗೆ ಈ ಸಮಯ ತುಂಬಾ ಅನುಕೂಲಕರವಾಗಿದೆ. ವಿದೇಶ ಪ್ರವಾಸದ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ. ಈ ಅವಧಿಯಲ್ಲಿ ಎಲ್ಲೋ  ಸಿಕ್ಕಿಹಾಕಿಕೊಂಡ  ಹಣ ನಿಮ್ಮ ಬಳಿಗೆ  ಮರಳಲಿದೆ.


ಇದನ್ನೂ ಓದಿ-Morning Astro Tips: ಬ್ರಹ್ಮ ಮುಹೂರ್ತದಲ್ಲಿ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ, ಜೀವನವೇ ಹಾಳಾದೀತು!!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.