ಶ್ರಾವಣ ತರಲಿದೆ ಶುಭದಿನ: ಈ ಮಾಸದಲ್ಲಿ ಶಿವಪೂಜೆಯನ್ನು ಹೀಗೆ ಮಾಡಿ
ಈ ಎರಡೂ ಯೋಗಗಳನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಧಾರ್ಮಿಕ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವಿಷ್ಕುಂಭ ಮತ್ತು ಪ್ರೀತಿ ಯೋಗದಲ್ಲಿ ಜನಿಸಿದ ಮಕ್ಕಳು ತುಂಬಾ ಅದೃಷ್ಟವಂತರು. ಈ ಸಮಯದಲ್ಲಿ ಜನಿಸಿದವರು ಜೀವನದಲ್ಲಿ ಎಲ್ಲಾ ಸಂತೋಷವನ್ನು ಪಡೆಯುತ್ತಾರೆ. ಅವರು ತುಂಬಾ ಪ್ರತಿಭಾವಂತರು ಮತ್ತು ಸುಸಂಸ್ಕೃತರಾಗಿರುತ್ತಾರೆ.
Shravan Month 2022 Start Date: ಶಿವನ ನೆಚ್ಚಿನ ಮಾಸ ಶ್ರಾವಣ ಜುಲೈ 14 ರಿಂದ ಪ್ರಾರಂಭವಾಗಲಿದೆ. ಈ ತಿಂಗಳಿಂದಲೇ ಚಾತುರ್ಮಾಸ ಆರಂಭವಾಗುತ್ತದೆ. ವರ್ಷದ ಈ ಸಮಯವನ್ನು ಪೂಜೆ, ತಪಸ್ಸು ಮತ್ತು ಧ್ಯಾನಕ್ಕೆ ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗಿದೆ. ಈ ಮಾಸದಲ್ಲಿ ಭೋಲೆನಾಥನ ಆರಾಧನೆ ಮತ್ತು ಶಿವನಿಗೆ ಅಭಿಷೇಕ ಮಾಡುವುದರಿಂದ ಇಷ್ಟಾರ್ಥಗಳು ಈಡೇರುತ್ತವೆ. ಈ ವರ್ಷ, ಶ್ರಾವಣ ಮಾಸವು ಇನ್ನಷ್ಟು ವಿಶೇಷವಾಗಿರಲಿದೆ ಏಕೆಂದರೆ ಮಾಸ ಪ್ರಾರಂಭದ ಸಮಯದಲ್ಲಿ ಉತ್ತಮ ಶುಭ ಯೋಗಗಳು ಬರಲಿವೆ.
ಇದನ್ನೂ ಓದಿ: ಫೇಸ್‌ಬುಕ್ ಮೂಲಕ ಒಂದಾಯ್ತು ಕರುಳ ಬಳ್ಳಿ: ಸಿಲಿಕಾನ್ ಸಿಟಿಯಲ್ಲಿ ಅಪರೂಪದ ಘಟನೆ
2022 ರಲ್ಲಿ ಶ್ರಾವಣ ತಿಂಗಳು ಜುಲೈ 14 ರಿಂದ ಪ್ರಾರಂಭವಾಗುತ್ತದೆ ಮತ್ತು ಆಗಸ್ಟ್ 12 ರವರೆಗೆ ಮುಂದುವರಿಯಲಿದೆ. ಈ ಸಮಯದಲ್ಲಿ 4 ಶ್ರಾವಣ ಸೋಮವಾರಗಳು ಇರುತ್ತವೆ. ಶ್ರಾವಣ ಮಾಸದಲ್ಲಿ ಸೋಮವಾರದ ಉಪವಾಸವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಮತ್ತೊಂದೆಡೆ, ಜುಲೈ 14 ರಂದು ಶ್ರಾವಣ ಮಾಸದ ಆರಂಭದಲ್ಲಿ ವಿಷ್ಕುಂಭ ಮತ್ತು ಪ್ರೀತಿ ಯೋಗವು ರೂಪುಗೊಳ್ಳುತ್ತಿದೆ. ಈ ಎರಡೂ ಯೋಗಗಳನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಧಾರ್ಮಿಕ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವಿಷ್ಕುಂಭ ಮತ್ತು ಪ್ರೀತಿ ಯೋಗದಲ್ಲಿ ಜನಿಸಿದ ಮಕ್ಕಳು ತುಂಬಾ ಅದೃಷ್ಟವಂತರು. ಈ ಸಮಯದಲ್ಲಿ ಜನಿಸಿದವರು ಜೀವನದಲ್ಲಿ ಎಲ್ಲಾ ಸಂತೋಷವನ್ನು ಪಡೆಯುತ್ತಾರೆ. ಅವರು ತುಂಬಾ ಪ್ರತಿಭಾವಂತರು ಮತ್ತು ಸುಸಂಸ್ಕೃತರಾಗಿರುತ್ತಾರೆ.
ಶ್ರಾವಣ ಮಾಸದಲ್ಲಿ ಶಿವಪೂಜೆ ಹೀಗೆ ಮಾಡಿ:
ಶ್ರಾವಣ ಮಾಸದಲ್ಲಿ ನಿತ್ಯವೂ ಪೂಜೆಯನ್ನು ಮಾಡಬೇಕು. ಶಿವನನ್ನು ಮೆಚ್ಚಿಸಲು ಈ ತಿಂಗಳು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಅಲ್ಲದೆ, ಶಿವಲಿಂಗವನ್ನು ಪ್ರತಿಷ್ಠಾಪಿಸಿ ಅದಕ್ಕೆ ಪೂಜೆ ಮಾಡಿದರೆ ಅನೇಕ ಪ್ರಯೋಜನಗಳನ್ನು ಪಡೆಯಬಹುದಂತೆ. ಶ್ರಾವಣ ಮಾಸದಲ್ಲಿ ಮುಂಜಾನೆಯೇ ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಬೇಕು. ಇದಾದ ನಂತರ ದೇವರ ಮನೆಯಲ್ಲಿ ಅಥವಾ ಶಿವನ ದೇವಸ್ಥಾನದಲ್ಲಿ ಶಿವನ ಮುಂದೆ ಹಸುವಿನ ತುಪ್ಪದ ದೀಪವನ್ನು ಬೆಳಗಿಸಬೇಕು. ಹಾಲು ಮತ್ತು ಗಂಗಾಜಲದೊಂದಿಗೆ ಶಿವಲಿಂಗದ ಅಭಿಷೇಕ ಮಾಡಬೇಕು. ಬಿಲ್ವಪತ್ರೆ ಎಲೆಗಳು, ಪಂಚಾಮೃತ, ಹಣ್ಣುಗಳು, ಹೂವುಗಳನ್ನು ಭೋಲೆನಾಥನಿಗೆ ಅರ್ಪಿಸಬೇಕು. ಕೊನೆಗೆ ಆರತಿ ಮಾಡಬೇಕು. ಹೀಗೆ ಮಾಡಿದರೆ ಶಿವನ ಅನುಗ್ರಹಕ್ಕೆ ಪಾತ್ರರಾಗಬಹುದು. ಸೋಮವಾರದಂದು ಉಪವಾಸ ಮಾಡಿ ಮತ್ತು ಈ ದಿನ ರುದ್ರಾಭಿಷೇಕ ಮಾಡಿದರೆ ಸಹ ಒಳಿತಾಗುತ್ತದೆ.
ಇದನ್ನೂ ಓದಿ: Pregnancy Food to Avoid : ಮಹಿಳೆಯರೆ ಗರ್ಭಾವಸ್ಥೆ ಸಮಯದಲ್ಲಿ ತಪ್ಪಿಯೂ ಸೇವಿಸಬೇಡಿ ಈ 5 ಆಹಾರಗಳನ್ನು!
ಶ್ರಾವಣ ಸೋಮವಾರ 2022:
ಮೊದಲ ಶ್ರಾವಣ ಸೋಮವಾರ 2022 - 18 ಜುಲೈ 2022
ಎರಡನೇ ಶ್ರಾವಣ ಸೋಮವಾರ 2022 - 25 ಜುಲೈ 2022
ಮೂರನೇ ಶ್ರಾವಣ ಸೋಮವಾರ 2022 - 1 ಆಗಸ್ಟ್ 2022
ನಾಲ್ಕನೇ ಶ್ರಾವಣಸೋಮವಾರ 2022 - 8 ಆಗಸ್ಟ್ 2022
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.