ಫೇಸ್‌ಬುಕ್‌ ಮೂಲಕ ಒಂದಾಯ್ತು ಕರುಳ ಬಳ್ಳಿ: ಸಿಲಿಕಾನ್ ಸಿಟಿಯಲ್ಲಿ ಅಪರೂಪದ ಘಟನೆ

ಕೂಡಲೇ ಮೆಸೇಂಜರ್ ಮೂಲಕ ಆತನ ಅಣ್ಣನನ್ನ ಸಂಪರ್ಕಿಸಿದ ನಿತಿನ್ ಹಾಗೂ ಶ್ರೀಧರ್ ಆತನ ಪೋಷಕರು ಬರುವವರೆಗೂ ಬೇಕರಿಯಲ್ಲೇ ಮಲಗಲು ಜಾಗ ಕೊಟ್ಟು, ಹೇರ್ ಕಟಿಂಗ್ ಮಾಡಿಸಿ, ಊಟ ಬಟ್ಟೆ ಕೊಟ್ಟು ನೋಡಿಕೊಂಡಿದ್ದಾರೆ. 

Written by - Bhavishya Shetty | Last Updated : Jun 25, 2022, 01:08 PM IST
  • ಫೇಸ್‌ಬುಕ್‌ ಮೂಲಕ ತಾಯಿ ಮಡಿಲು ಸೇರಿದ ಮಗ
  • ಒಂದು ವರ್ಷದಿಂದ ಕಾಣೆಯಾಗಿದ್ದ ಬಾಲಕ
  • ಉತ್ತರ ಭಾರತ ಮೂಲದ ಸುಹಾಸ್ ಎಂಬ ಬಾಲಕ
ಫೇಸ್‌ಬುಕ್‌ ಮೂಲಕ ಒಂದಾಯ್ತು ಕರುಳ ಬಳ್ಳಿ: ಸಿಲಿಕಾನ್ ಸಿಟಿಯಲ್ಲಿ ಅಪರೂಪದ ಘಟನೆ title=
mother and Son

ಬೆಂಗಳೂರು: ಪೋಷಕರಿಂದ ದೂರವಾಗಿ ಅಲೆಯುತ್ತಿದ್ದ ಬಾಲಕನನ್ನ ಪುನಃ ಪೋಷಕರ ಮಡಿಲಿಗೆ ಸೇರಿಸುವ ಮೂಲಕ ಬೆಂಗಳೂರಿನ ಯುವಕರು ಮಾನವೀಯತೆ ಮೆರೆದಿದ್ದಾರೆ. 

ಎರಡು ವಾರಗಳ ಹಿಂದೆ ನಗರದ ಬಿಟಿಎಂ ಲೇಔಟ್ ಬಳಿ ಹಸಿವಿನಿಂದ ಓಡಾಡ್ತಿದ್ದ ಉತ್ತರ ಭಾರತ ಮೂಲದ ಸುಹಾಸ್ ಎಂಬ ಬಾಲಕನನ್ನ ಸ್ಥಳಿಯ ಬೇಕರಿ ಮಾಲೀಕ ರಾಜಣ್ಣ, ಯುವಕರಾದ ನಿತಿನ್ ಮತ್ತು ಶ್ರೀಧರ್ ಗಮನಿಸಿ ವಿಚಾರಿಸಿದ್ದಾರೆ‌. ಹಿಂದಿ ಭಾಷೆ ಮಾತನಾಡುತ್ತಿದ್ದ ಬಾಲಕನಿಗೆ ಊರಿನ ಹೆಸರು ಮರೆತಿತ್ತು. ಆದರೆ ಬಾಲಕ ಸುಹಾಸ್ ಹೇಳಿದ್ದ ಅಣ್ಣನ ಹೆಸರನ್ನ ಫೇಸ್ ಬುಕ್‌ನಲ್ಲಿ ಹುಡುಕಾಡಿದಾಗ ಪಶ್ಚಿಮ ಬಂಗಾಳದಲ್ಲಿರುವ ತನ್ನ ಅಣ್ಣನ ಪೋಟೋವನ್ನ ಗುರುತಿಸಿದ್ದ. 

ಇದನ್ನೂ ಓದಿ: "ಮೋದಿ, ಶಿವನು ವಿಷ ಕುಡಿದಂತೆ ನೋವು ಸಹಿಸಿಕೊಂಡಿದ್ದರು"

ಕೂಡಲೇ ಮೆಸೇಂಜರ್ ಮೂಲಕ ಆತನ ಅಣ್ಣನನ್ನ ಸಂಪರ್ಕಿಸಿದ ನಿತಿನ್ ಹಾಗೂ ಶ್ರೀಧರ್ ಆತನ ಪೋಷಕರು ಬರುವವರೆಗೂ ಬೇಕರಿಯಲ್ಲೇ ಮಲಗಲು ಜಾಗ ಕೊಟ್ಟು, ಹೇರ್ ಕಟಿಂಗ್ ಮಾಡಿಸಿ, ಊಟ ಬಟ್ಟೆ ಕೊಟ್ಟು ನೋಡಿಕೊಂಡಿದ್ದಾರೆ. 

ಇದನ್ನೂ ಓದಿ: Zodiac Sign: ಈ ರಾಶಿಗಳ ಜನರು ಕಾಲಲ್ಲಿ ಕಪ್ಪು ದಾರ ಕಟ್ಟಿಕೊಳ್ಳಬಾರದು

ಒಂದು ವಾರದ ಬಳಿಕ ಸುಹಾಸ್ ಪೋಷಕರು ಬೆಂಗಳೂರಿಗೆ ಬಂದಿದ್ದು ಮಗನನ್ನ ಕಂಡು ತಾಯಿ ಕಣ್ಣೀರು ಹಾಕಿದ ದೃಶ್ಯ ಎಲ್ಲರ ಕಣ್ಣಾಲಿಯನ್ನು ಒದ್ದೆ ಮಾಡಿದ್ದವು. ಒಂದು ವರ್ಷದ ಹಿಂದೆ ಊರಿನ ಬಳಿ ಕಣ್ಣಾಮುಚ್ಚಾಲೆ ಆಡುವಾಗ ಗೂಡ್ಸ್ ಟ್ರೈನ್ ಹತ್ತಿ ನಾಪತ್ತೆಯಾಗಿದ್ದ ಬಾಲಕ ದಿಕ್ಕು ತೋಚದೆ ಊರೂರು ಅಲೆದು ಕೊನೆಗೆ ನಗರಕ್ಕೆ ಬಂದು ಸೇರಿದ್ದ. ವರ್ಷದ ಬಳಿಕ ಯುವಕರ ಸಹಾಯದಿಂದ ತಾಯಿಯ ಮಡಿಲು ಸೇರಿದ್ದು ಮಾನವೀಯತೆಗೆ ಸಾಕ್ಷಿಯಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News