Shravan Somvar 2021: ಶ್ರಾವಣ ಸೋಮವಾರದ ವೃತದ ವೇಳೆ ಈ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಿ
Shravan Somvar 2021: ಕೆಲ ಜನರು ಸಿರಿಧಾನ್ಯ ಹಾಗೂ ಸಾಮಾನ್ಯ ಊಟವನ್ನು ಬಿಟ್ಟು ವೃತದ ವೇಳೆ ಹಣ್ಣು-ಹಂಪಲ, ಹಾಲು ಹಾಗೂ ವೃತಕ್ಕೆ ಸಂಬಂಧಿಸಿದ ಇತರೆ ಆಹಾರಗಳನ್ನು ಸೇವಿಸುತ್ತಾರೆ.
Shravan Somvar 2021: ಉಪವಾಸ ಕೇವಲ ಧಾರ್ಮಿಕ ಮಹತ್ವವನ್ನು ಮಾತ್ರ ಹೊಂದಿರದೆ ಶಾರೀರಿಕ ದೃಷ್ಟಿಯಿಂದಲೂ ಕೂಡ ಲಾಭಾಕಾರಿಯಾಗಿದೆ. ಉಪವಾಸದಿಂದ ಜೀರ್ಣಾಂಗ ವ್ಯವಸ್ಥೆಗೆ ಆರಾಮ ಸಿಗುತ್ತದೆ ಹಾಗೂ ಶರೀರದ ಮೆಟಾಬಾಲಿಕ್ ರೇಟ್ ಕೂಡ ಹೆಚ್ಚಾಗುತ್ತದೆ. ಆದರೆ, ಈ ಸಂದರ್ಭದಲ್ಲಿ ಕೆಲ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ತುಂಬಾ ಆವಶ್ಯಕವಾಗಿದೆ. ಇಲ್ಲದಿದ್ದರೆ ವಿಪರೀತ ಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ. ಈ ವರ್ಷ ಆಗಸ್ಟ್ 9, 2021 ರಿಂದ ಅಂದರೆ ಸೋಮವಾರದಿಂದಲೇ ಶ್ರಾವಣ ಮಾಸ (Shravan Masa) ಆರಂಭಗೊಳ್ಳುತ್ತಿದೆ . ಸೆಪ್ಟೆಂಬರ್ 6 ರಂದು ಅಮಾವಾಸ್ಯೆಯೊಂದಿಗೆ ಮುಕ್ತಾಯವಾಗಲಿದೆ. ಶ್ರಾವಣ ಮಾಸದಲ್ಲಿ ಜನರು ದೇವಾಧಿವೇವ ಮಹಾದೇವನಿಗೆ (Lord Shiva) ಪೂಜೆ ಸಲಿಸುತ್ತಾರೆ. ಆದರೆ, ಈ ಬಾರಿ ಕೊರೊನಾ ಮಹಾಮಾರಿಯ ಕಾರಣ ಜನರು ತಮ್ಮ-ತಮ್ಮ ಮನೆಗಳಲ್ಲಿಯೇ ಶಿವಲಿಂಗಕ್ಕೆ ಜಲ ಅರ್ಪಿಸಿ ಆರಾಧನೆ ಕೈಗೊಳ್ಳಲಿದ್ದಾರೆ. ಶ್ರಾವಣ ಸೋಮವಾರವನ್ನು (Shravan Somvar Upavas) ಶಿವನಿಗೆ ಅರ್ಪಿತವಾದ ದಿನ ಈ ದಿನ ವೃತ ಹಾಗೂ ಉಪವಾಸ ಕೈಗೊಳ್ಳುವುದಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಹೀಗಿರುವಾಗ ಒಂದು ವೇಳೆ ನೀವೂ ಕೂಡ ಶ್ರಾವಣ ಸೋಮವಾರದನ್ಧು ಉಪವಾಸ ಕೈಗೊಳ್ಳುತ್ತಿದ್ದರೆ, ಉಪವಾಸದ ವೇಳೆ ಯಾವ ಸಂಗತಿಗಳನ್ನು ಅನುಸರಿಸುವ ಮೂಲಕ ಆರೋಗ್ಯವನ್ನು ಸುಧಾರಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ. ಶ್ರಾವಣ ಸೋಮಾವಾರದ ವೃತದ ವೇಳೆ ಎನ್ನನ್ನು ಸೇವಿಸಬೇಕು ಮತ್ತು ಏನನ್ನು ಸೇವಿಸಬಾರದು ನೋಡೋಣ ಬನ್ನಿ.
ವ್ಯಕ್ತಿಯೋರ್ವ ಎಷ್ಟು ಕಠಿಣ ವೃತ (Shravan Somvar Vruta) ಕೈಗೊಳ್ಳಬಹುದು ಇದು ಆ ವ್ಯಕ್ತಿಯ ದೃಢತೆ, ಧಾರ್ಮಿಕ ನಂಬಿಕೆ ಹಾಗೂ ಆರೋಗ್ಯವನ್ನು ಆಧರಿಸಿದೆ. ಕೆಲ ಜನರು ದಿನವಿಡೀ ಉಪವಾಸವಿದ್ದು, ಸಂಜೆ ಹೊತ್ತಿನಲ್ಲಿ ಅಲ್ಪೋಪಹಾರ ಸೇವಿಸುತ್ತಾರೆ. ಇನ್ನೊಂದೆಡೆ ಕೆಲ ಜನರು ಸಿರಿಧಾನ್ಯಗಳಿಂದ ತಯಾರಿಸಲಾಗುವ ಅಥವಾ ಸಾಮಾನ್ಯವಾಗಿ ಸೇವಿಸುವ ಆಹಾರದ ಜಾಗದಲ್ಲಿ ಹಣ್ಣು-ಹಂಪಲ, ಹಾಲು ಮತ್ತು ವೃತಕ್ಕೆ ಸಂಬಂಧಿಸಿದ ಇತರೆ ಆಹಾರಗಳನ್ನು ಸೇವಿಸುವ ಮೂಲಕ ಉಪವಾಸ ಕೈಗೊಳ್ಳುತ್ತಾರೆ. ಮತ್ತೆ ಕೆಲವರು ದಿನವೊಂದರಲ್ಲಿ ಉಪ್ಪುರಹಿತ ಒಪ್ಪತ್ತು ಊಟ ಮಾಡಿ ವೃತ ಕೈಗೊಳ್ಳುತ್ತಾರೆ. ಹೀಗಿರುವಾಗ ನೀವೂ ಕೂಡ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಯೇ ಯಾವ ವಿಧಾನದಿಂದ ಉಪವಾಸ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಬೇಕು.
ಉಪವಾಸ ವೃತ ಕೈಗೊಳ್ಳುವಾಗ ಈ ಸಂಗತಿಗಳನ್ನು ನೆನಪಿನಲ್ಲಿಡಿ
>> ಉಪವಾಸದ ಸಂದರ್ಭದಲ್ಲಿ ಶರೀರದಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಿ. ಉಪವಾಸದ ದಿನ ಸುಮಾರ್ಉ 6 ರಿಂದ 8 ಗ್ಲಾಸ್ ನೀರನ್ನು ಕುಡಿಯಿರಿ.
>> ಉಪವಾಸದ ಸಮಯದಲ್ಲಿ ಸಾಕಷ್ಟು ನೀರಿನ ಪ್ರಮಾಣ ಹೊಂದಿರುವ ಹಣ್ಣುಗಳನ್ನೂ ಸೇವಿಸಿ, ಉದಾಹರಣೆಗೆ-ಕಿತ್ತಳೆ, ನಿಂಬೆ, ಮೋಸಂಬಿ ಹಣ್ಣು ಇತ್ತ್ಯಾದಿಗಳು.
>> ಹೊಟ್ಟೆ ಖಾಲಿ ಇರುವ ಕಾರಣ ಅಸಿಡಿಟಿ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಆಗಾಗ ಅಲ್ಪೋಪಹಾರ ಸೇವಿಸುತ್ತಲೇ ಇರಿ.
>> ಉಪವಾಸದ ವೇಳೆ ನೀವು ಡ್ರೈಫ್ರೂಟ್ ಗಳನ್ನೂ ಸೇವಿಸಬಹುದು. ಇದರಿಂದ ಶರೀರಕ್ಕೆ ಶಕ್ತಿ ದೊರೆಯುತ್ತದೆ ಹಾಗೂ ದುರ್ಬಲತೆಯ ಅನುಭವ ಉಂಟಾಗುವುದಿಲ್ಲ.
ವೃತದ ವೇಳೆ ಏನು ಸೇವಿಸಬೇಕು?
>> ಉಪಹಾರದ ವೇಳೆ ಸ್ಕೀಮ್ದ್ ಮಿಲ್ಕ್ ಜೊತೆಗೆ ಹಣ್ಣುಗಳನ್ನು ಸೇವಿಸಬಹುದು ಅಥವಾ ಹಾಲಿನ ಜೊತೆಗೆ ನೆನೆ ಇಟ್ಟ ಬಾದಾಮ ಸೇವಿಸಬಹುದು.
>> ಮಧ್ಯಾಹ್ನದ ಊಟದ ವೇಳೆ ಸೈಂಧವ ಉಪ್ಪು ಬೆರೆಸಿದ ಸಾಬುದಾಣಿ ಖಿಚಡಿ ಸೇವಿಸುವುದು ಉತ್ತಮ. ಇದನ್ನು ನೀವು ಮೊಸರಿನ ಜೊತೆಗೆ ಅಥವಾ ಶೇಂಗಾ ಸಾರಿನ ಜೊತೆಗೆ ಸೇವಿಸಬಹುದು.
>> ಒಂದು ವೇಳೆ ನೀವು ಉಪ್ಪನ್ನು ಸೇವಿಸುವುದಿಲ್ಲ ಎಂದಾದಲ್ಲಿ ಮೊಸರನ್ನು ಸೇವಿಸಬಹುದು. ಹಾಲು ಕುಡಿಯಬಹುದು ಅಥವಾ ಹಾಲಿನಿಂದ ತಯಾರಿಸಲಾಗುವ ಯಾವುದೇ ಸಿಹಿ ಪದಾರ್ಥ ಸೇವಿಸಬಹುದು.
>> ಸಂಜೆಯ ಹೊತ್ತು ಒಣ ಮೇವಾ ಅಥವಾ ಟೀ ಜೊತೆಗೆ ಆಲುಗಡ್ಡೆ ಚಿಪ್ಸ್, ರೋಸ್ಟೆಡ್ ಮಖನಾಗಳಂತಹ ಪದಾರ್ಥಗಳನ್ನು ಸಹ ಸೇವಿಸಬಹುದು.
ಇದನ್ನೂ ಓದಿ-Guru Purnima 2021 ಈ ದಿನ ಗುರು ಪೌರ್ಣಿಮೆ ಆಚರಿಸಲಾಗುವುದು, ಇಲ್ಲಿದೆ ಶುಭ ಮುಹೂರ್ತ ಹಾಗೂ ಮಹತ್ವ
ವೃತ ಕೈಗೊಂಡ ವೇಳೆ ಇವುಗಳನ್ನು ಪಾಲಿಸಿ
>> ವೃತದ ಅವಧಿಯಲ್ಲಿ ಅಧಿಕ ಕರಿದ ಪದಾರ್ಥಗಳನ್ನು ಸೇವಿಸಬೇಡಿ. ಏಕೆಂದರೆ, ಇದರಿಂದ ಶರೀರದಲ್ಲಿ ಕ್ಯಾಲೋರಿ ಪ್ರಮಾಣ ವಿಪರೀತ ಹೆಚ್ಚಾಗುತ್ತದೆ. ಪ್ರೋಟಿನ್, ಫ್ಯಾಟ್, ಕಾರ್ಬೋಹೈಡ್ರೆಟ್, ವಿಟಮಿನ್ ಹಾಗೂ ಮಿನರಲ್ ಗಳ ಜೊತೆಗೆ ಎಲ್ಲಾ ಅತ್ಯಾವಶ್ಯಕ ಪೋಷಕಾಂಶಗಳ ಸೇವನೆ ಅವಶ್ಯಕವಾಗಿ ಮಾಡಿ.
>> ಈ ಅವಧಿಯಲ್ಲಿ ಅತಿಯಾಗಿ ಆಲೂಗಡ್ಡೆಯ ಪದಾರ್ಥಗಳನ್ನು ಸೇವಿಸಬೇಡಿ.
>> ವೃತದ ಅವಧಿಯಲ್ಲಿ ಆಯಾಸ ಅಥವಾ ಸುಸ್ತಿಯಿಂದ ಪಾರಾಗಲು ಪನೀರ್ ಹಾಗೂ ಫುಲ್ ಕ್ರೀಂ ಹಾಲನ್ನು ಸೇವಿಸಬೇಡಿ. ಇವುಗಳ ಬದಲಾಗಿ ತಾಜಾ ಹಣ್ಣಿನ ರಸವನ್ನು ಸೇವಿಸಿ.
ಇದನ್ನೂ ಓದಿ-Tips To Get Rid Of Financial Problem: ಲಕ್ಷ್ಮಿಯ ಕೃಪಾವೃಷ್ಟಿಗಾಗಿ ಭಾನುವಾರ ಖಂಡಿತ ಈ ಉಪಾಯಗಳನ್ನು ಅನುಸರಿಸಿ
(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪದಿಸುವುದಿಲ್ಲ. ಇವುಗಳನ್ನು ಅನುಸರಿಸುವ ಮೊದಲು ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರ ಸಲಹೆಯನ್ನು ಪಡೆಯಲು ಮರೆಯಬೇಡಿ)
ಇದನ್ನೂ ಓದಿ- Garuda Purana: ಗರುಡ ಪುರಾಣದ ಪ್ರಕಾರ ಇವುಗಳನ್ನು ಕಂಡರೆ ಸಾಕು ತಾಯಿ ಲಕ್ಷ್ಮೀ ಕೃಪೆಗೆ ಪಾತ್ರರಾಗಬಹುದು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ