ಶ್ರಾವಣ ಮಾಸದಲ್ಲಿ ಮಹಾಶಿವನ ಪೂಜೆಯ ವೇಳೆ ಈ ವಿಚಾರಗಳು ತಿಳಿದಿರಲಿ, ಶಿವನ ಪೂಜೆ ವೇಳೆ ಈ ವಸ್ತುಗಳ ಬಳಕೆ ನಿಷಿದ್ಧ

ಬಿಲ್ವ ಪತ್ರೆಯೆಂದರೆ ಶಿವನಿಗೆ ತುಂಬಾ ಪ್ರಿಯವಾದದ್ದು. ಶ್ರಾವಣದ  ಶಿವ ಪೂಜೆ ವೇಳೆ ಮಹಾದೇವನಿಗೆ ಏನು ಅರ್ಪಿಸಬೇಕು ಏನು ಅರ್ಪಿಸಬಾರದು ಎನುವುದನ್ನು ತಿಳಿದುಕೊಳ್ಳುವುದು ಉತ್ತಮ.   

Written by - Ranjitha R K | Last Updated : Jul 18, 2021, 08:36 AM IST
  • ಶಿವನ ಆರಾಧನೆಗೆ ಸಂಬಂಧಿಸಿದ ಈ ನಿಯಮಗಳನ್ನು ತಿಳಿದಿರಬೇಕು
  • ಇಲ್ಲದಿದ್ದರೆ ಪೂಜೆ ನಿಷ್ಪ್ರಯೋಜಕವಾಗಬಹುದು
  • ಶಿವನ ಪೂಜೆಯಲ್ಲಿ ಕೆಲ ವಸ್ತುಗಳನ್ನು ಬಳಸುವಂತೆ ಇಲ್ಲ.
ಶ್ರಾವಣ ಮಾಸದಲ್ಲಿ ಮಹಾಶಿವನ ಪೂಜೆಯ ವೇಳೆ ಈ ವಿಚಾರಗಳು ತಿಳಿದಿರಲಿ, ಶಿವನ ಪೂಜೆ ವೇಳೆ ಈ ವಸ್ತುಗಳ ಬಳಕೆ ನಿಷಿದ್ಧ   title=
ಶಿವನ ಆರಾಧನೆಗೆ ಸಂಬಂಧಿಸಿದ ಈ ನಿಯಮಗಳನ್ನು ತಿಳಿದಿರಬೇಕು (photo zee news)

ನವದೆಹಲಿ : ಇನ್ನೇನು ಶ್ರಾವಣ ಮಾಸ (Shraavana month) ಆರಂಭವಾಗಲಿದೆ. ಶಿವನಿಗೆ ಅರ್ಪಿತವಾದ ಈ ತಿಂಗಳಲ್ಲಿ ಆತನನ್ನು ಪೂರ್ಣ ಭಕ್ತಿಯಿಂದ ಪೂಜಿಸಲಾಗುತ್ತದೆ. ದೇವಾಲಯಗಳು ಮತ್ತು ಮನೆಗಳಲ್ಲಿ ರುದ್ರಾಭಿಷೇಕ ನಡೆಯುತ್ತದೆ. ಅನೇಕ ಜನರು ಪ್ರತಿದಿನ ಶಿವಲಿಂಗಕ್ಕೆ ನೀರು,  ಪಂಚಮೃತ ಮತ್ತು ಬಿಲ್ವ ಪತ್ರೆಯನ್ನು ಅರ್ಪಿಸುತ್ತಾರೆ. ಬಿಲ್ವ ಪತ್ರೆಯೆಂದರೆ ಶಿವನಿಗೆ ತುಂಬಾ ಪ್ರಿಯವಾದದ್ದು. ಶ್ರಾವಣದ  ಶಿವ ಪೂಜೆ ವೇಳೆ ಮಹಾದೇವನಿಗೆ (Lord Shiva) ಏನು ಅರ್ಪಿಸಬೇಕು ಏನು ಅರ್ಪಿಸಬಾರದು ಎನುವುದನ್ನು ತಿಳಿದುಕೊಳ್ಳುವುದು ಉತ್ತಮ. 

ಈ ವಸ್ತುಗಳೆಂದರೆ ಮಹಾದೇವನಿಗೆ ಅತ್ಯಂತ ಪ್ರಿಯ  : 

ಹಾಲು : ಶಿವನಿಗೆ (Lord Shiva) ಹಾಲು ಅರ್ಪಿಸುವ ಹಿಂದಿನ ಕಾರಣ ಸಾಗರದ ಮಂಥನಕ್ಕೆ ಸಂಬಂಧಿಸಿದೆ.  ಸಮುದ್ರ ಮಂಥನದಲ್ಲಿ ಹೊರಬಂದ ವಿಷವನ್ನು ಸ್ವೀಕರಿಸಿದ ಈಶ್ವರನ ದೇಹ ವಿಷದಿಂದಾಗಿ ಉರಿಯಲು ಪ್ರಾರಂಭಿಸಿತು. ಆ ಸಮಯದಲ್ಲಿ ದೇವರು ಮತ್ತು ದೇವತೆಗಳು ಹಾಲು (Milk) ಕುಡಿಯುವಂತೆ ಶಿವನನ್ನು ಒತ್ತಾಯಿಸಿದರಂತೆ. ಹಾಲು ಕುಡಿದ ನಂತರ, ಶಿವನ ದೇಹದ ಉರಿ ಕಡಿಮೆಯಾಯಿತಂತೆ.  ಅದಕ್ಕಾಗಿಯೇ ಹಾಲು ಶಿವನಿಗೆ ತುಂಬಾ ಪ್ರಿಯವಾಗಿದ್ದು, ಹಾಲಿನ ಅಭಿಷೇಕ ಮಾಡಲಾಗುತ್ತದೆ. 

ಇದನ್ನು ಓದಿ : Tips To Get Rid Of Financial Problem: ಲಕ್ಷ್ಮಿಯ ಕೃಪಾವೃಷ್ಟಿಗಾಗಿ ಭಾನುವಾರ ಖಂಡಿತ ಈ ಉಪಾಯಗಳನ್ನು ಅನುಸರಿಸಿ

ಬಿಲ್ವ ಪತ್ರೆ : ಶಿವನ ಪೂಜೆಯ ವೇಳೆ ಕಡ್ಡಾಯವಾಗಿ ಬಿಲ್ವಪತ್ರೆ ಅರ್ಪಿಸಲಾಗುತ್ತದೆ. ಇದಲ್ಲದೆ ಧಾತುರಾ, ಶ್ರೀಗಂಧ, ಸುಗಂಧ ದ್ರವ್ಯ, ಅಕ್ಷತೆ, ಸಕ್ಕರೆ (Sugar), ಮೊಸರು, ತುಪ್ಪ, (Ghee) ಜೇನುತುಪ್ಪ, ಗಂಗಾಜಲವನ್ನು ಶಿವನಿಗೆ ಅರ್ಪಿಸಲಾಗುತ್ತದೆ. ಈ ಎಲ್ಲಾ ವಸ್ತುಗಳೆಂದರೆ ಶಿವನಿಗೆ ಬಹಳ ಪ್ರಿಯ.

ಕಾನರ್ ಹೂ: ಕಾನರ್ ಹೂವು ಅಂದರೆ ಮಿಠಾಯಿ ಹೂವು ಶಿವನಿಗೆ ತುಂಬಾ ಪ್ರಿಯವಾಗಿದೆ. ಈ ಹೂವನ್ನು ಈ ತಿಂಗಳು ಪೂರ್ತಿ ಶಿವನಿಗೆ ಅರ್ಪಿಸಿದರೆ ಭಕ್ತರ ಎಲ್ಲಾ ಆಸೆಗಳು ಈಡೇರುತ್ತವೆದೆಯಂತೆ. ಇದಲ್ಲದೆ, ಎಕ್ಕದ ಹೂವುಗಳನ್ನು ಅರ್ಪಿಸುವುದು ಸಹ ತುಂಬಾ ಒಳ್ಳೆಯದು.

ಈ ವಸ್ತುಗಳನ್ನು ಶಿವ ಪೂಜೆಯಿಂದ ದೂರ ಇಡಿ :  
ಶಿವನ ಆರಾಧನೆ-ಅಭಿಷೇಕದ ಸಮಯದಲ್ಲಿ ಕೆಲವು ವಸ್ತುಗಳನ್ನು ಅರ್ಪಿಸುವುದನ್ನು ನಿಷೇಧಿಸಲಾಗಿದೆ. ಅವುಗಳೆಂದರೆ ತುಳಸಿ ಎಲೆಗಳು(Tulsi leaves), ಕೇದಗೆ ಹೂವು ಇತ್ಯಾದಿ. ಅಲ್ಲದೆ ಶಿವನ ಪೂಜೆಯಲ್ಲಿ ಶಂಖವನ್ನು ಎಂದಿಗೂ ಬಳಸಬಾರದು. ಅದೇ ರೀತಿ, ಶಿವನಿಗೆ ಶ್ರೀಗಂಧವನ್ನು ಮಾತ್ರ ಅರ್ಪಿಸಿ, ಕುಂಕುಮವನ್ನು ಬಳಸಬಾರದು. 

ಇದನ್ನು ಓದಿ : Garuda Purana: ಗರುಡ ಪುರಾಣದ ಪ್ರಕಾರ ಇವುಗಳನ್ನು ಕಂಡರೆ ಸಾಕು ತಾಯಿ ಲಕ್ಷ್ಮೀ ಕೃಪೆಗೆ ಪಾತ್ರರಾಗಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News