Venus Transit 2023: ಶುಕ್ರನಿಗೆ ಪ್ರೇಮ, ಸೌಂದರ್ಯ ಹಾಗೂ ಧನದ ಕಾರಕ ರೋಮನ್ ದೇವನನ್ನು ಆಧರಿಸಿ 'ಪ್ಲಾನೆಟ್ ಆಫ್ ಲವ್' ಎಂದು ಕರೆಯಲಾಗುತ್ತಿತ್ತು. ಏಕೆಂದರೆ ದೀರ್ಘ ಕಾಲದಿಂದ ಭಾಗ್ಯದ ಅಧಿಪತಿಯ ರೂಪದಲ್ಲಿ ಶುಕ್ರನನ್ನು ನೋಡಲಾಗುತ್ತದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರ ಭೌತಿಕ ಮತ್ತು ಐಷಾರಾಮಿ ಜೀವನ ಎಲ್ಲದರೊಂದಿಗೆ ಸಂಬಂಧ ಹೊಂದಿದೆ. ಶುಕ್ರವು ನಿಮ್ಮ ಜನ್ಮ ಜಾತಕದಲ್ಲಿ ನಿಮ್ಮ ಹೃದಯದ ಭಾಗ್ಯವನ್ನು ಬೆಳಗಿಸುತ್ತದೆ, ಇದು ನಿಮ್ಮೊಳಗೆ ನೀವು ಟ್ಯೂನ್ ಮಾಡುವ ವಿಭಿನ್ನ ವಿಧಾನಗಳನ್ನು ಪ್ರತಿನಿಧಿಸುತ್ತದೆ, ಇತರರೊಂದಿಗೆ ನಿಮ್ಮ ಸಂವಹನ ಮತ್ತು ನಿಮ್ಮ ಪರಿಸರದಲ್ಲಿ ನಿಮ್ಮ ಪ್ರೀತಿಯನ್ನು ಪ್ರತಿನಿಧಿಸುತ್ತದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳು ರಾಶಿಗಳಲ್ಲಿ ವಿಭಿನ್ನ ಮಾರ್ಗಗಳ ಮೂಲಕ ಚಲಿಸುತ್ತವೆ ಮತ್ತು ಮುಂದಕ್ಕೆ ಸಾಗುತ್ತವೆ. ಈ ಬಾರಿ ಶುಕ್ರ ಮೀನ ರಾಶಿಯಲ್ಲಿ ಪ್ರವೇಶಿಸಲಿದ್ದಾನೆ. ಫೆಬ್ರವರಿ 15 ರಂದು 9:43 ಕ್ಕೆ ಶುಕ್ರನ ಈ ಮೀನ ರಾಶಿ ಸಂಕ್ರಮಣ ನೆರವೇರಲಿದೆ.


COMMERCIAL BREAK
SCROLL TO CONTINUE READING

ಮೇಷ ರಾಶಿಯ ಮೇಲೆ ಶುಕ್ರ ಸಂಚಾರದ ಪರಿಣಾಮ
ದ್ವಿತೀಯ ಮತ್ತು ಸಪ್ತಮ ಭಾವದ ಅಧಿಪತಿಯಾಗಿರುವ ಶುಕ್ರ ನಿಮ್ಮ ಜಾತಕದ ದ್ವಾದಶ ಭಾವಕ್ಕೆ ಸಾಗುತ್ತಿದ್ದಾನೆ. ಶುಕ್ರನು ನಿಮ್ಮ ಜಾತಕದ 12ನೇ ಭಾವಕ್ಕೆ ಪ್ರವೇಶಿಸುವುದರಿಂದ, ನಿಮ್ಮ ಖರ್ಚು ಮತ್ತು ಭೌತಿಕ ತೃಪ್ತಿಯನ್ನು ಪಡೆಯಲು ನೀವು ಖಂಡಿತವಾಗಿಯೂ ಐಷಾರಾಮಿ ಸಂಗತಿಗಳಿಗೆ ಹಣವನ್ನು ವೆಚ್ಚ ಮಾಡುವಿರಿ. ಖಾಸಗಿ ವಲಯದಲ್ಲಿ ಕೆಲಸ ಮಾಡುವ ಜನರು ಕೆಲಸದ ಸ್ಥಳದಲ್ಲಿ ಬಡ್ತಿ ಅಥವಾ ಯಾವುದೇ ಹೆಚ್ಚುವರಿ ಜವಾಬ್ದಾರಿಯನ್ನು ಪಡೆಯಬಹುದು, ಇದು ಆರ್ಥಿಕ ಪ್ರಯೋಜನಗಳನ್ನು ಸಹ ನೀಡಲಿದೆ. ಮೀನ ರಾಶಿಯಲ್ಲಿ ಶುಕ್ರನ ಸಂಚಾರದ ಅವಧಿಯಲ್ಲಿ, ತಮ್ಮ ವ್ಯವಹಾರವನ್ನು ನಡೆಸುತ್ತಿರುವ ಜನರು ಉತ್ತಮ ಆರ್ಥಿಕ ಲಾಭವನ್ನು ಪಡೆಯುತ್ತಾರೆ ಮತ್ತು ಅವರು ತಮ್ಮ ವ್ಯವಹಾರವನ್ನು ವಿಸ್ತರಿಸುವಲ್ಲಿ ಯಶಸ್ವಿಯಾಗುವ ಸಾಧ್ಯತೆ ಇದೆ. ವೃತ್ತಿಜೀವನದಲ್ಲಿ ಮುಂದುವರಿಯಲು ಇದು ಉತ್ತಮ ಸಮಯ. ವಿದೇಶ ಸಂಚಾರಕ್ಕೆ ಇದು ಉತ್ತಮ ಕಾಲ.


ವೃಷಭ ರಾಶಿಯ ಮೇಲೆ ಶುಕ್ರ ಸಂಚಾರದ ಪ್ರಭಾವ
ವೃಷಭ ರಾಶಿಯವರಿಗೆ ಶುಕ್ರ ಪ್ರಥಮ ಮತ್ತು ಶಷ್ಠಮ ಭಾವದ ಅಧಿಪತಿಯಾಗಿದ್ದು, ಇದೀಗ ಏಕಾದಶ ಭಾವದಲ್ಲಿ  ಉಚ್ಛ್ರಾಯ ಸ್ಥಿತಿಯಲ್ಲಿರನಿದ್ದಾನೆ. ಈ ಅವಧಿಯಲ್ಲಿ ನಿಮ್ಮ ಎಲ್ಲಾ ಗುರಿಗಳು ಮತ್ತು ಆಸೆಗಳನ್ನು ಈಡೇರಲಿವೆ, ಶಾಂತಿ ಮತ್ತು ಮಾನಸಿಕ ತೃಪ್ತಿಯನ್ನು ಹೊಂದುವಿರಿ. ಮೀನ ರಾಶಿಯಲ್ಲಿ ಶುಕ್ರನ ಸಂಚಾರದ ಸಮಯದಲ್ಲಿ, ನಿಮ್ಮ ವ್ಯವಹಾರವು ಅಭಿವೃದ್ಧಿ ಹೊಂದುತ್ತದೆ ಮತ್ತು ಉತ್ತಮ ಲಾಭವನ್ನು ನೀಡುತ್ತದೆ. ಖಾಸಗಿ ಉದ್ಯೋಗಗಳನ್ನು ಮಾಡುವ ಜನರಿಗೆ, ಉದ್ಯೋಗಗಳನ್ನು ಬದಲಾಯಿಸಲು ಅಥವಾ ಹೊಸ ಯೋಜನೆಯನ್ನು ಪ್ರಾರಂಭಿಸಲು ಇದು ಉತ್ತಮ ಸಮಯ.


ಇದನ್ನೂ ಓದಿ-ಕುಂಭ ರಾಶಿಯಲ್ಲಿ ಶನಿ-ಸೂರ್ಯ, 30 ವರ್ಷಗಳ ಬಳಿಕ ಶಿವರಾತ್ರಿ ದಿನ ದುಗ್ಧ ಶರ್ಕರಾ ಯೋಗ ನಿರ್ಮಾಣ, 3 ರಾಶಿಯವರಿಗೆ ಭಾಗ್ಯೋದಯ!


ಮಿಥುನ ರಾಶಿಯ ಮೇಲೆ ಶುಕ್ರ ಸಂಕ್ರಮದ ಪ್ರಭಾವ
ಶುಕ್ರನು ಮಿಥುನ ರಾಶಿಯವರಿಗೆ ಪಂಚಮ ಮತ್ತು ದ್ವಾದಶ ಭಾವದ ಅಧಿಪತಿಯಾಗಿದ್ದು, ವೃತ್ತಿಜೀವನದ ದಶಮ ಭಾವದಲ್ಲಿ ತನ್ನ ಉತ್ಕೃಷ್ಟ ರಾಶಿ ಮೀನದಲ್ಲಿ ಸಾಗುತ್ತಾನೆ. ಮಿಥುನ ರಾಶಿಯವರಿಗೆ ವೃತ್ತಿಪರವಾಗಿ ಇದು ಉತ್ತಮ ಸಮಯ. ಮಿಥುನ ರಾಶಿಯವರು ಈ ಅವಧಿಯಲ್ಲಿ ವೃತ್ತಿಪರ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಮತ್ತು ವ್ಯವಸ್ಥಾಪಕ ಹುದ್ದೆಯಲ್ಲಿದ್ದಾರೆ ಇದು ನಿಮಗೆ ಉತ್ತಮ ಸಮಯವಾಗಿದೆ ಏಕೆಂದರೆ ಅಧಿಕಾರಿಗಳು ನಿಮ್ಮ ಸಲಹೆಗಳು ಮತ್ತು ಪ್ರತಿಕ್ರಿಯೆಗಳಿಗೆ ಗಮನ ಕೊಡುತ್ತಾರೆ. ಆದಾಗ್ಯೂ, ಮೀನದಲ್ಲಿ ಶುಕ್ರನ ಸಂಕ್ರಮಣದ ಸಮಯದಲ್ಲಿ ಅತಿಯಾದ ಆತ್ಮವಿಶ್ವಾಸವನ್ನು ತಪ್ಪಿಸಲು ಸಲಹೆ ನೀಡಲಾಗುತ್ತದೆ. ವಿನ್ಯಾಸಕರು, ನಟರು ಮುಂತಾದ ಸೃಜನಶೀಲ ವೃತ್ತಿಗಳಿಗೆ ಸಂಬಂಧಿಸಿದ ಜನರು ಇನ್ನಷ್ಟು ಪ್ರಯೋಜನ ಪಡೆಯುತ್ತಾರೆ. ಒಳ್ಳೆಯ ದಿನಗಳು ಬರಲಿವೆ.


ಇದನ್ನೂ ಓದಿ-Saturn Rise 2023: ಹೋಳಿ ಹಬ್ಬಕ್ಕೂ ಮುನ್ನ ಈ ರಾಶಿಗಳ ಜನರ ಭಾಗ್ಯೋದಯ, ಬಣ್ಣದ ಬದಲು ಹಣದ ಸುರಿಮಳೆ!


ಕರ್ಕ ರಾಶಿಯ ಮೇಲೆ ಮೇಲೆ ಶುಕ್ರ ಸಂಚಾರದ ಪ್ರಭಾವ
ನಿಮ್ಮ ಜಾತಕದ ಚತುರ್ಥ ಹಾಗೂ ಏಕಾದಶ ಭಾವದ ಅಧಿಪತಿಯಾಗಿರುವ ಶುಕ್ರ ಜಾತಕದ ನವಮ ಭಾವಕ್ಕೆ ಸಾಗುತ್ತಿದ್ದಾನೆ. ಇದರಿಂದ ಕರ್ಕ ರಾಶಿಯವರು ಅಂತಿಮವಾಗಿ ನೆಮ್ಮದಿಯ ನಿಟ್ಟುಸಿರು ಬಿಡಬಹುದು ಏಕೆಂದರೆ ಶುಕ್ರನು ನೌಕರ ವರ್ಗಕ್ಕೆ  ಕೆಲಸದಲ್ಲಿ ಬಹು ನಿರೀಕ್ಷಿತ ಬಡ್ತಿ ಮತ್ತು ಆರ್ಥಿಕ ಲಾಭವನ್ನು ತರಲಿದ್ದಾನೆ. ಏಕೆಂದರೆ ನೀವು ಚೆನ್ನಾಗಿ ಮಾಡಿದ ಕೆಲಸಕ್ಕೆ ಪ್ರತಿಫಲವಾಗಿ ವೇತನ ಹೆಚ್ಚಳವನ್ನು ನೀವು ನಿರೀಕ್ಷಿಸಬಹುದು. ವ್ಯಾಪಾರಸ್ಥರು ಈ ಸಮಯದಲ್ಲಿ ಆರ್ಥಿಕ ಲಾಭವನ್ನು ಆನಂದಿಸುತ್ತಾರೆ. ಕೆಲಸಕ್ಕೆ ಸಂಬಂಧಿಸಿದ ಪ್ರಯಾಣದಿಂದ ನೀವು ಪ್ರಯೋಜನವನ್ನು ಪಡೆಯುವಿರಿ.


ಇದನ್ನೂ ಓದಿ-Valentine's Day 2023: ಪ್ರೀತಿಯ ವಿಷಯದಲ್ಲಿ ತುಂಬಾ ಲಾಯಲ್ ಆಗಿರುತ್ತಾರೆ ಈ ಮೂರು ರಾಶಿಯವರು!

(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ) 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.