Saturn Rise 2023: ಹೋಳಿ ಹಬ್ಬಕ್ಕೂ ಮುನ್ನ ಈ ರಾಶಿಗಳ ಜನರ ಭಾಗ್ಯೋದಯ, ಬಣ್ಣದ ಬದಲು ಹಣದ ಸುರಿಮಳೆ!

Saturn Rise 2023: ಬರುವ ಮಾರ್ಚ್ ತಿಂಗಳಿನಲ್ಲಿ ಹೋಳಿ ಹಬ್ಬ ಆಚರಿಸಲಾಗುತ್ತಿದೆ. ಆದರೆ, ಅದಕ್ಕೂ ಮುನ್ನವೇ ಅಸ್ತಮಿಸಿದ ಶನಿ ದೇವ ಉದಯಿಸಲಿದ್ದಾನೆ. ಶನಿಯ ಈ ಉದಯ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಕೆಲ ರಾಶಿಗಳ ಜನರಿಗೆ ಇದರಿಂದ ಭಾರಿ ಅದೃಷ್ಟ ಒಲಿದು ಬರಲಿದೆ.  

Written by - Nitin Tabib | Last Updated : Feb 8, 2023, 08:16 PM IST
  • ಈ ಬಾರಿಯ ಹೋಳಿ ಹಬ್ಬವನ್ನು ಮಾರ್ಚ್ 8, ಬುಧವಾರ ಆಚರಿಸಲಾಗುತ್ತದೆ.
  • ಈ ರೀತಿ ಹೋಳಿ ಹಬ್ಬಕ್ಕೂ ಮುನ್ನವೇ ಶನಿಯು ಉದಯಿಸಿದರೆ ತುಂಬಾ ಶುಭಕಾಲ ಆರಂಭಗೊಳ್ಳಲಿದೆ.
  • ಶನಿ ಉದಯವು ವಿಶೇಷವಾಗಿ ಕೆಲ ರಾಶಿಗಳ ಜನರಿಗೆ ತುಂಬಾ ಶುಭ ಫಲಿತಾಂಶಗಳನ್ನು ನೀಡಲಿದೆ.
Saturn Rise 2023: ಹೋಳಿ ಹಬ್ಬಕ್ಕೂ ಮುನ್ನ ಈ ರಾಶಿಗಳ ಜನರ ಭಾಗ್ಯೋದಯ, ಬಣ್ಣದ ಬದಲು ಹಣದ ಸುರಿಮಳೆ! title=
ಹೋಳಿ ಹಬ್ಬಕ್ಕೂ ಮುನ್ನ ಶನಿ ಉದಯ

Shani Uday 2023: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಯಾವುದೇ ಗ್ರಹವು ಸೂರ್ಯನಿಗೆ ಹತ್ತಿರ ಬಂದಾಗ, ಆ ಗ್ರಹವು ಅಸ್ತಮಿಸುತ್ತದೆ. ಯಾವುದೇ ಒಂದು ಗ್ರಹ ಅಸ್ತಮಿಸಿದಾಗ ಅದರ ಪ್ರಭಾವ ಕಡಿಮೆಯಾಗುತ್ತದೆ ಮತ್ತು ಅದು ಅಶುಭ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿ ಗ್ರಹಗಳು ಅಸ್ತಮಿಸುವುದು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಪ್ರಸ್ತುತ ಶನಿ ಅಸ್ತಮ ಭಾವದಲ್ಲಿದ್ದಾನೆ ಮತ್ತು ಮಾರ್ಚ್ 6, 2023 ರಂದು ಶನಿಯ ಉದಯ ಮತ್ತೊಮ್ಮೆ ನೆರವೇರಲಿದೆ. ಮತ್ತೊಂದೆಡೆ,  ಈ ಬಾರಿಯ ಹೋಳಿ ಹಬ್ಬವನ್ನು ಮಾರ್ಚ್ 8, ಬುಧವಾರ ಆಚರಿಸಲಾಗುತ್ತದೆ. ಈ ರೀತಿ ಹೋಳಿ ಹಬ್ಬಕ್ಕೂ ಮುನ್ನವೇ ಶನಿಯು ಉದಯಿಸಿದರೆ ತುಂಬಾ ಶುಭಕಾಲ ಆರಂಭಗೊಳ್ಳಲಿದೆ. ಶನಿ ಉದಯವು ವಿಶೇಷವಾಗಿ ಕೆಲ ರಾಶಿಗಳ ಜನರಿಗೆ ತುಂಬಾ ಶುಭ ಫಲಿತಾಂಶಗಳನ್ನು ನೀಡಲಿದೆ.

ಶನಿ ಉದಯದಿಂದ ಈ ರಾಶಿಗಳ ಭಾಗ್ಯೋದಯ
ಶನಿಯು 31 ಜನವರಿ 2023 ರಂದು ಅಸ್ತಮಿಸಿತ್ತು. ಇದೀಗ ಮಾರ್ಚ್ 6, 2023 ರಂದು, ಶನಿಯು ಉದಯಿಸುತ್ತಿದ್ದಾನೆ ಮತ್ತು ಕೆಲ ರಾಶಿಗಳ ಜನರ ಜೀವನದಲ್ಲಿ ಭಾಗ್ಯದ ಬಾಗಿಲನ್ನೇ ತೆರೆಯಲಿದ್ದಾನೆ. 

ವೃಷಭ ರಾಶಿ: ಶನಿ ಉದಯ ವೃಷಭ ರಾಶಿಯವರಿಗೆ ಅದೃಷ್ಟವನ್ನು ಬೆಳಗಲಿದೆ. ಈ ಜನರ ನಿಂತು ಹೋದ ಕೆಲಸಗಳು ಪೂರ್ಣಗೊಳ್ಳಲು ಆರಂಭಗೊಳ್ಳಲಿವೆ. ಹೊಸ ಕೆಲಸದ ಆಫರ್ ಬರಬಹುದು. ಆದಾಯದಲ್ಲಿ ಹೆಚ್ಚಳವಾಗಲಿದೆ. ಯಾವುದೇ ಒಂದು ದೊಡ್ಡ ಯಶಸ್ಸನ್ನು ನೀವು ಸಾಧಿಸಬಹುದು. ಮದುವೆ ನಿಶ್ಚಯವಾಗಬಹುದು.

ಸಿಂಹ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಿಂಹ ರಾಶಿಯವರಿಗೆ ಶನಿ ಉದಯವಾಗುವುದು ತುಂಬಾ ಒಳ್ಳೆಯ ಫಲಿತಾಂಶಗಳನ್ನು ತರಲಿದೆ. ಈ ಜನರು ದೊಡ್ಡ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಆರೋಗ್ಯ ವೃದ್ಧಿಯಾಗಲಿದೆ. ಶನಿಯನ್ನು ಆರಾಧಿಸುವುದರಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ.

ಇದನ್ನೂ ಓದಿ-Valentine's Day 2023: ಪ್ರೀತಿಯ ವಿಷಯದಲ್ಲಿ ತುಂಬಾ ಲಾಯಲ್ ಆಗಿರುತ್ತಾರೆ ಈ ಮೂರು ರಾಶಿಯವರು!

ತುಲಾ ರಾಶಿ: ಶನಿಯ ಉದಯವು ತುಲಾ ರಾಶಿಯವರಿಗೆ ಹೆಚ್ಚಿನ ಲಾಭವನ್ನು ನೀಡಲಿದೆ. ಇದುವರೆಗೆ ಇದ್ದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರಲಿದೆ. ಸಾಲದಿಂದ ಮುಕ್ತಿ ಸಿಗಲಿದೆ. ಹಣವು ಪ್ರಯೋಜನಗಳು ನಿಮಗೆ ಪ್ರಾಪ್ತಿಯಾಗಲಿವೆ. ವೃತ್ತಿ ಜೀವನದಲ್ಲಿ ಕೆಲ ಸುವರ್ಣಾವಕಾಶಗಳು ಒದಗಿ ಬರಲಿವೆ.

ಇದನ್ನೂ ಓದಿ-Lucky Life Partner: ಇಂತಹ ಹುಡುಗಿಯರು ವಿವಾಹದ ಬಳಿಕ ಮನೆಯನ್ನೇ ಸ್ವರ್ಗವನ್ನಾಗಿಸುತ್ತಾರೆ

ಕುಂಭ ರಾಶಿ: ಶನಿಯ ಉದಯವು ಕುಂಭ ರಾಶಿಯವರಿಗೆ ಅದೃಷ್ಟದ ಬಾಗಿಲನ್ನೇ ತೆರೆಯಲಿದೆ. ಈ ಜನರ ಆದಾಯ ಹೆಚ್ಚಾಗಲಿದೆ. ವೆಚ್ಚಗಳು ಸಹ ಹೆಚ್ಚಾಗಲಿವೆ, ಆದರೆ ಹೆಚ್ಚುವರಿ ಆದಾಯವು ನಿಮಗೆ ಈ ತೊಂದರೆಯಿಂದ ರಕ್ಷಣೆ ಒದಗಿಸಲಿದೆ. ಆರೋಗ್ಯ ಸುಧಾರಿಸಲಿದೆ. ಹೂಡಿಕೆಯೂ ಲಾಭದಾಯಕವಾಗಿರಲಿದೆ. 

ಇದನ್ನೂ ಓದಿ-Solar Eclipse 2023: ಈ ರಾಶಿಗಳ ಜನರ ಮೇಲೆ ವರ್ಷದ ಮೊದಲ ಸೂರ್ಯ ಗ್ರಹಣದ ವಿಶೇಷ ಪ್ರಭಾವ, ಉನ್ನತಿ-ಧನಪ್ರಾಪ್ತಿಯ ಯೋಗ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News