Venus Transit: ನಿಮ್ಮ ರಾಶಿಚಕ್ರದ ಮೇಲೆ ಶುಕ್ರನ ರಾಶಿ ಪರಿವರ್ತನೆ ಪರಿಣಾಮ ಏನೆಂದು ತಿಳಿಯಿರಿ
Venus Transit: ಜೀವನದಲ್ಲಿ ಸಂತೋಷ, ಸಮೃದ್ಧಿ, ಪ್ರಣಯವನ್ನು ತರುವ ಶುಕ್ರ ಗ್ರಹವು ತನ್ನ ರಾಶಿಚಕ್ರವನ್ನು ಬದಲಿಸಿ ಕನ್ಯಾ ರಾಶಿಗೆ ಪ್ರವೇಶಿಸಲಿದೆ. ಶುಕ್ರ ಈ ರಾಶಿ ಪರಿವರ್ತನೆಯು ಕೆಲವರ ಜೀವನದಲ್ಲಿ ಸಂತೋಷವನ್ನು ತುಂಬಲಿದೆ.
ನವದೆಹಲಿ: ಶುಕ್ರ ಗ್ರಹವನ್ನು ಸಂತೋಷ, ಸೌಂದರ್ಯ, ಸಮೃದ್ಧಿ, ವೈವಾಹಿಕ ಜೀವನದ ಕಾರಕನೆಂದು ಪರಿಗಣಿಸಲಾಗಿದೆ. ಈ ಗ್ರಹವು ವೃಷಭ ಮತ್ತು ತುಲಾ ರಾಶಿಯ ಅಧಿಪತಿಯಾಗಿದ್ದರೂ, ಶುಕ್ರನ ರಾಶಿ ಪರಿವರ್ತನೆಯು (Shukra Rashi Parivartan) ದ್ವಾದಶ ರಾಶಿಗಳ ಮೇಲೆ ಗಮನಾರ್ಹ ಪರಿಣಾಮವನ್ನು ಬೀರುತ್ತದೆ. ನಾಳೆ ಅಂದರೆ ಆಗಸ್ಟ್ 11, 2021 ರಂದು ಶುಕ್ರ ಗ್ರಹವು ಕನ್ಯಾರಾಶಿಗೆ ಪ್ರವೇಶಿಸಲಿದ್ದು ಸೆಪ್ಟೆಂಬರ್ 6 ರವರೆಗೆ ಈ ರಾಶಿಯಲ್ಲಿಯೇ ಉಳಿಯಲಿದ್ದಾನೆ. ಈ ಸಮಯದಲ್ಲಿ, ಕೆಲವು ರಾಶಿಚಕ್ರಗಳಿಗೆ ಶುಭ ಎಂದು ಪರಿಗಣಿಸಲಾಗಿದೆ.
ಶುಕ್ರನ ರಾಶಿ ಬದಲಾವಣೆಯು ಈ ರಾಶಿಯವರಿಗೆ ತುಂಬಾ ಶುಭ:
ಮಿಥುನ ರಾಶಿ: ಶುಕ್ರನ ಈ ರಾಶಿ ಬದಲಾವಣೆಯು (Venus Transit) ಈ ರಾಶಿಯವರಿಗೆ ಆರ್ಥಿಕ ದೃಷ್ಟಿಯಿಂದ ಒಳ್ಳೆಯದು. ಅವರು ಷೇರುಗಳಲ್ಲಿ ಹೂಡಿಕೆ ಮಾಡಬಹುದು. ಸೇವಾ ಉದ್ಯಮಕ್ಕೆ ಸಂಬಂಧಿಸಿದ ಜನರು ಉತ್ತಮ ವೃತ್ತಿಜೀವನವನ್ನು ಹೊಂದಿರುತ್ತಾರೆ ಮತ್ತು ಅವರಿಗೆ ಉದ್ಯೋಗ ತೃಪ್ತಿಯೂ ಸಿಗುತ್ತದೆ. ಮನೆಯಿಂದ ದೂರವಿರುವ ಜನರು ತಮ್ಮ ಪ್ರೀತಿಪಾತ್ರರಿಗೆ ಹತ್ತಿರವಾಗುತ್ತಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- Mercury Transit 2021: ನಾಳೆ ಸಿಂಹ ರಾಶಿಯಲ್ಲಿ ಬುಧನ ಗೋಚರ, ಯಾರಿಗೆ ಲಾಭ?
ಕರ್ಕ ರಾಶಿ: ಈ ರಾಶಿಯ ಜನರ ಮಾತು ಸಿಹಿಯಾಗಿರುತ್ತದೆ, ಇದರಿಂದಾಗಿ ಅವರು ತಮ್ಮ ಕೆಲವು ಕೆಲಸಗಳನ್ನು ಸುಲಭವಾಗಿ ನಿಭಾಯಿಸುತ್ತಾರೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ನಿಮಗೆ ಗೌರವ ಸಿಗುತ್ತದೆ.
ಸಿಂಹ ರಾಶಿ: ಶುಕ್ರನ ರಾಶಿ ಪರಿವರ್ತನೆಯು (Shukra Rashi Parivartan) ಸಿಂಹ ರಾಶಿಯ ವ್ಯಾಪಾರಸ್ಥರಿಗೆ ತುಂಬಾ ಶುಭವನ್ನು ಉಂಟು ಮಾಡಲಿದೆ. ಮತ್ತೊಂದೆಡೆ, ವೃತ್ತಿಪರ ಜನರು ದೀರ್ಘಕಾಲದ ಸಮಸ್ಯೆಗಳಿಂದ ಮುಕ್ತರಾಗುತ್ತಾರೆ. ಸಂಬಂಧಗಳು ಉತ್ತಮವಾಗಿರುತ್ತವೆ ಎನ್ನಲಾಗಿದೆ.
ಇದನ್ನೂ ಓದಿ- Shravan Mas 2021: ಇಂದಿನಿಂದ ಶ್ರಾವಣ ಮಾಸ ಆರಂಭ, ಮೊದಲ ಸೋಮವಾರ ಶಿವನನ್ನು ಒಲಿಸಿಕೊಳ್ಳಲು ಈ ರೀತಿ ಪೂಜೆ ಸಲ್ಲಿಸಿ
ತುಲಾ ರಾಶಿ: ಈ ಸಮಯವು ನಿಮ್ಮ ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಉತ್ತಮವಾಗಿದೆ. ಪ್ರೇಮ ಜೀವನ - ವೈವಾಹಿಕ ಜೀವನವೂ ಚೆನ್ನಾಗಿರುತ್ತದೆ. ನಿಮಗೆ ವಿದೇಶ ಪ್ರಯಾಣದ ಅವಕಾಶ ಸಿಗುತ್ತದೆ ಮತ್ತು ಅದರಲ್ಲಿ ಯಶಸ್ಸು ಸಿಗುತ್ತದೆ. ಆಧ್ಯಾತ್ಮಿಕತೆಯಲ್ಲಿ ಆಸಕ್ತಿ ಹೆಚ್ಚಾಗುತ್ತದೆ.
(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಝೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ