Mercury Transit 2021: ನಾಳೆ ಸಿಂಹ ರಾಶಿಯಲ್ಲಿ ಬುಧನ ಗೋಚರ, ಯಾರಿಗೆ ಲಾಭ?

Budha Rashi Parivartan 2021: ನಾಳೆ ಅಂದರೆ ಆಗಸ್ಟ್ 9 ರಂದು ಬುಧ ಸಿಂಹ ರಾಶಿಯನ್ನು ಪ್ರವೇಶಿಸಲಿದ್ದಾನೆ (Mercury Transit 2021 Predictions). ಪ್ರಸ್ತುತ ಬುಧ ಕರ್ಕ ರಾಶಿಯಲ್ಲಿದ್ದು (Cancer Horoscope), ನಾಳೆ ಬುಧ ಸಿಂಹ ರಾಶಿಯಲ್ಲಿ ಗೋಚರಿಸಲಿದ್ದಾನೆ. 

Written by - Nitin Tabib | Last Updated : Aug 8, 2021, 04:32 PM IST
  • ನಾಳೆ ಬುಧನ ರಾಶಿ ಪರಿವರ್ತನೆ.
  • ಕರ್ಕ ರಾಶಿಯಿಂದ ಸಿಂಹ ರಾಶಿಗೆ ಬುಧನ ಪ್ರವೇಶ.
  • ಆಗಸ್ಟ್ 26ರ ನಂತರ ಬುಧ ಕನ್ಯಾ ರಾಶಿಗೆ ಪ್ರವೇಶ.
Mercury Transit 2021: ನಾಳೆ ಸಿಂಹ ರಾಶಿಯಲ್ಲಿ ಬುಧನ ಗೋಚರ, ಯಾರಿಗೆ ಲಾಭ? title=
Mercury Transit in August 2021 (File Photo)

Mercury Transit in August 2021 : ಸಿಂಹ ರಾಶಿಯ ಜನರ ಪಾಲಿಗೆ ಮುಂಬರುವ 17 ದಿನಗಳು ತುಂಬಾ ವಿಶೇಷವಾಗಿರಲಿವೆ. ಏಕೆಂದರೆ, ಬುಧ ಸಿಂಹ ರಾಶಿಯಲ್ಲಿ ಗೋಚರಿಸಲಿದ್ದಾನೆ. ಬುಧನ ಈ ರಾಶಿ ಪರಿವರ್ತನೆ (Budh Rashi Parivartan 2021) ಮೇಷ ರಾಶಿಯಿಂದ ಹಿಡಿದು ಮೀನ ರಾಶಿಯ ಜಾತಕದವರ ಮೇಲೆ ಪ್ರಭಾವ ಬೀರಲಿದೆ. ಆದರೆ, ಸಿಂಹ ರಾಶಿಯ ಜಾತಕದವರ (Mercury Transit 2021 Predictions) ಮೇಲೆ ಎಲ್ಲಕ್ಕಿಂತ ಹೆಚ್ಚು ಪ್ರಭಾವ ಬೀರಲಿದೆ. ಏಕೆಂದರೆ, ಪ್ರಸ್ತುತ ಕರ್ಕ ರಾಶಿಯಲ್ಲಿರುವ ಬುಧ, ಸಿಂಹ ರಾಶಿಗೆ ಪ್ರವೇಶಿಸಲಿದ್ದಾನೆ. 

ಬುಧನ ಸ್ವಭಾವ 
ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಬುಧ ಗ್ರಹಕ್ಕೆ ವಿಶೇಷ ಸ್ಥಾನಮಾನವಿದೆ. ಬುಧವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಬುಧವು ವ್ಯಾಪಾರದ ಕಾರಕ ಕೂಡ ಹೌದು. ಇದಲ್ಲದೆ ಸಂಚಾರ ಅಂದರೆ ಸಂವಹನ, ಮಾತು, ತರ್ಕ, ಕಾನೂನು, ಮಾರುಕಟ್ಟೆ, ಷೇರು ಮಾರುಕಟ್ಟೆ, ಔಷಧ, ಬರವಣಿಗೆ, ವಾಣಿಜ್ಯ ಇತ್ಯಾದಿಗಳಿಗೂ ಕೂಡ ಕಾರಕ ಎಂದು ಅವನನ್ನು ಪರಿಗಣಿಸಲಾಗಿದೆ. ಇದರೊಂದಿಗೆ ಬುಧ ಗ್ರಹವನ್ನು ವ್ಯಾಪಾರಿಗಳ ಅಧಿಪತಿ ಮತ್ತು ರಕ್ಷಕ ಎಂದೂ ಕರೆಯಲಾಗಿದೆ. ಬುಧ ಗ್ರಹದ ಕೈಯಲ್ಲಿ ಕಿರ್ಪಾನ್, ಕೊಡಲಿ ಮತ್ತು ಗುರಾಣಿ ಇದೆ. ರೆಕ್ಕೆಗಳಿರುವ ಸಿಂಹನ ಮೇಲೆ ಆತನ ಸವಾರಿ.

ಶ್ರಾವಣದ ಮೊದಲ ಸೋಮವಾರವೇ ಬುಧನ ರಾಶಿ ಪರಿವರ್ತನೆ
ಪಂಚಾಂಗದ ಪ್ರಕಾರ ಆಗಸ್ಟ್ 09, 2021ರಂದು ಅಂದರೆ ಶ್ರಾವಣ ಮಾಸದ ಮೊದಲ ಸೋಮವಾರದಂದೆ ಬುಧ (Mercury Transit In Leo 2021) ತನ್ನ ರಾಶಿಯನ್ನು ಪರಿವರ್ತಿಸುತ್ತಿದ್ದಾನೆ. ಶ್ರಾವಣ ಮಾಸದಲ್ಲಿ ಸೋಮವಾರಕ್ಕೆ ವಿಶೇಷ ಮಹತ್ವವಿದೆ. ಇದಲ್ಲದೆ ಶ್ರಾವಣ ಮಾಸ ಶಿವನಿಗೆ ಸಮರ್ಪಿತ ವಾರ. ಹೀಗಿರುವಾಗಿ ಬುಧನ ಅಶುಭತೆ ಶಿವನ ಪೂಜೆಯಿಂದ ದೂರಾಗುತ್ತದೆ.

ಇದನ್ನೂ ಓದಿ-ಮನೆಯಲ್ಲಿ ಸುಖ ಸಮೃದ್ಧಿಯಾಗಬೇಕಾದರೆ ಎಲ್ಲಿ ಮತ್ತು ಹೇಗೆ ಹಾಕಬೇಕು Wind Chime ಗೊತ್ತಿರಲಿ

ಬುಧ ರಾಶಿ ಪರಿವರ್ತನೆಯ ಸಮಯ (Mercury Transit 2021 Time)
ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ ಆಗಸ್ಟ್ 09, 2021ರಂದು ರಾತ್ರಿ 1 ಗಂಟೆ 23 ನಿಮಿಷಕ್ಕೆ ಬುಧನ ಈ ರಾಶಿ ಪರಿವರ್ತನೆ ನಡೆಯಲಿದೆ. ಆಗಸ್ಟ್ 26, 2021ರವರೆಗೆ ಬುಧ ಗ್ರಹ ಸಿಂಹ ರಾಶಿಯಲ್ಲಿಯೇ ಇರಲಿದ್ದಾನೆ. ಆನಂತರ ಬುಧ ಕನ್ಯಾ ರಾಶಿಯನ್ನು ಪ್ರವೇಶಿಸಲಿದ್ದಾನೆ.

ಇದನ್ನೂ ಓದಿ-Vastu Tips : ನಿಮ್ಮ ಜೀವನದಲ್ಲಿ ಹಣ ಮತ್ತು ಸಂತೋಷ ಬಯಸಿದರೆ, ಇಂದಿನಿಂದ ಮನೆಯಲ್ಲಿ ಈ ಕೆಲಸ ಮಾಡಿ; ಲಕ್ಷ್ಮಿ ದೇವಿ ಸಂತೋಷವಾಗಿರುತ್ತಾಳೆ!

ಸಿಂಹ ರಾಶಿ: ಬುಧನ ಈ ರಾಶಿ ಪರಿವರ್ತನೆಯಿಂದ ಶಿಕ್ಷಣ, ನೌಕರಿ, ವೃತ್ತಿಜೀವನ ಹಾಗೂ ಬಿಸಿನೆಸ್ ವಿಚಾರದಲ್ಲಿ ಉತ್ತಮ ಫಲಗಳನ್ನು ನೀಡಲಿದೆ. ನಿಮ್ಮ ವಾಣಿಯ ಪ್ರಭಾವ ಹೆಚ್ಚಾಗಲಿದೆ. ಹೂಡಿಕೆಗಾಗಿ ಇದು ಉತ್ತಮ ಸಮಯ. ಈ ಅವಧಿಯಲ್ಲಿ ಸಿಂಹ ರಾಶಿಯ ಜನರು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ವಿಶೇಷವಾಗಿ ಹೂಡಿಕೆಯನ್ನು ಮಾಡಬಹುದು. ಹಣಕಾಸಿನ ವಿಚಾರದಲ್ಲಿ ಬುಧನ ಈ ಗೋಚರ ನಿಮಗೆ ತುಂಬಾ ಲಾಭಕಾರಿಯಾಗಿದೆ. ಈ ಗೋಚರ ಕಾಲದಲ್ಲಿ ಆರೋಗ್ಯದ ವಿಶೇಷ ಕಾಳಜಿ ವಹಿಸಿ. ಆರೋಗ್ಯದ ವಿಚಾರದಲ್ಲಿ ಯಾವುದೇ ಅಜಾಗರೂಕತೆ ಬೇಡ.

ಇದನ್ನೂ ಓದಿ-Astrology: ದಾರಿಯಲ್ಲಿ ನಿಮಗೆ ಈ ವಸ್ತುಗಳು ಸಿಕ್ಕರೆ ತುಂಬಾ ಅದೃಷ್ಟವಂತೆ! ಆದರೆ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News