Shukra Grah Asta 2022: ಸೆಪ್ಟೆಂಬರ್ 24, 2022ರಂದು ಶನಿವಾರ ರಾತ್ರಿ 8 ಗಂಟೆ 51 ನಿಮಿಷಕ್ಕೆ ಸಿಂಹ ರಾಶಿಯನ್ನು ತೊರೆದು ಕನ್ಯಾ ರಾಶಿಗೆ ಪ್ರವೇಶಿಸಿದ್ದಾನೆ. ಶುಕ್ರನ ಈ ರಾಶಿ ಪರಿವರ್ತನೆ ಎಲ್ಲಾ 12 ರಾಶಿಗಳ ಜಾತಕದವರ ಮೇಲೆ ಪ್ರಭಾವ ಬೀರುತ್ತಿದೆ. ಮುಂಬರುವ ಡಿಸೆಂಬರ್ 2ರವರೆಗೆ ಶುಕ್ರ ತನ್ನ ಅಸ್ತ ಸ್ಥಿತಿಯಲ್ಲಿಯೇ ಇರಲಿದ್ದಾನೆ. ಶುಕ್ರನ ಈ ಅಸ್ತ ಸ್ಥಿತಿ ಯಾವ ರಾಶಿಗಳ ಜಾತಕದವರಿಗೆ ಶುಭ ಫಲಿತಾಂಶಗಳನ್ನು ನೀಡಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

COMMERCIAL BREAK
SCROLL TO CONTINUE READING

ವೃಷಭ ರಾಶಿ - ನಿಮ್ಮ ಜಾತಕದ ಪಂಚಮ ಭಾವದಲ್ಲಿ ಶುಕ್ರ ಗೋಚರ ಸಂತಾನಕ್ಕೆ ಸಂಬಂಧಿಸಿದ ಕಷ್ಟಗಳನ್ನು ನಿವಾರಿಸಲಿದ್ದಾನೆ. ವೈವಾಹಿಕ ಜೀವನ ಸುಖಮಯವಾಗಿರಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರಲಿದೆ. ಆಕಸ್ಮಿಕ ಧನಲಾಭದ ಎಲ್ಲಾ ಯೋಗಗಳು ನಿರ್ಮಾಣಗೊಳ್ಳುತ್ತಿವೆ. ನೌಕರಿಯಲ್ಲಿ ಬಡ್ತಿಯ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಉನ್ನತಿಯ ಮಾರ್ಗಗಳು ತೆರೆದುಕೊಳ್ಳಲಿವೆ.

ಮಿಥುನ ರಾಶಿ - ಮಿಥುನ ರಾಶಿಯ ಜಾತಕದವರ ಪಾಲಿಗೆ ಶುಕ್ರದೇವ ಶುಭ ಫಲದಾಯಿ ಸಾಬೀತಾಗಲಿದ್ದಾನೆ. ಸುಖ-ಸೌಕರ್ಯಗಳಲ್ಲಿ ವೃದ್ಧಿಯ ಸಾಧ್ಯತೆ ಇದೆ. ಕುಟುಂಬದಲ್ಲಿ ಖುಷಿಯ ವಾತಾವರಣ ಇರಲಿದೆ. ಸಮಾಜದಲ್ಲಿ ಘನತೆ ಗೌರವ ಹೆಚ್ಚಾಗಲಿದೆ. ನಿಮ್ಮ ಪಾಲಿಗೆ ಶುಕ್ರನ ಅಸ್ತ ಅವಧಿ ಶುಭವಾಗಿರಲಿದೆ.

ಕರ್ಕ ರಾಶಿ - ಕರ್ಕ ರಾಶಿಯ ತೃತೀಯ ಭಾವದಲ್ಲಿ ಶುಕ್ರನ ಈ ಗೋಚರ ಇರುವುದರಿಂದ ಸಹೋದರ-ಸಹೋದರಿಯರ ಸಂಪೂರ್ಣ ಬೆಂಬಲ ಸಿಗಲಿದೆ. ಘನತೆ-ಗೌರವ ಹೆಚ್ಚಾಗಲಿದೆ. ಸಾಲಬಾಧೆಯಿಂದ ಮುಕ್ತಿ ಸಿಗಲಿದೆ. ಧನಲಾಭದ ಯೋಗ ನಿರ್ಮಾಣಗೊಳ್ಳುತ್ತಿದೆ. ನೌಕರಿಯಲ್ಲಿ ಶುಭ ಫಲಿತಾಂಶಗಳನ್ನು ಕಾಣುವಿರಿ. ಈ ಸಮಯ ನಿಮಗೆ ವರದಾನಕ್ಕೆ ಸಮನಾಗಿರಲಿದೆ.

ಸಿಂಹ ರಾಶಿ - ಸಿಂಹ ರಾಶಿಯ ದ್ವಿತೀಯ ಭಾವದಲ್ಲಿ ಈ ಶುಕ್ರನ ಗೋಚರ ಸಂಭವಿಸಿದೆ. ಹೀಗಾಗಿ ಅದು ನಿಮಗೆ ಧನಲಾಭದ ಯೋಗ ನಿರ್ಮಿಸುತ್ತಿದೆ. ಈ ಅವಧಿಯಲ್ಲಿ ನಿಮ್ಮ ಮೇಲೆ ಅಪಾರ ಧನವೃಷ್ಟಿಯಾಗಲಿದೆ. ಕುಟುಂಬದಲ್ಲಿ ಖುಷಿಯ ವಾತಾವರಣ ಇರಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ವ್ಯಾಪಾರಿಗಳಿಗೆ ಉನ್ನತಿ ಸಿಗಲಿದೆ.

ಕನ್ಯಾ ರಾಶಿ - ಕನ್ಯಾ ರಾಶಿಯ ಜಾತಕದವರ ಲಗ್ನ ಭಾವದಲ್ಲಿ ನಡೆದಿರುವ ಈ ಶುಕ್ರ ಗೋಚರ ಅವರಿಗೆ ಶುಭ ಫಲಿತಾಂಶಗಳನ್ನು ನೀಡಲಿದೆ. ಈ ಅವಧಿಯಲ್ಲಿ ವೃತ್ತಿಜೀವನ ಹಾಗೂ ವ್ಯಾಪಾರದಲ್ಲಿ ಶುಭಫಲಗಳು ಪ್ರಾಪ್ತಿಯಾಗಲಿವೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ನಿಮ್ಮ ಪಾಲಿಗೆ ಲಾಭಕಾರಿ ಸಾಬೀತಾಗಲಿದೆ. ಆದರೂ ಕೂಡ ಹಣಕಾಸಿನ ವಿಧಾರದಲ್ಲಿ ಎಚ್ಚರಿಕೆ ಅಗತ್ಯ. 


ವೃಶ್ಚಿಕ ರಾಶಿ -  ವೃಶ್ಚಿಕ ರಾಶಿಯವರ ಏಕಾದಶ ಭಾವದಲ್ಲಿ ನಡೆದಿರುವ ಈ ಶುಕ್ರ ಗೋಚರ ನಿಮ್ಮ ಪಾಲಿಗೆ ಉತ್ತಮ ಸಾಬೀತಾಗಲಿದೆ. ಈ ಅವಧಿಯಲ್ಲಿ ದೀರ್ಘಕಾಲದಿಂದ ನಿಮಗೆ ಸೇರಬೇಕಿದ್ದ ಹಣ ನಿಮ್ಮ ಕೈಸೇರಲಿದೆ. ಕೌಟುಂಬಿಕ ವಾತಾವರಣ ಸುಖಮಯವಾಗಿರಲಿದೆ. ನೌಕರಿಯಲ್ಲಿ ಶುಭ ಫಲತಾಂಶಗಳು ಪಾಪ್ತಿಯಾಗಲಿವೆ.


ಇದನ್ನೂ ಓದಿ-Sharad Purnima 2022: ಸಕಲ 16 ಕಲಾವಲ್ಲಭನಾಗಲಿದ್ದಾನೆ ಚಂದ್ರ, ಇಲ್ಲಿದೆ ಪೂಜಾ ವಿಧಿ-ಮುಹೂರ್ತಗಳ ಮಾಹಿತಿ


ಮಕರ ರಾಶಿ - ಮಕರ ರಾಶಿಯವರ ನವಮ ಭಾವದಲ್ಲಿನ ಈ ಶುಕ್ರಗೊಚರ ಅತ್ಯಂತ ಶುಭಫಲದಾಯಿ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮ್ಮ ಸುಖ-ಸಮೃದ್ಧಿಯಲ್ಲಿ ಹೆಚ್ಚಳವಾಗಲಿದೆ. ನೌಕರಿಯಲ್ಲಿ ಉತ್ತಮ ಫಲಿತಾಂಶಗಳು ಪ್ರಾಪ್ತಿಯಾಗಲಿವೆ. ಈ ಗೋಚರ ನಿಮ್ಮ ಜೀವನದಲ್ಲಿ ಖುಷಿಗಳ ಮಹಾಪೂರವನ್ನೇ ತರಲಿದೆ.


ಇದನ್ನೂ ಓದಿ-ವಿಪರೀತ ರಾಜಯೋಗ ರೂಪಿಸುತ್ತಿರುವ ಶನಿದೇವ, ಮೂರು ರಾಶಿಯವರಿಗೆ ನೀಡಲಿದ್ದಾನೆ ಯಶಸ್ಸು


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-

https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.