Lemon Water Side Effects: ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ತೂಕ ಕಳೆದುಕೊಳ್ಳಲು ಮಾತ್ರವಲ್ಲದೆ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯುವಲ್ಲಿ ನಿಂಬೆ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ನಿಂಬೆ ನೀರಿನಿಂದ ಹಲವು ಪ್ರಯೋಜನಗಳಿವೆ ಎಂದು ಎಲ್ಲರಿಗೂ ತಿಳಿಸಿದೆ. ಆದರೆ ಹಲವು ಸಂದರ್ಭಗಳಲ್ಲಿ ನಿಂಬೆ ನೀರಿನಿನಿಂದ ಅನುಕೂಲಗಳಷ್ಟೇ ಅಲ್ಲದೆ ಅನಾನುಕೂಲಗಳೂ ಇರಬಹುದು ಎಂಬ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ... 


COMMERCIAL BREAK
SCROLL TO CONTINUE READING

ಅತಿಯಾದರೆ ಅಮೃತವೂ ವಿಷ ಎಂಬ ನಾಣ್ನುಡಿಯಂತೆ ಏನನ್ನೇ ಆದರೂ ಅತಿಯಾದ ಪ್ರಮಾಣದಲ್ಲಿ ತೆಗೆದುಕೊಂಡರೆ, ಅದು ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ನೀವೂ ಕೂಡ ಪ್ರತಿನಿತ್ಯ ಅತಿಯಾದ ಪ್ರಮಾಣದಲ್ಲಿ ನಿಂಬೆ ನೀರನ್ನು ಸೇವಿಸುತ್ತಿದ್ದರೆ ಅದರಿಂದ ಉಂಟಾಗಬಹುದಾದ ಅಡ್ಡ ಪರಿಣಾಮಗಳ (Lemon Water Side Effects) ಬಗ್ಗೆಯೂ ಒಮ್ಮೆ ತಿಳಿಯಿರಿ.


ಇದನ್ನೂ ಓದಿ- Skin Care Tips : ಚರ್ಮದ ಆರೋಗ್ಯಕ್ಕೆ ಬಳಸಿ ಬೇವಿನ ಎಲೆ ಮತ್ತು ಅಲೋವೆರಾ : ಇಲ್ಲಿದೆ ಅದರ ಪ್ರಯೋಜನಗಳು


ಅತಿಯಾದ ನಿಂಬೆ ನೀರಿನ ಸೇವನೆಯಿಂದ ಉಂಟಾಗಬಹುದಾದ ಅಡ್ಡಪರಿಣಾಮಗಳಿವು:-
>> ನಿಂಬೆ ಆಮ್ಲೀಯ ಸ್ವಭಾವವನ್ನು ಹೊಂದಿದೆ, ಆದ್ದರಿಂದ ಇದನ್ನು ಅತಿಯಾಗಿ ಸೇವಿಸುವುದರಿಂದ ದಂತಕವಚ, ಹಲ್ಲಿನ ರಕ್ಷಣಾತ್ಮಕ ಪದರಕ್ಕೆ ಹಾನಿಯುಂಟಾಗುತ್ತದೆ. ಇದರಿಂದಾಗಿ ಹಲ್ಲುಗಳು ದುರ್ಬಲವಾಗಬಹುದು.
>> ನಿಂಬೆ ಪಾನಕವನ್ನು (Lemon Water) ಅತಿಯಾಗಿ ಸೇವಿಸುವುದರಿಂದ ಎದೆಯುರಿ ಉಂಟಾಗಬಹುದು ಎಂದು ಹಲವು ಸಂಶೋಧನೆಗಳಲ್ಲಿ ತಿಳಿದುಬಂದಿದೆ. ಅದೇ ಸಮಯದಲ್ಲಿ, ಈ ಕಾರಣದಿಂದಾಗಿ, ಹೊಟ್ಟೆಯ ಒಳ ಪದರವು ಸಹ ಹಾನಿಗೊಳಗಾಗಬಹುದು.
>> ನಿಂಬೆ ನೀರು ಶಕ್ತಿಯನ್ನು ನೀಡುತ್ತದೆ, ಆದರೆ ಉಗುರುಬೆಚ್ಚಗಿನ ನೀರಿನಲ್ಲಿ ನಿಂಬೆಯ ಅತಿಯಾದ ಸೇವನೆಯು ಆಗಾಗ್ಗೆ ಮೂತ್ರ ವಿಸರ್ಜನೆಗೆ ಕಾರಣವಾಗಬಹುದು. ಈ ಕಾರಣದಿಂದಾಗಿ, ನಿಮ್ಮ ದೇಹದಿಂದ ಅಧಿಕ ಪ್ರಮಾಣದ ಎಲೆಕ್ಟ್ರೋಲೈಟ್‌ಗಳು ಮತ್ತು ಸೋಡಿಯಂ ಅನ್ನು ತೆಗೆದುಹಾಕಲಾಗುತ್ತದೆ. ಇದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ.


ಇದನ್ನೂ ಓದಿ- Lemon Water: ಪ್ರತಿನಿತ್ಯ ಕೇವಲ ಒಂದು ಲೋಟ ಈ ವಿಶೇಷ 'ನೀರು' ಕುಡಿದು ಪಡೆಯಿರಿ ಹಲವು ಪ್ರಯೋಜನ


>> ನಿಂಬೆಯ ಆಮ್ಲೀಯ ಗುಣವು ಮೂಳೆಗಳಿಗೆ ಹಾನಿಕಾರಕವಾಗಿದೆ. ಆದ್ದರಿಂದ, ನಿಂಬೆಹಣ್ಣನ್ನು ಅತಿಯಾಗಿ ಸೇವಿಸುವುದನ್ನು ತಪ್ಪಿಸಬೇಕು.
>> ನಿಂಬೆಯಲ್ಲಿ ವಿಟಮಿನ್-ಸಿ ಇದ್ದು, ಇದು ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಆದರೆ ವಿಟಮಿನ್-ಸಿ ಯ ಅತಿಯಾದ ಪ್ರಮಾಣದಿಂದಾಗಿ, ದೇಹದಲ್ಲಿ ಕಬ್ಬಿಣದ ಮಟ್ಟವು ಹೆಚ್ಚಾಗಬಹುದು, ಇದು ಹಾನಿಕಾರಕವಾಗಿದೆ.
>> ನಿಂಬೆ ನೀರನ್ನು ಕುಡಿಯುವ ಪ್ರಮುಖ ಅಡ್ಡಪರಿಣಾಮಗಳಲ್ಲಿ ಒಂದು ಎದೆಯುರಿ ಮತ್ತು ಆಸಿಡ್ ರಿಫ್ಲಕ್ಸ್ ಆಗಿರಬಹುದು.


ಸೂಚನೆ: ಇಲ್ಲಿ ನೀಡಿರುವ ಮಾಹಿತಿಯು ಯಾವುದೇ ವೈದ್ಯಕೀಯ ಸಲಹೆಗೆ ಬದಲಿಯಾಗಿಲ್ಲ. ಇದನ್ನು ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ ನೀಡಲಾಗುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.