ಕಾಗೆಗಳು ಮನೆಗಳ ಮೇಲೆ ಕುಳಿತು ಧಾನ್ಯಗಳನ್ನು ತಿನ್ನುವುದನ್ನು ಹೆಚ್ಚಾಗಿ ನೋಡಿರುತ್ತೇವೆ. ಈ ಕಾಗೆಗಳು ಮನೆ ಅಥವಾ ದಾರಿಯಲ್ಲಿ ಕಾಣಿಸಿಕೊಂಡರೆ ಶುಭವೋ ಅಶುಭವೋ ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ಇಂದು ನಾವು ಕಾಗೆಗಳ ಗೋಚರಿಸುವಿಕೆಯ ಸಂಪೂರ್ಣ ರಹಸ್ಯವನ್ನು, ಅದರ ಮಂಗಳಕರ ಮತ್ತು ಅಶುಭ ಸೂಚನೆಗಳ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ಇದನ್ನು ತಿಳಿದ ನಂತರ, ಕಾಗೆಗಳ ಬಗ್ಗೆ ನಿಮ್ಮ ಅಭಿಪ್ರಾಯವು ಸಂಪೂರ್ಣವಾಗಿ ಬದಲಾಗಬಹುದು. 


COMMERCIAL BREAK
SCROLL TO CONTINUE READING

ಶಕುನ ಶಾಸ್ತ್ರದ ಪ್ರಕಾರ, ಒಂದು ಪಾತ್ರೆಯಲ್ಲಿ ಕಾಗೆ ನೀರು ಕುಡಿಯುವುದನ್ನು ನೀವು ನೋಡಿದರೆ ಅದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರರ್ಥ ನೀವು ಮುಂದಿನ ದಿನಗಳಲ್ಲಿ ಹಣವನ್ನು ಗಳಿಸಲಿದ್ದೀರಿ ಅಥವಾ ನೀವು ಕೆಲವು ಕೆಲಸದಲ್ಲಿ ಉತ್ತಮ ಯಶಸ್ಸನ್ನು ಪಡೆಯಲಿದ್ದೀರಿ.


ಇದನ್ನು ಓದಿ: Zodiac Nature: ರಾಜಶೈಲಿಯಲ್ಲಿ ಜೀವನ ಸಾಗಿಸುತ್ತಾರೆ ಈ ಜನರು, ಸೂರ್ಯನ ಕೃಪೆಯಿಂದ ಅಪಾರ ಹಣ-ಕೀರ್ತಿ ಗಳಿಸುತ್ತಾರೆ


ಕಾಗೆಗಳ ಹಿಂಡು ಮನೆಗಳ ಮೇಲ್ಛಾವಣಿಯ ಮೇಲೆ ಬಂದು ಗಲಾಟೆ ಮಾಡುವ ಅಥವಾ ತಮ್ಮತಮ್ಮಲ್ಲೇ ಹೊಡೆದಾಡಿಕೊಳ್ಳುವ ದೃಶ್ಯವನ್ನು ನೀವು ಅನೇಕ ಬಾರಿ ನೋಡಿರಬಹುದು. ಶಕುನ ಶಾಸ್ತ್ರದ ಪ್ರಕಾರ, ಹಾಗೆ ಮಾಡುವುದು ಅಶುಭವೆಂದು ಪರಿಗಣಿಸಲಾಗಿದೆ. ಇದರರ್ಥ ಆ ಮನೆಯ ಯಜಮಾನನಿಗೆ ಶೀಘ್ರದಲ್ಲೇ ತೊಂದರೆಯಾಗಲಿದೆ. ಆ ವ್ಯಕ್ತಿಯು ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಬಹುದು ಅಥವಾ ಮನೆಯಲ್ಲಿ ಅಪಶ್ರುತಿ ಉಂಟಾಗಬಹುದು.


ಬೆಳಗಿನ ಜಾವಕಾಗೆಯು ಬಂದು ಯಾರ ಪಾದ ಮುಟ್ಟುತ್ತದೆಯೋ ಅದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಸಮಾಜದಲ್ಲಿ ಆ ವ್ಯಕ್ತಿಯ ಪ್ರತಿಷ್ಠೆ ಹೆಚ್ಚುತ್ತಿದೆ ಎಂದರ್ಥ. 


ಕಾಗೆಯು ಆಹಾರದ ತುಂಡನ್ನು ಅಥವಾ ರೊಟ್ಟಿಯನ್ನು ಬಾಯಿಯಲ್ಲಿ ಇಟ್ಟುಕೊಂಡು ಕುಳಿತುಕೊಳ್ಳುವುದನ್ನು ಅಥವಾ ಹಾರುವುದನ್ನು ನೀವು ನೋಡಿದರೆ, ಅದನ್ನು ಸಹ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಶಕುನ ಶಾಸ್ತ್ರದ ಪ್ರಕಾರ, ಈ ಸ್ಥಿತಿಯಲ್ಲಿ ಕಾಗೆಗಳು ಕಾಣಿಸಿಕೊಂಡರೆ ನಿಮ್ಮ ಕೆಲವು ದೊಡ್ಡ ಆಸೆಗಳು ಶೀಘ್ರದಲ್ಲೇ ಈಡೇರಲಿವೆ ಎಂಬುದರ ಸಂಕೇತವಾಗಿದೆ.


ಇದನ್ನು ಓದಿ: Spiritual Belief :ಸಂಜೆ ಮಾಡುವ ಈ ತಪ್ಪುಗಳು ಮಹಾಲಕ್ಷ್ಮಿ ಮುನಿಸಿಗೆ ಕಾರಣವಾಗಬಹುದು


ಕಾಗೆಯು ಮನೆಯ ಮುಖ್ಯ ಗೇಟಿನ ಬಳಿ ಬಂದು ಜೋರಾಗಿ ಕೂಗಿದರೆ ನಿಮ್ಮ ಮನೆಗೆ ಅತಿಥಿ ಬರಲಿದ್ದಾರೆ ಎಂಬುದರ ಸಂಕೇತ. ಅಷ್ಟೇ ಅಲ್ಲದೆ, ಇದು ಮನೆಯಲ್ಲಿ ಮಹಾಲಕ್ಷ್ಮಿ ಅಂದರೆ ಸಂಪತ್ತಿನ ಆಗಮನವನ್ನು ಸಂಕೇತಿಸುತ್ತದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.