ನವದೆಹಲಿ: ಶಾಸ್ತ್ರ ಗ್ರಂಥಗಳ ಪ್ರಕಾರ, ಪುರುಷ ಅಥವಾ ಮಹಿಳೆಯ ಭವಿಷ್ಯ ಮತ್ತು ಸ್ವಭಾವವನ್ನು ಅವರ ದೇಹದ ಆಕಾರ, ಚಿಹ್ನೆಗಳು ಮತ್ತು ಗುರುತುಗಳು ಇತ್ಯಾದಿಗಳ ಆಧಾರದ ಮೇಲೆ ತಿಳಿಯಬಹುದು. ವ್ಯಕ್ತಿಯ ದೇಹದ ಮೇಲೆ ಇರುವ ಕೆಲವು ಗುರುತುಗಳು ಆತನ ಭವಿಷ್ಯ ಮತ್ತು ಆರ್ಥಿಕ ಸ್ಥಿತಿಯ ಬಗ್ಗೆ ಹೇಳುತ್ತವೆ. ಕೆಲವು ಚಿಹ್ನೆಗಳು ವ್ಯಕ್ತಿಯ ಜೀವನದಲ್ಲಿ ಹಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡುತ್ತವೆ. ಅಂದರೆ ಒಬ್ಬ ವ್ಯಕ್ತಿಯು ಜೀವನದಲ್ಲಿ ಶ್ರೀಮಂತನಾಗುತ್ತಾನೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ಇದರಿಂದ ಕಂಡುಹಿಡಿಯಬಹುದಂತೆ. ಇಂದು ನಾವು ಅದೃಷ್ಟವಂತ ಪುರುಷರ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ದೇಹದ ಭಾಗಗಳ ವಿನ್ಯಾಸವು ಯಾವುದೇ ವ್ಯಕ್ತಿಯ ಅದೃಷ್ಟವನ್ನು ತಿಳಿಸುತ್ತದೆ ಎಂದು ನಂಬಲಾಗಿದೆ.    


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಜೂನ್ 14 ರವರೆಗೆ ಈ ರಾಶಿಯವರಿಗೆ ಭಾರೀ ಅದೃಷ್ಟ..! ಎಲ್ಲಾ ಕೆಲಸವನ್ನು ಕೈ ಗೂಡಿಸಲಿದ್ದಾನೆ ಸೂರ್ಯ ದೇವ


ಇಂತಹ ವ್ಯಕ್ತಿಗಳು ಅದೃಷ್ಟವಂತರು!


  • ಶಾಸ್ತ್ರ ಗ್ರಂಥಗಳ ಪ್ರಕಾರ, ಆಮೆಯಂತೆ ಬೆನ್ನು ಬೆಳೆದಿರುವ ಪುರುಷರನ್ನು ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಈ ಜನರು ಜೀವನದಲ್ಲಿ ಸಾಕಷ್ಟು ಗೌರವ ಮತ್ತು ಸಂಪತ್ತನ್ನು ಗಳಿಸುತ್ತಾರಂತೆ.

  • ಅಂಗೈನ ಮಧ್ಯದಲ್ಲಿ ಮಚ್ಚೆ ಇರುವ ಪುರುಷರ ಅದೃಷ್ಟದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಹಣ, ವಾಹನ ಮತ್ತು ಸಂಪತ್ತು ಇವರಿಗೆ ಸಿಗುತ್ತದೆ. ಜೀವನದಲ್ಲಿ ಗೌರವ ಮತ್ತು ಪ್ರತಿಷ್ಠೆಯೂ ದೊರಕುತ್ತದೆ. ಇದಲ್ಲದೆ ಈ ಜನರಿಗೆ ಯಾವುದೇ ರೀತಿಯ ಹಣದ ಕೊರತೆ ಕಾಡುವುದಿಲ್ಲವಂತೆ.

  • ಅಗಲವಾದ ಎದೆ ಮತ್ತು ಉದ್ದನೆಯ ಮೂಗು ಹೊಂದಿರುವ ಪುರುಷರು ಚಿಕ್ಕ ವಯಸ್ಸಿನಲ್ಲಿಯೇ ಪ್ರಗತಿಯನ್ನು ಪಡೆಯುತ್ತಾರೆ ಎಂದು ಶಾಸ್ತ್ರ ಗ್ರಂಥದಲ್ಲಿ ಹೇಳಲಾಗಿದೆ.   

  • ಮನುಷ್ಯನ ಪಾದದ ತೋರುಬೆರಳು ಅಂದರೆ ಹೆಬ್ಬೆರಳು ಇರುವ ಬೆರಳು ದೊಡ್ಡದಾಗಿದ್ದರೆ ಉತ್ತಮ ಜೀವನ ಸಂಗಾತಿ ಸಿಗುತ್ತಾರೆ ಎಂಬ ನಂಬಿಕೆ ಇದೆ.

  • ಎದೆಯ ಮೇಲೆ ದಪ್ಪ ಕೂದಲು ಹೊಂದಿರುವ ಪುರುಷರು ಜೀವನದಲ್ಲಿ ಸಾಕಷ್ಟು ಹಣವನ್ನು ಗಳಿಸುತ್ತಾರೆ. ಸಂತೋಷಮಯ ಜೀವನ ಈ ವ್ಯಕ್ತಿಗಳದ್ದಾಗಿರುತ್ತದೆ. ಈ ಜನರು ಸ್ವಭಾವತಃ ತುಂಬಾ ತೃಪ್ತರಾಗಿರುತ್ತಾರೆ ಎಂದು ಹೇಳಲಾಗಿದೆ.  

  • ಪಾದಗಳಲ್ಲಿ ಕಮಲ, ರಥ ಮತ್ತು ಬಾಣದಂತಹ ಚಿಹ್ನೆಗಳನ್ನು ಹೊಂದಿರುವ ಪುರುಷರು ತುಂಬಾ ಖುಷಿ ಖುಷಿಯಿಂದ ಬದುಕುತ್ತಾರೆ. ಈ ಜನರ ಜೀವನವು ಸಂತೋಷದಿಂದ ತುಂಬಿರುತ್ತದೆ ಎಂದು ಹೇಳಲಾಗಿದೆ.  

  • ಎತ್ತರದ ಪುರುಷರು ಜೀವನದಲ್ಲಿ ತುಂಬಾ ಶ್ರಮಿಸುತ್ತಾರೆ. ಈ ಕಾರಣಕ್ಕಾಗಿಯೇ ಇವರ ಆರ್ಥಿಕ ಸ್ಥಿತಿಯು ತುಂಬಾ ಚೆನ್ನಾಗಿರುತ್ತದಂತೆ.

  • ಆಳವಾದ ಮತ್ತು ದುಂಡಗಿನ ಹೊಕ್ಕುಳವು ಅದೃಷ್ಟದ ಸಂಕೇತವಾಗಿದೆ. ಇಂತಹ ಹೊಕ್ಕುಳನ್ನು ಹೊಂದಿರುವ ಪುರುಷರು ತಮ್ಮ ಜೀವನದಲ್ಲಿ ಎಂದಿಗೂ ಬಡತನಕ್ಕೆ ತುತ್ತಾಗುವುದಿಲ್ಲವೆಂದು ಹೇಳಲಾಗಿದೆ.


ಇದನ್ನೂ ಓದಿ: Vastu Tips: ಮನೆಯ ನೆಲದ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಈ ಪ್ರಮುಖ ವಿಷಯಗಳನ್ನು ಹೇಳಲಾಗಿದೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.