ಬೆಂಗಳೂರು : ಯಾರ ಮೇಲೆ ಶನಿದೇವನ ವಕ್ರ ದೃಷ್ಟಿ ಬೀಳುತ್ತದೆಯೋ ಅವರ ಜೀವನ ಕಷ್ಟ ನಷ್ಟಗಳಿಂದ ತುಂಬಿರುತ್ತದೆ ಎಂದು ಹೇಳಲಾಗುತ್ತದೆ.ಆದರೆ ಯಾರ ಜಾತಕದಲ್ಲಿ ಶನಿ ಲಾಭದಾಯಕನಾಗಿರುತ್ತಾನೆಯೋ ಅವರು ಜೀವನದಲ್ಲಿ ರಾಜನಂತೆ ಬದುಕುತ್ತಾರೆ. ಶನಿಯ ಅವಕೃಪೆಯಿಂದ ರಾಜ ಭಿಕ್ಷುುಕನಾಗಲು ಹೆಚ್ಚು ಹೊತ್ತು ತೆಗೆದುಕೊಳ್ಳುವುದಿಲ್ಲ. ಮಾತ್ರವಲ್ಲ ಶನೀಶ್ವರನ ಆಶೀರ್ವಾದವಿದ್ದರೆ ಭಿಕ್ಷುಕ ರಾಜನಂತಾಗಲು ಕೂಡಾ ಹೆಚ್ಚು ಸಮಯ ಹಿಡಿಯುವುದಿಲ್ಲ. ನಾವು ಮಾಡಿದ ಕರ್ಮಗಳ ಅನುಸಾರ ಫಲ ನೀಡುವ ಶನಿ ದೇವರು ಜೂನ್ 5 ರಿಂದ ಅಂದರೆ ನಾಳೆಯಿಂದ ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲು ಆರಂಭಿಸುತ್ತಾನೆ. ಮುಂದಿನ 141 ದಿನಗಳವರೆಗೆ ಶನಿದೇವ ಹಿಮ್ಮುಖವಾಗಿಯೇ ಚಲಿಸುತ್ತಾರೆ.
ಹಿಮ್ಮುಖ ಶನಿಯು ಈ ರಾಶಿಚಕ್ರ ಚಿಹ್ನೆಗಳ ಮೇಲೆ ಕರುಣಾಮಯಿಯಾಗಿರುತ್ತಾರೆ:
ಹಿಮ್ಮುಖ ಚಲನೆಯಲ್ಲಿರುವ ಶನಿಯು ಮೇಷ, ವೃಷಭ, ಮಿಥುನ ಮತ್ತು ಧನು ರಾಶಿಯ ಜನರಿಗೆ ಮಂಗಳಕರವಾಗಿರುತ್ತಾನೆ. ಈ ರಾಶಿಯವರ ಮೇಲೆ ಭಾರೀ ಕೃಪಾ ದೃಷ್ಟಿ ಹಾರಿಸುತ್ತಾನೆ. ಈ ಅವಧಿಯಲ್ಲಿ ಈ ರಾಶಿಯವರು ವೃತ್ತಿ-ವ್ಯವಹಾರದಲ್ಲಿ ಲಾಭ ಗಳಿಸುತ್ತಾರೆ. ಇದರಿಂದ ಇವರ ಆದಾಯ ಕೂಡಾ ಹೆಚ್ಚಲಿದೆ.
ಇದನ್ನೂ ಓದಿ : Auspicious Day: ಚಿನ್ನ, ಮನೆ ಅಥವಾ ವಾಹನ ಖರೀದಿಗೆ ಈ ದಿನ ವಿಶೇಷವಾಗಿದೆ
141 ದಿನಗಳವರೆಗೆ ಈ ರಾಶಿಯವರು ಎಚ್ಚರದಿಂದ ಇರಬೇಕು :
ಈ ಸಮಯದಲ್ಲಿ ಮಕರ, ಕುಂಭ ಮತ್ತು ಮೀನ ರಾಶಿಯವರಿಗೆ ಶನಿಯ ಸಾಡೇಸಾತಿ ನಡೆಯುತ್ತಿದೆ. ಕರ್ಕಾಟಕ ಮತ್ತು ವೃಶ್ಚಿಕ ರಾಶಿಯವರಿಗೆ ಶನಿ ಧೈಯ್ಯಾ ನಡೆಯುತ್ತಿದೆ. ಶನಿ ದೆಸೆಯ ಕಾಲದಲ್ಲಿ ಆ ರಾಶಿಯವರ ಮೇಲೆ ಶನಿ ತನ್ನ ವಕ್ರ ದೃಷ್ಟಿ ಬೀರಿರುತ್ತಾನೆ. ಇದು ಅವರ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಇನ್ನು ಶನಿಯ ಹಿಮ್ಮುಖ ಚಲನೆ ಇವರ ತೊಂದರೆಗಳನ್ನು ಇನ್ನು ಕೂಡಾ ಹೆಚ್ಚುತ್ತದೆ.
ಶನಿವಾರದಿಂದ ಶನಿ ಪರಿಹಾರಗಳನ್ನು ಅಳವಡಿಸಿಕೊಳ್ಳಿ :
ಶನಿಯ ಕೋಪವನ್ನು ತಪ್ಪಿಸಲು ಮತ್ತು ಶನಿಯ ಆಶೀರ್ವಾದವನ್ನು ಪಡೆಯಲು, ಜ್ಯೋತಿಷ್ಯದಲ್ಲಿ ಕೆಲವು ಸುಲಭ ಮತ್ತು ಪರಿಣಾಮಕಾರಿ ಪರಿಹಾರಗಳನ್ನು ಉಲ್ಲೇಖಿಸಲಾಗಿದೆ. ಈ ಕ್ರಮಗಳನ್ನು ಕೈಗೊಳ್ಳಲು ಶನಿವಾರವನ್ನು ಅತ್ಯುತ್ತಮ ದಿನವೆಂದು ಪರಿಗಣಿಸಲಾಗಿದೆ. ಏಕೆಂದರೆ ಶನಿವಾರ ಶನಿ ದೇವನಿಗೆ ಸಮರ್ಪಿತವಾಗಿದೆ. ಸಮಸ್ಯೆ ಹೆಚ್ಚು ಇದ್ದರೆ, ಪ್ರತಿದಿನ ಈ ಪರಿಹಾರವನ್ನು ಮಾಡುವುದರಿಂದ ಸಾಕಷ್ಟು ಪರಿಹಾರ ಸಿಗುತ್ತದೆ.
ಇದನ್ನೂ ಓದಿ : Weekly Horoscope: ಹೊಸ ನೌಕರಿ ಹುಡುಕಾಟದಲ್ಲಿರುವವರಿಗೆ ಈ ವಾರ ಸಿಗಲಿದೆ ಯಶಸ್ಸು
1.ಶನಿವಾರದಂದು ಅಶ್ವಥ ಮರದ ಕೆಳಗೆ ಎಳ್ಳೆಣ್ಣೆ ದೀಪವನ್ನು ಹಚ್ಚಿ.
2.ಶನಿ ದೇವಸ್ಥಾನಕ್ಕೆ ಹೋಗಿ ಶನಿ ದೇವರಿಗೆ ಎಣ್ಣೆಯನ್ನು ಅರ್ಪಿಸಬೇಕು.
3.ಶನೀಶ್ವರ ದೇವಸ್ಥಾನಕ್ಕೆ ಹೋಗುವಾಗ ಎಂದಿಗೂ ವಿಗ್ರಹದ ಮುಂದೆ ನಿಲ್ಲಬೇಡಿ. ಬದಿಯಿಂದ ನಿಂತು ನೋಡಿ ಎಣ್ಣೆಯನ್ನು ಅರ್ಪಿಸಿ.
4. ಶನಿ ಚಾಲೀಸಾ ಪಠಿಸಿ.
5.ಕಪ್ಪು ಎಳ್ಳು, ಉದ್ದಿನಬೇಳೆ, ಕಪ್ಪು ಬಟ್ಟೆಗಳನ್ನು ದಾನ ಮಾಡಿ.
6.ಒಂದು ಬಟ್ಟಲಿನಲ್ಲಿ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ನಿಮ್ಮ ಮುಖವನ್ನು ನೋಡಿ, ನಂತರ ಎಣ್ಣೆಯನ್ನು ಬಟ್ಟಲಿನೊಂದಿಗೆ ಶನಿ ದೇವಸ್ಥಾನದಲ್ಲಿ ಇರಿಸಿ. ಈ ರೀತಿ ಮಾಡುವುದರಿಂದ ಹೆಚ್ಚಿನ ಪ್ರಯೋಜನವಾಗುತ್ತದೆ.
7.ಅಸಹಾಯಕರಿಗೆ, ಬಡವರಿಗೆ ಸಹಾಯ ಮಾಡುವುದು ಅತ್ಯಂತ ಉತ್ತಮವಾದ ಮಾರ್ಗವಾಗಿದೆ. ಅವರಿಗೆ ದಾನ ಮಾಡಿ. ಅವರೊಂದಿಗೆ ಗೌರವದಿಂದ ಮಾತನಾಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ