ನವದೆಹಲಿ : ಉತ್ತಮ ಆರೋಗ್ಯಕ್ಕಾಗಿ ಉತ್ತಮ ನಿದ್ರೆ ಮಾಡುವುದು ಬಹಳ ಮುಖ್ಯ. ರಾತ್ರಿ ಮಲಗಿದಾಗ,  ಚರ್ಮ ಮತ್ತು ಕೂದಲು ರಿಪೇರ್‌ (Hair care) ಆಗುತ್ತದೆ. ಈ ಕಾರಣದಿಂದಾಗಿ, ನಿಮ್ಮ ಚರ್ಮ ಮತ್ತು ಕೂದಲು ಎರಡೂ ಆರೋಗ್ಯಕರವಾಗಿರಲು ಮಲಗುವಾಗ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯವಾಗಿರುತ್ತದೆ.


COMMERCIAL BREAK
SCROLL TO CONTINUE READING

ದಿಂಬು ಮತ್ತು ಅದರ ಕವರ್ (pillow cover) ನಿಮ್ಮ ಚರ್ಮ ಮತ್ತು ಕೂದಲಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ನಿಮ್ಮ ಚರ್ಮವು ಉತ್ತಮವಾಗಿ ಉಳಿಯಬೇಕಾದರೆ ಪ್ರತಿದಿನ ದಿಂಬಿನ ಕವರ್ ಬದಲಾಯಿಸಬೇಕು ಎಂದು ವೈದ್ಯರು ಶಿಫಾರಸು ಮಾಡುತ್ತಾರೆ. ಹಾಗಾಗಿ, ರಾತ್ರಿಯಲ್ಲಿ ಉತ್ತಮ ನಿದ್ರೆಗಾಗಿ, ನೀವು ಹತ್ತಿ ಅಥವಾ ರೇಷ್ಮೆಯ ದಿಂಬು ಕವರ್‌ (Silk pillow cover) ಬಳಸುವುದು ಮುಖ್ಯ. ಇಂದು ನಾವು ರೇಷ್ಮೆ ದಿಂಬಿನ ಹೊದಿಕೆಯನ್ನು ಬಳಸುವುದರಿಂದ ಕೆಲವು ಚರ್ಮ ಮತ್ತು ಕೂದಲಿನ ಮೇಲಾಗುವ ಪ್ರಯೋಜನಗಳ (Advantage of Silk pillow cover) ಬಗ್ಗೆ ಹೇಳುತ್ತಿದ್ದೇವೆ.


ಇದನ್ನೂ ಓದಿ : ನೀವು ಕಲಬೆರಕೆ ಚಹಾ ಕುಡಿಯುತ್ತಿಲ್ಲ ತಾನೇ? ಕಲಬೆರಕೆ ಚಹಾವನ್ನು ಗುರುತಿಸುವುದು ಹೇಗೆ ಇಲ್ಲಿದೆ ಸುಲಭ ವಿಧಾನ


ವಯಸ್ಸಾಗುವುದನ್ನು ನಿಧಾನಗೊಳಿಸುತ್ತದೆ: ರೇಷ್ಮೆಯ ದಿಂಬು ಕವರ್‌ ಅನ್ನು ಬಳಸುವುದರಿಂದ ಚರ್ಮ ಸುಕ್ಕು (Skin wrinkles) ರಹಿತವಾಗುತ್ತದೆ. ರೇಷ್ಮೆ ದಿಂಬು ಕವರ್‌ ಚರ್ಮದ ಕ್ರೀಂ ಅನ್ನು ಹೀರಿಕೊಳ್ಳುತ್ತವೆ. ಇದು ಚರ್ಮದ ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.


ಕೂದಲು ಉದುರುವುದನ್ನು ತಡೆಯುತ್ತದೆ :  ರೇಷ್ಮೆ ದಿಂಬಿನ ಹೊದಿಕೆಯನ್ನು ಬಳಸಿದರೆ ಮಗ್ಗಲು ಬದಲಾಯಿಸುವಾಗ ಕೂದಲು ದಿಂಬಿನಿಂದ ಸರಾಗವಾಗಿ ಜಾರಿಕೊಳ್ಳುತ್ತದೆ. ಈ ಕಾರಣದಿಂದಾಗಿ, ದಿಂಬಿಗೆ ಘರ್ಷಿಸಿ ಕೂದಲು (Hair fall) ಉದುರುವುದಿಲ್ಲ. 


ಇದನ್ನೂ ಓದಿ Benefits of Dates : ಮಹಿಳೆಯರಿಗೆ ಈ ಸಮಯದಲ್ಲಿ 6 ಖರ್ಜೂರ ತುಂಬಾ ಪ್ರಯೋಜನಕಾರಿ : ಹೇಗೆ? ಅದರ ಬಗ್ಗೆ ತಿಳಿಯಿರಿ


ಚರ್ಮವನ್ನು ಮೃದುವಾಗಿಸುತ್ತದೆ : ರೇಷ್ಮೆ ಒಂದು ನೈಸರ್ಗಿಕ ನಾರು. ಇದು ಅಮೈನೋ ಆಮ್ಲಗಳ ತಂತಿಗಳನ್ನು ಒಳಗೊಂಡಿದೆ. ಇದು ನಮ್ಮ ಚರ್ಮದಂತೆಯೇ ಅದೇ PM  ಮಟ್ಟವನ್ನು ಹೊಂದಿರುತ್ತದೆ. ಅಮೈನೋ ಆಮ್ಲಗಳು ಚರ್ಮವನ್ನು ಹೈಡ್ರೀಕರಣಗೊಳಿಸುತ್ತದೆ, ಇದರಿಂದಾಗಿ ಚರ್ಮದಲ್ಲಿ ತೇವಾಂಶ ಉಳಿಯುತ್ತದೆ. ಹೈಡ್ರೀಕರಿಸಿದ ಚರ್ಮದ ಕೋಶಗಳು ಕಡಿಮೆ ಸುಕ್ಕುಗಳನ್ನು ತೋರಿಸುತ್ತವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.