ನವದೆಹಲಿ : ಹೆಚ್ಚಿನ ಜನರು ತಮ್ಮ ದಿನವನ್ನು ಚಹಾದಿಂದಲೇ (Tea) ಆರಂಭ ಮಾಡುತ್ತಾರೆ. ಇನ್ನು ಮನೆಗೆ ಯಾರಾದರೂ ನೆಂಟರಿಷ್ಟರು ಬಂದರೂ ನೀಡುವುದು ಚಹಾವನ್ನೇ. ಚಹಾಕ್ಕೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ, ಕಲಬೆರಕೆಯ (Adulteration) ವ್ಯಾಪಾರವೂ ಭರದಿಂದಲೇ ನಡೆಯುತ್ತಿದೆ. ಕಲಬೆರಕೆ ಚಹಾ ನಮ್ಮ ಆರೋಗ್ಯವನ್ನು ಒಳಗಿನಿಂದಲೇ ಹಾನಿ ಮಾಡುತ್ತವೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಸಾಮಾಜಿಕ ಮಾಧ್ಯಮದಲ್ಲಿ (Social media) ಕಲಬೆರಕೆ ವಸ್ತುಗಳ ಬಗ್ಗೆ ಜನರಿಗೆ ಅರಿವು ಮೂಡಿಸುತ್ತದೆ. ಈ ಬಾರಿ ಕಲಬೆರಕೆ ಚಹಾವನ್ನು ಗುರುತಿಸುವುದು ಹೇಗೆ ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ.
ಕಲಬೆರಕೆ ಹೇಗೆ ಮಾಡಲಾಗುತ್ತದೆ ?
ಮಾಧ್ಯಮ ವರದಿಗಳ ಪ್ರಕಾರ, ಚಹಾ ಎಲೆಗಳನ್ನು ಹಲವು ರೀತಿಯಲ್ಲಿ ಕಲಬೆರಕೆ ಮಾಡಲಾಗುತ್ತಿದೆ. (Tea Leaves Adulteration) ಚಹಾ ಎಲೆಗಳನ್ನು ಮತ್ತೆ ಒಣಗಿಸಿ ಪ್ಯಾಕ್ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಇದಕ್ಕೂ ಮುನ್ನ ಆ ಚಹಾದ ಎಲೆಗೆ ಬಣ್ಣ ಕೂಡ ಸೇರಿಸಲಾಗುತ್ತದೆ. ಇದು ನಮ್ಮ ಆರೋಗ್ಯಕ್ಕೆ (health) ತುಂಬಾ ಹಾನಿಕಾರಕವಾಗಿರುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಯಕೃತ್ತಿನ ಸಮಸ್ಯೆಗಳು (Liver problems) ಮತ್ತು ಇತರ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಇದು ಕಾರಣವಾಗುತ್ತದೆ.
ಇದನ್ನೂ ಓದಿ : Benefits of Dates : ಮಹಿಳೆಯರಿಗೆ ಈ ಸಮಯದಲ್ಲಿ 6 ಖರ್ಜೂರ ತುಂಬಾ ಪ್ರಯೋಜನಕಾರಿ : ಹೇಗೆ? ಅದರ ಬಗ್ಗೆ ತಿಳಿಯಿರಿ
ಕಲಬೆರಕೆ ಕಂಡುಹಿಡಿಯುವ ಟ್ರಿಕ್ :
ಈ ವೀಡಿಯೊದಲ್ಲಿ(Video), ಚಹಾ ಎಲೆಗಳ ಕಲಬೆರಕೆಯನ್ನು ಪತ್ತೆಹಚ್ಚಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಬಹಳ ಸರಳವಾದ ತಂತ್ರವನ್ನು ತಿಳಿಸಿಕೊಟ್ಟಿದೆ.
Detecting Exhausted Tea Leaves Adulteration in Tea Leaves#DetectingFoodAdulterants_11#AzadiKaAmritMahotsav@jagograhakjago @mygovindia @MIB_India @PIB_India @MoHFW_INDIA pic.twitter.com/BqCcT9X8SO
— FSSAI (@fssaiindia) October 21, 2021
FSSAI ಏನು ಹೇಳುತ್ತದೆ?
ಕಲಬೆರಕೆ ಮಾಡುವವರು ಹೆಚ್ಚಾಗಿ ನಕಲಿ ಚಹಾ ಎಲೆಗಳನ್ನು ಮಾರಾಟ ಮಾಡುತ್ತಾರೆ ಅಥವಾ ಅಸಲಿ ಚಹಾ ಎಲೆಗಳೊಂದಿಗೆ ಬೆರೆಸುತ್ತಾರೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಪ್ರಕಾರ, ಸರಳ ಪರೀಕ್ಷೆಯ ಮೂಲಕ ಚಹಾ ಎಲೆಗಳ ಗುಣಮಟ್ಟವನ್ನು ಸುಲಭವಾಗಿ ಪರಿಶೀಲಿಸಬಹುದು.
ಇದನ್ನೂ ಓದಿ : Lose Weight Foods : ಈ ಆಹಾರಗಳು ನಿಮ್ಮ ತೂಕ ಇಳಿಸುವಲ್ಲಿ ಬಹಳ ಪರಿಣಾಮಕಾರಿ : ಯಾವವು ಇಲ್ಲಿದೆ ನೋಡಿ!
ಈ ರೀತಿ ಅಸಲಿ ಮತ್ತು ನಕಲಿ ಚಹಾಗಳ ನಡುವಿನ ವ್ಯತ್ಯಾಸವನ್ನು ತಿಳಿಯಿರಿ :
-ಮೊದಲಿಗೆ, ಫಿಲ್ಟರ್ ಪೇಪರ್ ತೆಗೆದುಕೊಂಡು ಅದರ ಮೇಲೆ ಸ್ವಲ್ಪ ಚಹಾ ಎಲೆಗಳನ್ನು ಇರಿಸಿ.
-ಈಗ ಅದರ ಮೇಲೆ ಕೆಲವು ಹನಿ ನೀರು (Water) ಹಾಕಿ ಒದ್ದೆ ಮಾಡಿ.
-ಈಗ ಈ ಫಿಲ್ಟರ್ ಪೇಪರ್ ಅನ್ನು ನಲ್ಲಿ ನೀರಿನಿಂದ ತೊಳೆಯಿರಿ.
-ಈಗ ಬೆಳಕಿನಲ್ಲಿ ಇಡುವ ಮೂಲಕ ಈ ಫಿಲ್ಟರ್ ಪೇಪರ್ (Filter paper) ಮೇಲೆ ಕಲೆಯನ್ನು ಪರೀಕ್ಷಿಸಿ.
-ಫಿಲ್ಟರ್ ಪೇಪರ್ ಮೇಲೆ ಯಾವುದೇ ಕಲೆ ಇಲ್ಲದಿದ್ದರೆ ಅದು ಅಸಲಿ ಚಹಾ ಎಲೆಗಳು.
-ಫಿಲ್ಟರ್ ಪೇಪರ್ ಮೇಲೆ ಕಪ್ಪು-ಕಂದು ಕಪ್ಪು ಕಲೆಗಳು ಕಾಣಿಸಿಕೊಂಡರೆ, ಈ ಚಹಾ ಎಲೆ ನಕಲಿ ಎಂದರ್ಥ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ