Silver Ring Benefits: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ವ್ಯಕ್ತಿಯ ಭಾಗ್ಯ ಬದಲಾವಣೆ ಅಥವಾ ಭಾಗ್ಯದ ಸಾಥ್ ಸಿಗಲು ಹಲವು ಉಪಾಯಗಳ ಕುರಿತು ಉಲ್ಲೇಖಿಸಲಾಗಿದೆ. ಈ ಪಾಯಗಳನ್ನು ಅನುಸರಿಸಿದರೆ, ವ್ಯಕ್ತಿಯೊಬ್ಬನ ಜೀವನದಲ್ಲಿ ಎಲ್ಲಾ ರೀತಿಯ ಸುಖ ಸೌಕರ್ಯಗಳ ಆಗಮನವಾಗುತ್ತದೆ ಮತ್ತು ಮನೆ ಸಂಪತ್ತಿನಿಂದ ತುಂಬು ತುಳುಕುತ್ತದೆ ಎನ್ನಲಾಗುತ್ತದೆ. ಜೋತಿಷ್ಯ ಶಾಸ್ತ್ರದಲ್ಲಿ ಬೆಳ್ಳಿ ಉಂಗುರದ ಹಲವು ಉಪಾಯಗಳನ್ನು ಹೇಳಲಾಗಿದೆ. ಅವುಗಳ ಜೊತೆಗೆ ಬೆಳ್ಳಿ ಉಂಗುರವನ್ನು ಧರಿಸುವ ವಿಧಾನಗಳನ್ನೂ ಕೂಡ ಉಲ್ಲೇಖಿಸಲಾಗಿದೆ. 

COMMERCIAL BREAK
SCROLL TO CONTINUE READING

ಒಂದು ವೇಳೆ ನಿಮಗೂ ಕೂಡ ನಿಮ್ಮ ಭಾಗ್ಯದ ಬೆಂಬಲ ಸಿಗುತ್ತಿಲ್ಲ ಎಂದಾದಲ್ಲಿ ಬೆಳ್ಳಿ ಉಂಗುರ ಧರಿಸುವ ಸಲಹೆ ನೀಡಲಾಗುತ್ತದೆ. ಬೆಳ್ಳಿ ಉಂಗುರವನ್ನು ಹೇಗೆ ಧರಿಸಬೇಕು ಮತ್ತು ಧರಿಸುವಾಗ ಯಾವ ನಿಯಮಗಳನ್ನು ಪಾಲಿಸಬೇಕು ತಿಳಿದುಕೊಳ್ಳೋಣ, 


ಬೆಳ್ಳಿ ಉಂಗುರ ಧರಿಸುವ ವಿಧಾನ
>> ನೀವೂ ಕೂಡ ಒಂದು ವೇಳೆ ಬೆಳ್ಳಿ ಉಂಗುರವನ್ನು ಧರಿಸಲು ಯೋಚಿಸುತ್ತಿದ್ದರೆ, ಬೆಳ್ಳಿಯ ಉಂಗುರದಲ್ಲಿ ಮಧ್ಯದಲ್ಲಿ ಯಾವುದೇ ಜೋಡಣೆ ಇರಬಾರದು ಎಂಬುದನ್ನು ನೆನಪಿನಲ್ಲಿಡಿ. ಮಹಿಳೆಯರು ಎಡಗೈಯಲ್ಲಿ ಮತ್ತು ಪುರುಷರು ಬಲಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಬೇಕು. ಬೆಳ್ಳಿಯ ಉಂಗುರನ್ನು ಜೋತಿಷ್ಯ ಶಾಸ್ತ್ರದಲ್ಲಿ ಚಂದ್ರನ ಸಂಕೇತವೆಂದು ಪರಿಗಣಿಸಲಾಗುತ್ತದೆ.


>> ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ಸೂರ್ಯ ಮತ್ತು ಶನಿಯ ಸ್ಥಾನಕ್ಕೆ ಬಲಬರುತ್ತದೆ. ಅಲ್ಲದೆ, ಅದೃಷ್ಟದ ಬೆಂಬಲ ಹೆಚ್ಚಾಗುತ್ತದೆ. ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ರಾಹುದೋಷದಿಂದ ಮುಕ್ತಿ ಸಿಗುತ್ತದೆ ಮತ್ತು ಮನಸ್ಸಿಗೆ ಶಾಂತಿ ಸಿಗುತ್ತದೆ.


>> ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಕೈಯ ಹೆಬ್ಬೆರಳು ಶುಕ್ರ ಗ್ರಹಕ್ಕೆ ಕಾರಕ ಎಂದು ಹೇಳಲಾಗುತ್ತದೆ. ಇದಲ್ಲದೆ ಬೆಳ್ಳಿಯನ್ನು ಚಂದ್ರ ಗ್ರಹದ ಅಂಶವೆಂದು ಕೂಡ ಪರಿಗಣಿಸಲಾಗುತ್ತದೆ. ಆದ್ದರಿಂದ, ಜಾತಕದಲ್ಲಿ ಶುಕ್ರಬಲ ಪಡೆಯಲು ಹೆಬ್ಬೆರಳಿನಲ್ಲಿ ಬೆಳ್ಳಿಯ ಉಂಗುರವನ್ನು ಧರಿಸಲಾಗುತ್ತದೆ. ಜಾತಕದಲ್ಲಿ ಶುಕ್ರಗ್ರಹ ಬಲಿಷ್ಠವಾದರೆ, ಒಬ್ಬ ವ್ಯಕ್ತಿಯು ಎಲ್ಲಾ ರೀತಿಯ ಸುಖ-ಸೌಕರ್ಯಗಳನ್ನು ಪಡೆಯುತ್ತಾನೆ ಎನ್ನಲಾಗುತ್ತದೆ.


ಇದನ್ನೂ ಓದಿ-ಶನಿ ಸಾಡೇ ಸಾತಿ, ಧೈಯ್ಯಾದಿಂದ ಬಳಲುತ್ತಿರುವವರು ಮೇ 30 ರಂದು ಈ ಕೆಲಸ ಮಾಡಿದರೆ ಸಿಗಲಿದೆ ಎಲ್ಲಾ ಕಷ್ಟಗಳಿಂದ ಮುಕ್ತಿ


>> ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ಜಾತಕದಲ್ಲಿ ಬುಧನ ಸ್ಥಾನ ಬಲಗೊಳ್ಳುತ್ತದೆ ಎಂದು ನಂಬಲಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಬುಧ ಮತ್ತು ಶುಕ್ರ ನಡುವೆ ಸ್ನೇಹದ ಒಡನಾಟ ಇದೆ ಎನ್ನಲಾಗುತ್ತದೆ. ಇದೇ ವೇಳೆ  ಬುಧ ದೋಷ ಪರಿಹಾರದಿಂದ ಒಬ್ಬ ವ್ಯಕ್ತಿಯು ಕೆಲಸ ಮತ್ತು ವ್ಯವಹಾರದಲ್ಲಿ ಬಹಳಷ್ಟು ಯಶಸ್ಸನ್ನು ಸಾಧಿಸುತ್ತಾನೆ ಎನ್ನಲಾಗುತ್ತದೆ.


ಇದನ್ನೂ ಓದಿ-June 2022 Planetary Changes: ಜೂನ್‌ನಲ್ಲಿ 5 ಗ್ರಹಗಳ ರಾಶಿ ಪರಿವರ್ತನೆ, ಈ ರಾಶಿಯವರಿಗೆ ಪ್ರಗತಿ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ) 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.