Hair Care in Summer: ಬೇಸಿಗೆಯಲ್ಲಿ ಬೆವರಿನಿಂದ ತಲೆ ವಾಸನೆ ಬರುತ್ತಿದೆಯೇ? ಇಲ್ಲಿದೆ ಸಿಂಪಲ್ ಪರಿಹಾರ!
Hair Care in Summer: ಬಿಸಿಲು, ತಾಪಮಾನ ಏರಿಕೆಯಿಂದ ಬೇಸಿಗೆಯ ಸಮಯದಲ್ಲಿ ಸಿಕ್ಕಾಪಟ್ಟೆ ಬೆವರುತ್ತೇವೆ. ತಲೆಯಿಂದ ಪಾದದವರೆಗೂ ಬೆವರು ಬರುತ್ತದೆ. ಹೀಗಿರುವಾಗ ತಲೆಯಲ್ಲಿನ ಬೆವರಿನಿಂದ ಕೂದಲು ಅಂಟಾಗುವುದು, ವಾಸನೆ ಬರುವ ಸಮಸ್ಯೆ ಎದುರಾಗುತ್ತೆ.
Stickiness Of Hair: ಬೇಸಿಗೆಯಲ್ಲಿ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಅದಕ್ಕಾಗಿಯೇ ಬೇಸಿಗೆಯಲ್ಲಿ ಕೂದಲಿನ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಬೇಸಿಗೆ ಬಂತೆಂದರೆ ಕೂದಲಲ್ಲಿ ಬೆವರು, ಕೊಳೆಯಿಂದ ಕೂದಲಿನಲ್ಲಿ ಎಣ್ಣೆ ಅಂಶ ಶೇಖರಣೆಯಾಗತೊಡಗುತ್ತದೆ. ಅದೇ ಸಮಯದಲ್ಲಿ ಬೇಸಿಗೆಯಲ್ಲಿ ನೆತ್ತಿಯಿಂದ ಹೊರಬರುವ ಬೆವರಿನಿಂದ ನಿಮ್ಮ ಕೂದಲು ಹಾಳಾಗಲು ಪ್ರಾರಂಭಿಸುತ್ತದೆ. ಆದರೆ ಸರಿಯಾದ ಕಾಳಜಿಯಿಂದ ಈ ಎಲ್ಲಾ ಸಮಸ್ಯೆಗಳನ್ನು ನೀವು ನಿವಾರಿಸಬಹುದು.
ವಾರಕ್ಕೆ ಎರಡು ಬಾರಿ ತಲೆ ಸ್ನಾನ ಮಾಡಿ : ಕೂದಲಿನಲ್ಲಿರುವ ಬೆವರನ್ನು ತೊಲಗಿಸಲು ವಾರಕ್ಕೆ ಎರಡು ಬಾರಿ ತಲೆಸ್ನಾನ ಮಾಡಿ. ತಲೆ ಸ್ನಾನ ಮಾಡುವುದು ಮಾತ್ರ ಇದಲ್ಲದೇ ವಾರಕ್ಕೊಮ್ಮೆ ಕೂದಲಿಗೆ ಎಣ್ಣೆ ಹಚ್ಚಿ.
ಇದನ್ನೂ ಓದಿ : 35 ಪ್ಲಸ್ ಬಳಿಕವೂ ಸ್ವೀಟ್ 16 ರಂತೆ ಕಾಣಿಸಿಕೊಳ್ಳಬೇಕೆ? ಈ ಉಪಾಯ ಅನುಸರಿಸಿ ನೋಡಿ!
ರೋಸ್ ವಾಟರ್ ಬಳಸಿ : ಕೂದಲಿನಲ್ಲಿ ಅತಿಯಾದ ಬೆವರುವುದು ಒಳ್ಳೆಯದಲ್ಲ. ಅತಿಯಾದ ಬೆವರುವಿಕೆಯಿಂದ, ನಿಮ್ಮ ತಲೆಯ ನೆತ್ತಿಯು ವಾಸನೆ ಬರಲು ಪ್ರಾರಂಭಿಸುತ್ತದೆ. ಬೆವರುವಿಕೆಯಿಂದಾಗಿ ನೆತ್ತಿಯ ಮೇಲೆ ಬ್ಯಾಕ್ಟೀರಿಯಾದ ಬೆಳವಣಿಗೆಯ ಸಾಧ್ಯತೆಯೂ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೂದಲಿನ ಜಿಗುಟುತನದಿಂದ ನಿಮಗೂ ತೊಂದರೆಯಾಗುತ್ತಿದ್ದರೆ ಹತ್ತಿಯ ಸಹಾಯದಿಂದ ರೋಸ್ ವಾಟರ್ ಅನ್ನು ತಲೆಗೆ ಹಚ್ಚಿಕೊಳ್ಳಿ. ಇದರಿಂದ ಜಿಗುಟುತನ ದೂರವಾಗುತ್ತದೆ.
ಕೂದಲಿಗೆ ನಿಂಬೆ ಹಚ್ಚಿ: ನಿಮ್ಮ ಕೂದಲು ಎಣ್ಣೆಯುಕ್ತವಾಗಿದ್ದರೆ, ನೀವು ನಿಂಬೆ ರಸವನ್ನು ಬಳಸಬಹುದು. ನಿಂಬೆ ರಸದಿಂದ ಕೂದಲಿನ ಜಿಗುಟುತನವನ್ನು ಹೋಗಲಾಡಿಸಬಹುದು. ಬೆರಸವನ್ನು ನೀರಿನಲ್ಲಿ ಬೆರೆಸಿ ಹಚ್ಚಿ, 15 ನಿಮಿಷಗಳ ಹಾಗೆಯೇ ಬಿಡಿ. ಈಗ ಕೂದಲನ್ನು ಶುದ್ಧ ನೀರಿನಿಂದ ತೊಳೆಯಿರಿ.
ಇದನ್ನೂ ಓದಿ : ಕೇವಲ 4 ದಿನಗಳಲ್ಲಿ ಸಿಲ್ಕಿ, ಶೈನಿಂಗ್ ಕೂದಲು ಪಡೆಯಲು ಹೀಗೆ ಮಾಡಿ..!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.