ಬೆಂಗಳೂರು : ಸಾಮಾನ್ಯವಾಗಿ ಎಲ್ಲರೂ ಹೂಕೋಸು ತಿನ್ನಲು ಇಷ್ಟಪಡುತ್ತಾರೆ. ಆದರೆ, ಅದನ್ನು ತಯಾರಿಸುವ ಮೊದಲು,ಅದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ.ಏಕೆಂದರೆ ಇದರಲ್ಲಿ  ಹಲವು ರೀತಿಯ  ಸಣ್ಣ ಸಣ್ಣ  ಬ್ಯಾಕ್ಟೀರಿಯಾಗಳು ಮತ್ತು ಕೀಟಗಳು ಮನೆ ಮಾಡಿರುತ್ತವೆ.ಇದು  ಅದು ಹೊಟ್ಟೆಯನ್ನು ತಲುಪಿದರೆ ನಮ್ಮನ್ನು ಅನಾರೋಗ್ಯಕ್ಕೆ ಗುರಿ ಮಾಡಿಬಿಡುತ್ತದೆ. 


COMMERCIAL BREAK
SCROLL TO CONTINUE READING

ಮಳೆಗಾಲದಲ್ಲಿ ಈ ತರಕಾರಿಯನ್ನು ಸವಿಯಬೇಕೆಂದರೆ ಇದರ ಸ್ವಚ್ಚತೆಯ  ಬಗ್ಗೆ ಸ್ವಲ್ಪ ಹೆಚ್ಚೇ ಕಾಳಜಿ ವಹಿಸಬೇಕು. ಇಲ್ಲಿ ತಿಳಿಸಿರುವ ವಿಧಾನಗಳ ಮೂಲಕ ಸ್ವಚ್ಛಗೊಳಿಸಿದರೆ ಆಹಾರದ ರುಚಿಯೂ ಹೆಚ್ಚುವುದು ಜೊತೆಗೆ ಆರೋಗ್ಯ ಕೆಡುತ್ತದೆ ಎನ್ನುವ ಭಯವೂ ಇರುವುದಿಲ್ಲ.


ಇದನ್ನೂ ಓದಿ : 5 ನಿಮಿಷದಲ್ಲಿ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗಲು ಒಂದು ತುಂಡು ಇದ್ದಿಲು ಸಾಕು..! ಈ ಎಣ್ಣೆಯಲ್ಲಿ ಮಿಶ್ರಣ ಮಾಡಿ ಹಚ್ಚಿ


ಹೂ ಕೋಸನ್ನು ಹೀಗೆ ಶುಚಿಗೊಳಿಸಿ :  
ಹಂತ 1: ಹೂ ಕೋಸನ್ನು ಕತ್ತರಿಸಿ :
ಹೂಕೋಸು ಸ್ವಚ್ಛಗೊಳಿಸುವ ಪ್ರಕ್ರಿಯೆಯಲ್ಲಿ ಮೊದಲ ಹಂತವೆಂದರೆ ಅದರ ಹೊರಗಿನ ಎಲೆಗಳನ್ನು ತೆಗೆದು ಮಧ್ಯಮ ಗಾತ್ರದ ತುಂಡುಗಳಾಗಿ ಕತ್ತರಿಸುವುದು. ಚಾಕುವಿನ ಸಹಾಯವಿಲ್ಲದೆ ನಿಮ್ಮ ಕೈಗಳಿಂದಲೇ ಈ ಕೆಲಸವನ್ನು ಮಾಡಿ ಮುಗಿಸಬಹುದು.   


ಹಂತ 2: ಹೂಕೋಸನ್ನು ನೀರಿನಲ್ಲಿ ನೆನೆಸಿಡಿ : 
ಹೂಕೋಸು ತುಂಡುಗಳನ್ನು ಉಗುರುಬೆಚ್ಚಗಿನ ನೀರಿನಲ್ಲಿ ಉಪ್ಪು ಅಥವಾ ಅಡಿಗೆ ಸೋಡಾ ಬೆರೆಸಿ ನೆನೆಸಿಡಿ.ಇದು ಹೂಕೋಸಿನಲ್ಲಿರುವ ಬ್ಯಾಕ್ಟೀರಿಯಾವನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ.ಅದರಲ್ಲಿ ಅಡಗಿರುವ ಕೀಟಗಳು ಸಹ ಒಂದೊಂದಾಗಿ ಹೊರಬರುತ್ತವೆ. 


ಹಂತ 3: ಹೂಕೋಸನ್ನು ನೀರಿನಿಂದ ತೊಳೆಯಿರಿ : 
10-15 ನಿಮಿಷಗಳ ನಂತರ,ಹೂಕೋಸುಗಳನ್ನು ನೀರಿನಿಂದ ಹೊರತೆಗೆದು ಶುದ್ಧ ನೀರಿನಿಂದ ಪ್ರತ್ಯೇಕವಾಗಿ ತೊಳೆಯಿರಿ.ನಂತರ ನೀರಿನಿಂದ ಹೊರತೆಗೆದು ಶುದ್ಧವಾದ ಪಾತ್ರೆಯಲ್ಲಿ ಇರಿಸಿ.


ಇದನ್ನೂ ಓದಿ : ಬೆಳಿಗ್ಗೆ ಎದ್ದ ತಕ್ಷಣ ಈ ಜ್ಯೂಸ್‌ ಕುಡಿದರೇ ಸಾಕು ಶುಗರ್ ಸಂಪೂರ್ಣ ಕಂಟ್ರೋಲ್ ಆಗುತ್ತೆ!!


ಹಂತ 4: ಒಣಗಿಸಿ ಮತ್ತು ಬಳಸಿ : 
ಈಗ ಹೂಕೋಸನ್ನು ಚೆನ್ನಾಗಿ ಒಣಗಿಸಿ ಅದನ್ನು ನಿಮ್ಮ ನೆಚ್ಚಿನ ಪಾಕವಿಧಾನದಲ್ಲಿ ಬಳಸಿಕೊಳ್ಳಿ.ಈ ರೀತಿ ಸ್ವಚ್ಛಗೊಳಿಸಿದ ಹೂಕೋಸು ನಿಮ್ಮ ಆಹಾರವನ್ನು ಆರೋಗ್ಯಕರವಾಗಿಸುತ್ತದೆ.ಮಾತ್ರವಲ್ಲ ಅದರ ರುಚಿ ಕೂಡಾ ದುಪ್ಪಟ್ಟಾಗಿರುತ್ತದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.