Eye Care In Monsoon: ದಕ್ಷಿಣ ಭಾರತದ ಬಹುತೇಕ ಭಾಗಗಳಲ್ಲಿ ಮಾನ್ಸೂನ್‌ (Monsoon) ಆರಂಭವಾಗಿದೆ. ಮುಂಗಾರು ಮಳೆಯೊಂದಿಗೆ ಕೃಷಿ ಚಟುವಟಿಕೆಗಳು ಹೆಚ್ಚಾಗುತ್ತವೆ. ಮಾನ್ಸೂನ್‌ನಲ್ಲಿ ಮನೆಯ ಆನಂದದೊಂದಿಗೆ ಸೋಂಕಿನ ಅಪಾಯವೂ ಇದ್ದೇ ಇರುತ್ತದೆ. ಹಾಗಾಗಿ ಕೆಲವು ವಿಷಯಗಳ ಬಗ್ಗೆ ವಿಶೇಷವಾಗಿ ಗಮನ ವಹಿಸುವುದು ಅವಶ್ಯಕವಾಗಿದೆ. 


COMMERCIAL BREAK
SCROLL TO CONTINUE READING

ಮಾನ್ಸೂನ್‌ನಲ್ಲಿ ಯಾವುದೇ ಕಣ್ಣಿನ ಸಂಬಂಧಿತ ಕಾಯಿಲೆ (Eye Problem) ಅಥವಾ ಸೋಂಕನ್ನು ತಪ್ಪಿಸಲು ಕೆಲವು ಸಲಹೆಗಳು ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಅಂತಹ ಕೆಲವು ಸರಳ ಸಲಹೆಗಳೆಂದರೆ... 


ಆಗಾಗ್ಗೆ ಕಣ್ಣುಗಳನ್ನು ಸ್ಪರ್ಶಿಸುವುದು: 
ಪದೇ ಪದೇ ಕೊಳಕು ಕೈಗಳಿಂದ ಣ್ಣುಗಳನ್ನು ಸ್ಪರ್ಶಿಸುವ ಅಭ್ಯಾಸ ಇದ್ದರೆ ಮಳೆಗಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬೇಡಿ. 


ಇದನ್ನೂ ಓದಿ- Weight Loss: ಈ ರೀತಿ ಅನ್ನ ತಿಂದರೆ ಎಂದಿಗೂ ತೂಕ ಹೆಚ್ಚಾಗಲ್ಲ


ಕಣ್ಣುಗಳನ್ನು ಉಜ್ಜುವುದು: 
ಕಣ್ಣಿನ ಬಳಿ ತುರಿಕೆಯಾಗುತ್ತಿದ್ದರೆ ಕಣ್ಣುಗಳನ್ನು ಉಜ್ಜುವ ಬದಲಿಗೆ ಶುದ್ಧವಾದ ಕಾಟನ್ ಬಟ್ಟೆಯಿಂದ ಕಣ್ಣುಗಳನ್ನು ಒರೆಸಿ. 


ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಬಳಸಬೇಡಿ: 
ಮಳೆಗಾಲದಲ್ಲಿ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಬಳಸುವುದನ್ನು ತಪ್ಪಿಸಿ. ಜೊತೆಗೆ ಮಳೆಯಲ್ಲಿ ನೆನೆಯುವುದನ್ನು ತಪ್ಪಿಸಲು ರೈನ್ ಕೋಟ್ ಧರಿಸಿ ಅಥವಾ ಛತ್ರಿಯನ್ನು ಬಳಸಿ. 


ಇದನ್ನೂ ಓದಿ- Beauty Tips: ಸದಾ ಯಂಗ್ ಆಗಿ ಕಾಣಲು ಮಲಗುವ ಮುನ್ನ ಈ ಟಿಪ್ಸ್ ಅನುಸರಿಸಿ


ಇವುಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ: 
ಮಳೆಗಾಲದಲ್ಲಿ ಬೆವರು, ಒದ್ದೆಯ ಕಾರಣದಿಂದಾಗಿ ಸೋಂಕಿನ ಅಪಾಯ ಹೆಚ್ಚಿರುವುದರಿಂದ  ಕರವಸ್ತ್ರಗಳು, ಸನ್‌ಗ್ಲಾಸ್‌ಗಳು ಮತ್ತು ಕಾಂಟ್ಯಾಕ್ಟ್ ಲೆನ್ಸ್‌ಗಳಂತಹ  ನಿಮ್ಮ ವೈಯಕ್ತಿಕ ಉತ್ಪನ್ನಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. 


ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.