Sleep Paralysis : ವೈದ್ಯಕೀಯ ಸಂಶೋಧನೆಯ ಪ್ರಕಾರ ರಾತ್ರಿ ನೀವು ಮಲಗಿದ್ದಾಗ ಎದೆಯ ಮೇಲೆ ಯಾರೋ ಕುಳಿತಂತೆ ನಿಮಗೆ ಭಾಸವಾಗದರೆ ಇದನ್ನು ನಿದ್ರಾ ಪಾರ್ಶ್ವವಾಯು ಎಂದು ಕರೆಯಲಾಗುತ್ತದೆ. ಎತ್ತರದ ಸ್ಥಳದಿಂದ ಬೀಳುವುದು, ಆಳವಾದ ನೀರಿನಲ್ಲಿ ಮುಳುಗುವುದು ಅಥವಾ ಪ್ರೀತಿಪಾತ್ರರ ಸಾವಿನಂತಹ ದುಃಸ್ವಪ್ನಗಳು ಸಂಭವಿಸುತ್ತವೆ. ಹಾಗಾದರೆ ನಿದ್ರಾ ಪಾರ್ಶ್ವವಾಯು ಎಂದರೇನು..? ಇಲ್ಲಿದೆ ಉತ್ತರ..


COMMERCIAL BREAK
SCROLL TO CONTINUE READING

ಮಧ್ಯರಾತ್ರಿಯಲ್ಲಿ ಯಾರಾದರೂ ಇದ್ದಕ್ಕಿದ್ದಂತೆ ನಿಮ್ಮ ಮೇಲೆ ಕುಳಿತಿರುವಂತೆ, ನೀವು ಶಬ್ದ ಮಾಡಲು ಸಾಧ್ಯವಾಗುವುದಿಲ್ಲ, ನಿಮ್ಮ ಕೈ ಮತ್ತು ಕಾಲುಗಳನ್ನು ಯಾರೋ ಕಟ್ಟಿ ಹಾಕಿದಂತಾಗುತ್ತದೆ.. ಇದು ಕೆಲವು ಅಲೌಕಿಕ ವಿದ್ಯಮಾನಗಳಿಂದಾಗಿ ಜರುಗುತ್ತದೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು.. 


ಇದನ್ನೂ ಓದಿ:ನೈಸರ್ಗಿಕ ಕಾಂತಿಯುತ ತ್ವಚೆ ನಿಮ್ಮದಾಗಬೇಕೆ? ಆಲೂಗಡ್ಡೆಯನ್ನು ಈ ರೀತಿ ಬಳಸಿ


ವೈದ್ಯಕೀಯ ಸಂಶೋಧನೆಯ ಪ್ರಕಾರ, ನಿದ್ರಾ ಪಾರ್ಶ್ವವಾಯು ಒಂದು ರೀತಿಯ ನಿದ್ರಾಹೀನತೆಯಿಂದ ಬರುವ ಸಮಸ್ಯೆಯಾಗಿದೆ. ನೀವು ನಿದ್ರಿಸುವಾಗ ನಿಮ್ಮ ಆತ್ಮ ಹೊರಟುಹೋದಂತೆ ಮತ್ತು ನಿಮ್ಮ ಕೈಗಳು ಮತ್ತು ಕಾಲುಗಳು ಚಲನೆ ಕಳೆದುಕೊಂಡಂತೆ ಭಾಸವಾಗುತ್ತದೆ.. ಇದನ್ನೇ ನಿದ್ರಾ ಪಾರ್ಶ್ವವಾಯು ಎಂದು ಕರೆಯಲಾಗುತ್ತದೆ. ಸರಳವಾಗಿ ಹೇಳುವುದಾದರೆ, ನಿಮ್ಮ ಮನಸ್ಸು ಎಚ್ಚರವಾಗಿದ್ದು, ನಿಮ್ಮ ದೇಹವು ನಿದ್ರಿಸುತ್ತಿರುತ್ತದೆ. ಈ ಸಮಸ್ಯೆ ಹೆಚ್ಚಾಗಿ ಯುವ ಪೀಳಿಗೆಯಲ್ಲಿ ಕಂಡು ಬರುತ್ತದೆ.. ಆಳವಾದ ನಿದ್ರೆಗೆ ಹೋಗುವ ಮೊದಲು ಅಥವಾ ಎಚ್ಚರವಾದ ಸ್ವಲ್ಪ ಸಮಯದ ನಂತರ ಇದು ಸಂಭವಿಸುತ್ತದೆ.


ನಿದ್ರಾ ಪಾರ್ಶ್ವವಾಯುವಿಗೆ ಕಾರಣವೇನು? : ನಿದ್ರಾ ಪಾರ್ಶ್ವವಾಯುವಿಗೆ ಹಲವು ಕಾರಣಗಳಿವೆ. ಕೆಲವು ಕಾರಣಗಳಲ್ಲಿ ನಿದ್ರೆಯ ಕೊರತೆ ಮತ್ತು ಒತ್ತಡವೂ ಸೇರಿವೆ. ನೀವು ಸಾಕಷ್ಟು ನಿದ್ರೆ ಮಾಡದಿದ್ದಾಗ, ಈ ನಿದ್ರಾ ಪಾರ್ಶ್ವವಾಯು ಸಮಸ್ಯೆ ಉಂಟಾಗುತ್ತದೆ. ನೀವು ಕಾಲಕಾಲಕ್ಕೆ ನಿಮ್ಮ ಮಲಗುವ ವಿಧಾನವನ್ನು ಬದಲಾಯಿಸಿದರೆ, ಈ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ, ಈ ನಿದ್ರಾ ಪಾರ್ಶ್ವವಾಯು ಸಮಸ್ಯೆಗೆ ಅತಿಯಾದ ನಿದ್ದೆ ಕೂಡ ಒಂದು ಕಾರಣ.


ಇದನ್ನೂ ಓದಿ:ಈ 2 ಮಸಾಲೆಗಳನ್ನು ತಿಂದರೆ ಸಾಕು.. ಕ್ಷಣಾರ್ಧದಲ್ಲಿ ನಿಯಂತ್ರಣಕ್ಕೆ ಬರುತ್ತೆ ಬ್ಲಡ್‌ ಶುಗರ್!


ನಿದ್ರಾ ಪಾರ್ಶ್ವವಾಯು ಸಮಸ್ಯೆಯನ್ನು ತಡೆಯುವುದು ಹೇಗೆ..? : ಪ್ರತಿದಿನ 7-8 ಗಂಟೆಗಳ ಕಾಲ ಚೆನ್ನಾಗಿ ನಿದ್ದೆ ಮಾಡಿ. 12 ಗಂಟೆಗೆ ಮಲಗುವುದನ್ನು ತಪ್ಪಿಸಿ ಮತ್ತು ಬೆಳಿಗ್ಗೆ ಬೇಗನೆ ಏಳಿ. ಒತ್ತಡವನ್ನು ಕಡಿಮೆ ಮಾಡಲು ಮತ್ತು ಶಾಂತವಾಗಿ ಮಲಗಲು ಯೋಗ, ಧ್ಯಾನ ಇತ್ಯಾದಿಗಳನ್ನು ಮಾಡಿ. ಮಲಗುವ ಮುನ್ನ ಕಾಫಿ ಮತ್ತು ಹೆಚ್ಚು ಊಟ ಸೇವನೆ ತಪ್ಪಿಸಿ. ಮಲಗುವ ಸ್ಥಳವನ್ನು ಶಾಂತವಾಗಿಡಿ. ಆಲ್ಕೋಹಾಲ್ ಮತ್ತು ಸಿಗರೇಟ್ ಸೇವಿಸಬೇಡಿ. ಮಲಗುವ ಎರಡು ಗಂಟೆಗಳ ಮೊದಲು ಫೋನ್ ಅನ್ನು ನೋಡಬೇಡಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.