ಬೆಂಗಳೂರು : Solar Eclipse 2022 Date: ಹಿಂದೂ ಧರ್ಮದಲ್ಲಿ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಗ್ರಹಣದ ಸಮಯದಲ್ಲಿ ಮಂಗಳ  ಕಾರ್ಯಗಳನ್ನು ನಿಷೇಧಿಸಲಾಗಿದೆ. ಗ್ರಹಣ ಕಾಲದಲ್ಲಿ ದೇವಾಲಯಗಳ ಬಾಗಿಲು ಮುಚ್ಚಲಾಗುತ್ತದೆ. ಗ್ರಹಣದ ಸಮಯದಲ್ಲಿ ಅನುಸರಿಸಬೇಕಾದ ಹಲವಾರು ನಿಯಮಗಳಿವೆ. 2022 ರ ಮೊದಲ ಸೂರ್ಯಗ್ರಹಣವು ಏಪ್ರಿಲ್ 30 ರ ಮಧ್ಯರಾತ್ರಿ ಸಂಭವಿಸುತ್ತದೆ. ಇದು ಭಾಗಶಃ ಸೂರ್ಯಗ್ರಹಣವಾಗಿರುತ್ತದೆ. ಈ ಗ್ರಹಣವು ಮಧ್ಯರಾತ್ರಿ 12:15 ರಿಂದ ಪ್ರಾರಂಭವಾಗಿ,  ಬೆಳಿಗ್ಗೆ 04:08 ರವರೆಗೆ ಇರುತ್ತದೆ.


COMMERCIAL BREAK
SCROLL TO CONTINUE READING

ವರ್ಷದ ಮೊದಲ ಸೂರ್ಯಗ್ರಹಣ ಮೇಷ ರಾಶಿಯಲ್ಲಿ ನಡೆಯಲಿದೆ. ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಜ್ಯೋತಿಷಿಗಳ ಪ್ರಕಾರ, ಭಾರತದಲ್ಲಿ ಈ ಗ್ರಹಣ ಗೋಚರಿಸದ ಕಾರಣ ಸೂತಕ ಅವಧಿಯು ಮಾನ್ಯವಾಗಿರುವುದಿಲ್ಲ. ವರ್ಷದ ಮೊದಲ ಸೂರ್ಯಗ್ರಹಣವು ದಕ್ಷಿಣ ಅಮೆರಿಕಾದ ನೈಋತ್ಯ ಭಾಗ, ಪೆಸಿಫಿಕ್ ಮಹಾಸಾಗರ, ಅಟ್ಲಾಂಟಿಕ್ ಮತ್ತು ದಕ್ಷಿಣ ಧ್ರುವದಲ್ಲಿ ಗೋಚರಿಸುತ್ತದೆ. ವರ್ಷದ ಮೊದಲ ಸೂರ್ಯಗ್ರಹಣವು ಯಾವ ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತದೆ ನೋಡೋಣ. 


ಇದನ್ನೂ ಓದಿ : Shani: ಶನಿಯ ಶುಭ ದೆಸೆ ಭಾಗ್ಯೋದಯಕ್ಕೆ ಕಾರಣ, ಜೀವನದಲ್ಲಿ ಏನೆಲ್ಲಾ ಸಿಗುತ್ತದೆ ಗೊತ್ತಾ?


ವೃಷಭ ರಾಶಿ : ವರ್ಷದ ಮೊದಲ ಸೂರ್ಯಗ್ರಹಣವು ಈ ರಾಶಿಯ ಜನರಿಗೆ ಶುಭ ಫಲವನ್ನು ನೀಡಲಿದೆ. ಈ ರಾಶಿಯವರ ಆರ್ಥಿಕ ಸ್ಥಿತಿ ಬಲವಾಗಿರಲಿದೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು  ಪೂರ್ಣಗೊಳ್ಳಲಿದೆ. ವ್ಯಾಪಾರಿಗಳಿಗೆ ಲಾಭವಾಗಲಿದೆ. ವ್ಯಾಪಾರದಲ್ಲಿ ಮಾಡುವ ಹೂಡಿಕೆ ಶುಭವಾಗಲಿದೆ. ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ ಸಿಗಬಹುದು.


ಕರ್ಕಾಟಕ : ಈ ಗ್ರಹಣವು ಕರ್ಕಾಟಕ ರಾಶಿಯವರಿಗೆ ಅದೃಷ್ಟವನ್ನು ನೀಡುತ್ತದೆ. ಕೆಲಸದ ಸ್ಥಳದಲ್ಲಿ ಮತ್ತು ಸಮಾಜದಲ್ಲಿ ಗೌರವ ಹೆಚ್ಚಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸದ ಶೈಲಿಯು ಸುಧಾರಿಸುತ್ತದೆ. ಕಚೇರಿಯಲ್ಲಿ ಕೆಲಸಕ್ಕೆ ಮೆಚ್ಚುಗೆ ಸಿಗಲಿದೆ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಳಿಂದ ಬೆಂಬಲ ಸಿಗುತ್ತದೆ.


ಇದನ್ನೂ ಓದಿ : Chanakya Niti : ಈ ಕೆಲಸಗಳನ್ನ ಅತಿಯಾಗಿ ಮಾಡುವುದರಿಂದ, ಇವು ಜೀವಕ್ಕಿದೆ ಕುತ್ತು 


ಧನು ರಾಶಿ :  ಸೂರ್ಯಗ್ರಹಣದ ಪ್ರಭಾವದಿಂದ ವ್ಯಾಪಾರದಲ್ಲಿ ಲಾಭವಾಗಲಿದೆ.  ಉದ್ಯೋಗಾಕಾಂಕ್ಷಿಗಳು ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು. ನಿಮ್ಮ ಸಂಗಾತಿಯೊಂದಿಗಿನ ಸಂಬಂಧಗಳು ಸಿಹಿಯಾಗಿರುತ್ತದೆ. ರಹಸ್ಯ ಶತ್ರುಗಳು ನಾಶವಾಗುತ್ತಾರೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.