ನವದೆಹಲಿ: ದೇಶದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಗ್ರಹಣದ ನೆರಳಿನಲ್ಲಿ ಆಚರಿಸಲಾಗುತ್ತಿದೆ. ನರಕ ಚತುರ್ದಶಿಯ ಮರುದಿನ ಅಂದರೆ ಅಕ್ಟೋಬರ್ 25ರ ಮಂಗಳವಾರ ಭಾಗಶಃ ಸೂರ್ಯಗ್ರಹಣ ಸಂಭವಿಸಲಿದೆ. ಇದು ವರ್ಷದ 2ನೇ ಮತ್ತು ಕೊನೆಯ ಸೂರ್ಯಗ್ರಹಣವಾಗಿದೆ.


COMMERCIAL BREAK
SCROLL TO CONTINUE READING

ಸೂರ್ಯಗ್ರಹಣದ ಸೂತಕವು 12 ಗಂಟೆಗಳ ಮೊದಲು ಪ್ರಾರಂಭವಾಗಲಿದೆ. ಭಾರತದಲ್ಲಿ ಸಂಜೆ 4.29ರಿಂದ ಆರಂಭವಾಗಲಿರುವ ಗ್ರಹಣವು ಸೂರ್ಯಾಸ್ತದೊಂದಿಗೆ ಅಂದರೆ ಸಂಜೆ 5.42ರ ವೇಳೆಗೆ ಮುಗಿಯಲಿದೆ. 5.30ರ ವೇಳೆಗೆ ಗ್ರಹಣವು ಉತ್ತುಂಗ ತಲುಪಲಿದೆ. ಸೂರ್ಯಗ್ರಹಣ ಯಾವಾಗಲೂ ಅಮವಾಸ್ಯೆಯ ತಿಥಿಯಂದು ಸಂಭವಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸಾಲಿನಲ್ಲಿ ಬಂದಾಗ ಗ್ರಹಣ ಸಂಭವಿಸುತ್ತದೆ.


ಇದನ್ನೂ ಓದಿ: Viral Video: ವಿಶ್ವದ ಅತ್ಯಂತ ಸುಂದರ ಹಾವು ಇದೇನಾ? ನೋಡಿ ಕಾಮದೇವ ಕೂಡ ಮಂತ್ರಮುಗ್ಧನಾಗುವುದು ಗ್ಯಾರಂಟಿ!


ಭಾರತದ ಬಹುತೇಕ ಎಲ್ಲ ಭಾಗಗಳಲ್ಲೂ ಭಾಗಶಃ ಸೂರ್ಯಗ್ರಹಣ ಗೋಚರಿಸಲಿದೆ. ಬೆಂಗಳೂರಿನಲ್ಲಿ ಸಂಜೆ 5.12ರಿಂದ 5.56ರವರೆಗೆ ಅಂದರೆ 44 ನಿಮಿಷಗಳ ಕಾಲ ಗ್ರಹಣ ಗೋಚರಿಸಲಿದೆ. ಗುಜರಾತ್‌ನ ದ್ವಾರಕಾದಲ್ಲಿ ದೀರ್ಘ‌ಕಾಲ ಅಂದರೆ 1 ಗಂಟೆ 45 ನಿಮಿಷಗಳ ಕಾಲ ಗ್ರಹಣವಿರಲಿದೆ ಎಂದು ತಿಳಿದುಬಂದಿದೆ. ಇದಕ್ಕೂ ಮೊದಲು ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 30ರಂದು ಸಂಭವಿಸಿತ್ತು.


ಭಾರತ ಮಾತ್ರವಲ್ಲದೇ ಯುರೋಪ್‌, ಮಧ್ಯಪ್ರಾಚ್ಯ, ಆಫ್ರಿಕಾದ ಈಶಾನ್ಯ ಭಾಗಗಳು, ಪಶ್ಚಿಮ ಏಷ್ಯಾ, ಉತ್ತರ ಅಟ್ಲಾಂಟಿಕ್‌ ಸಾಗರ ಮತ್ತು ಉತ್ತರ ಹಿಂದೂ ಮಹಾಸಾಗರ ಪ್ರದೇಶಗಳಲ್ಲಿಯೂ ಗ್ರಹಣ ಗೋಚರಿಸಲಿದೆ. ಯಾವುದೇ ಕಾರಣಕ್ಕೂ ಬರಿಗಣ್ಣಿನಲ್ಲಿ ಗ್ರಹಣ ವೀಕ್ಷಿಸಬಾರದು ಅಂತಾ ತಜ್ಞರು ಸಲಹೆ ನೀಡಿದ್ದಾರೆ.


ಇದನ್ನೂ ಓದಿ: Cyclone Sitrang: ದೇಶದ 6 ರಾಜ್ಯಗಳಿಗೆ ‘ಸಿತ್ರಾಂಗ್’ ಭೀತಿ: ಕರ್ನಾಟಕಕ್ಕೂ ಇದೆಯಾ ಸೈಕ್ಲೋನ್ ಪರಿಸ್ಥಿತಿ ಎಫೆಕ್ಟ್?


ಗ್ರಹಣದ ವೇಳೆ ಏನು ಮಾಡಬೇಕು & ಮಾಡಬಾರದು?


ಗ್ರಹಣದ ಸೂತಕ ಕಾಲದಲ್ಲಿ ದಾನ, ಜಪ ಇತ್ಯಾದಿಗಳಿಗೆ ವಿಶೇಷ ಮಹತ್ವವಿದೆ. ಈ ವೇಳೆ ಪವಿತ್ರ ನದಿಗಳು ಮತ್ತು ಸರೋವರಗಳಲ್ಲಿ ಸ್ನಾನ ಮಾಡಿ ಮಂತ್ರ ಪಠಿಸಲಾಗುತ್ತದೆ. ಗ್ರಹಣದ ವೇಳೆ ಮನೆಯಿಂದ ಹೊರ ಹೋಗಬಾರದು. ದೇವರನ್ನು ಸ್ಮರಿಸುತ್ತಾ ಮಂತ್ರ ಇತ್ಯಾದಿಗಳನ್ನು ಪಠಿಸಬೇಕು. ಗ್ರಹಣದ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು. ಈ ಸಂದರ್ಭದಲ್ಲಿ ದೇವಾಲಯದ ಬಾಗಿಲುಗಳನ್ನು ಮುಚ್ಚಬೇಕು. ಈ ಸಮಯದಲ್ಲಿ ಗರ್ಭಿಣಿಯರು ಮನೆಯಿಂದ ಹೊರಹೋಗಬಾರದು ಎಂದು ಸಲಹೆ ನೀಡಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ