ನವದೆಹಲಿ : ಕೆಲವರು ಅಲ್ಪಾವಧಿಯಲ್ಲಿಯೇ ಸದಾ ನೆನಪಿನಲ್ಲಿಡುವಂಥಹ ಕೆಲಸಗಳನ್ನು ಮಾಡುತ್ತಾರೆ. ಇನ್ನು ಅದೆಷ್ಟೇ ಸಮಯ ಕಳೆದರೂ ಅಸಾಮಾನ್ಯ ಎನ್ನವುದನ್ನು ಸಾಧಿಸಲು ಸಾಧ್ಯವಾಗುವುದೇ ಇಲ್ಲ. ಕೆಲವೊಮ್ಮೆ ಅವರು ತಮ್ಮ ಕೆಲಸಗಳಿಗೆ, ಅಥವಾ ಯಾವುದೇ ಅಗತ್ಯಗಳಿಗಾಗಿ ಇತರರನ್ನು ಅವಲಂಬಿಸಿರುತ್ತಾರೆ. ತಮ್ಮ ಪ್ರತೀ ಕೆಲಸಗಳಿಗೆ ಇತರರನ್ನು ಅವಲಂಬಿಸಿಕೊಂಡು ಬದುಕುವುದು ಎಂದರೆ ಅಂಥವರು ಭೂಮಿಗೆ ಹೊರೆಯಿದ್ದಂತೆ. ಮಹಾನ್ ವಿದ್ವಾಂಸರಾದ ಆಚಾರ್ಯ ಚಾಣಕ್ಯರು (Chanakya Niti) ತಮ್ಮ ನೀತಿ ಶಾಸ್ತ್ರದಲ್ಲಿ ಅಂತಹ ಜನರ ಬಗ್ಗೆ ಹೇಳಿದ್ದಾರೆ. ಮಾತ್ರವಲ್ಲ ಬದುಕಿನಲ್ಲಿ ಅಂಥಹ ಜನರರಿಂದ ದೂರ ಇರುವಂತೆ ಸಲಹೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಈ ಜನರು ಭೂಮಿಯ ಮೇಲೆ ಹೊರೆಯಿದ್ದಂತೆ :  
ಆಚಾರ್ಯ ಚಾಣಕ್ಯರ ಪ್ರಕಾರ, ಯಾರು ವಿದ್ಯೆ ಅಥವಾ ಜ್ಞಾನವನ್ನು ಪಡೆಯುವುದಿಲ್ಲವೋ, ಧರ್ಮವನ್ನಾಗಲೀ, ದಾನವನ್ನಾಗಲೀ, ಒಳ್ಳೆಯ ನಡತೆಯನ್ನಾಗಲೀ ಮಾಡದವರ ಜೀವನವು ನಿಷ್ಪ್ರಯೋಜಕವಾಗಿರುತ್ತದೆ (Chanakya niti for success) . ತಮ್ಮಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳದ, ಯಾವುದೇ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳದ ಇಂತಹವರ ಜೀವನವೂ ಅರ್ಥಹೀನವಾಗಿರುತ್ತದೆ. ಅಂತಹ ಜನರು ಸತ್ತ ನಂತರವೂ ಮೋಕ್ಷ ಪಡೆಯುವುದಿಲ್ಲ. ತಮ್ಮ ಜೀವಿತಾವಧಿಯಲ್ಲಿಯೂ ಸಹ, ಈ ಜನರು ಭೂಮಿಯ ಮೇಲಿನ ಹೊರೆಯಂಟೆ ಇರುತ್ತಾರೆ. ಏಕೆಂದರೆ ಅವರು ಯಾವುದೇ ರೀತಿಯ ಪುಣ್ಯವನ್ನು ಗಳಿಸಿರುವುದಿಲ್ಲ. ಉತ್ತಮ ಜೀವನವನ್ನು ನಡೆಸುವುದಿಲ್ಲ ಮತ್ತು ಅವರು ಯಾರಿಗೂ ಉಪಯುಕ್ತವಾಗುವಂತೆ ಬದುಕುವುದದೂ ಇಲ್ಲ( Chanakya niti for life). ಇಂಥಹ ಜನರಿಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ. 


ಇದನ್ನೂ ಓದಿ :  Mahashivaratri: ಮಹಾಶಿವರಾತ್ರಿಯಂದು 'ಮಹಾಸಂಯೋಗ'! ಈ 5 ರಾಶಿಯವರ ಮೇಲೆ ಶಿವನ ಕೃಪೆ!


ಇವರಿಂದ ದೂರವಿದ್ದರೆ ಮಾತ್ರ ಪ್ರಯೋಜನ :
ಇಂಥಹ ಜನರಿಂದ ಸದಾ ದೂರ ಉಳಿಯುವುದೇ ಒಳಿತು ಎನುತ್ತಾರೆ ಆಚಾರ್ಯ ಚಾಣಾಕ್ಯ (Chanakya Niti). ಇಲ್ಲದಿದ್ದರೆ, ಅವರೊಂದಿಗೆ ಬೆರೆಯುವ ಮೂಲಕ, ನಮ್ಮ ಜೀವನದ ಪ್ರಗತಿಯನ್ನು ಕೂಡಾ ಕುಂಟಿತಗೊಳಿಸಬೇಕಾಗುತ್ತದೆ. ನಮ್ಮಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಲು ಕೂಡಾ ಸಾಧ್ಯವಾಗುವುದಿಲ್ಲ. ನಮ್ಮ ಜೀನವ ಕೂಡಾ ವ್ಯರ್ಥವಾಗಿ ಬಿಡುತ್ತದೆ. 


ಇದನ್ನೂ ಓದಿ :  Venus Transit 2022: ಮಾರ್ಚ್ 31ರವರೆಗೆ ಈ ರಾಶಿಗಳ ಜನರ ಮೇಲಿರಲಿದೆ ದೇವಿ ಲಕುಮಿಯ ಕೃಪೆ, ನೋವು-ದುಃಖಗಳು ದೂರಾಗಲಿವೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ