Lucky woman: ಈ ವಿಶೇಷತೆ ಹೊಂದಿರುವ ಮಹಿಳೆಯರು ಅತ್ಯಂತ ಅದೃಷ್ಟಶಾಲಿಗಳು..!
ಸಾಮುದ್ರಿಕ ಶಾಸ್ತ್ರದಲ್ಲಿ ಅಂಗಗಳ ರಚನೆ ಮತ್ತು ದೇಹದ ಕೆಲವು ಚಿಹ್ನೆಗಳು ವ್ಯಕ್ತಿಯ ವ್ಯಕ್ತಿತ್ವ ಮತ್ತು ಅದೃಷ್ಟದ ಬಗ್ಗೆ ಹೇಳುತ್ತವೆ. ಸಾಮುದ್ರಿಕ ಶಾಸ್ತ್ರದಲ್ಲಿ ಮಹಿಳೆಯರ ಇಂತಹ ಕೆಲವು ಗುಣಗಳ ಬಗ್ಗೆ ಹೇಳಲಾಗಿದೆ. ಈ ವಿಷೇತೆಗಳು ಅವರು ಅದೃಷ್ಟವಂತರು ಎಂಬುದನ್ನು ತಿಳಿಸುತ್ತವೆ.
ನವದೆಹಲಿ: ಸಾಮುದ್ರಿಕ ಶಾಸ್ತ್ರ(Samudrik Shastra)ದಲ್ಲಿ ಅಂಗಗಳ ರಚನೆ ಮತ್ತು ದೇಹದ ಕೆಲವು ಚಿಹ್ನೆಗಳು ಮನುಷ್ಯನ ವ್ಯಕ್ತಿತ್ವ ಮತ್ತು ಅದೃಷ್ಟದ ಬಗ್ಗೆ ಹೇಳುತ್ತವೆ. ಸಾಮುದ್ರಿಕ ಶಾಸ್ತ್ರದಲ್ಲಿ ಮಹಿಳೆಯರ ಇಂತಹ ಕೆಲವು ಗುಣಗಳ ಬಗ್ಗೆ ಹೇಳಲಾಗಿದೆ. ಕೆಲವು ವಿಶೇಷತೆ ಹೊಂದಿರುವವರನ್ನು ಅದೃಷ್ಟವಂತರೆಂದು ಉಲ್ಲೇಖಿಸಲಾಗಿದೆ. ಯಾವ ರೀತಿಯ ಮಹಿಳೆಯರನ್ನು ಅದೃಷ್ಟವಂತರು ಅಂತಾ ಪರಿಗಣಿಸಲಾಗುತ್ತದೆ ಎಂಬುದರ ಬಗ್ಗೆ ತಿಳಿಯಿರಿ.
ವಿಶಾಲ ತಲೆ
ಸಾಮುದ್ರಿಕ ಶಾಸ್ತ್ರದ ಪ್ರಕಾರ ಯಾರ ತಲೆಯು 3 ಬೆರಳುಗಳಿಗಿಂತ ಹೆಚ್ಚು ಅಗಲವಾಗಿರುತ್ತದೆ, ಹಾಗೆಯೇ ಹಣೆಯ ಅರ್ಧ ಚಂದ್ರನಂತೆ ಕಾಣುತ್ತದೆಯೋ ಅಂತಹ ಮಹಿಳೆಯರು ಅದೃಷ್ಟವಂತರು(Lucky Women). ಇಂತಹ ಹುಡುಗಿಯರು ಅತ್ತೆಗೆ ಅದೃಷ್ಟವಂತರಾಗಿರುತ್ತಾರೆ ಅಂತಾ ನಂಬಲಾಗಿದೆ.
ಇದನ್ನೂ ಓದಿ: Magh Month 2022 : ಮಾಘ ಮಾಸದಲ್ಲಿ ಈ 4 ಕೆಲಸ ಮಾಡಿ : ಮನೆಯಲ್ಲಿ ಸುಖ ಶಾಂತಿ, ಅದೃಷ್ಟ ಒಲಿಯುತ್ತದೆ!
ಹಣೆಯ ಮೇಲೆ ತ್ರಿಶೂಲದ ಗುರುತು
ಹಣೆಯ ಮೇಲೆ ತ್ರಿಶೂಲದ ಗುರುತು ಹೊಂದಿರುವಂತಹ ಮಹಿಳೆಯರನ್ನು ತುಂಬಾ ಅದೃಷ್ಟವಂತರು(Lucky Women Sign) ಎಂದು ಪರಿಗಣಿಸಲಾಗುತ್ತದೆ. ವಧುಗಳಾಗುವ ಇಂತಹ ಹುಡುಗಿಯರ ಅದೃಷ್ಟವೂ ಹೆಚ್ಚಾಗುತ್ತದೆ. ಇದಲ್ಲದೆ ಕೆಂಪಾಗಿರುವ ಕಣ್ಣು ಮತ್ತು ಕಡು ಕಪ್ಪಾಗಿರುವ ರೆಪ್ಪೆಗಳನ್ನು ಹೊಂದಿರುವ ಮಹಿಳೆಯರನ್ನು ಅದೃಷ್ಟವಂತರು ಎಂದು ಹೇಳಲಾಗಿದೆ.
ಮೂಗಿನ ಮೇಲೆ ಮಚ್ಚೆ
ಸಾಮುದ್ರಿಕ ಶಾಸ್ತ್ರ(Samudrik Shastra)ದ ಪ್ರಕಾರ ಯಾರ ನಡಿಗೆ ರಾಜಹಂಸದಂತೆ ಇರುತ್ತದೆಯೋ ಅಂತಹ ಮಹಿಳೆಯರು ಎಲ್ಲಾ ರೀತಿಯ ಸಂತೋಷಗಳನ್ನು ಪಡೆಯುತ್ತಾರೆ. ಮತ್ತೊಂದೆಡೆ ಮೂಗಿನ ಮೇಲೆ ಮಚ್ಚೆ ಇರುವ ಮಹಿಳೆಯರು ತುಂಬಾ ಅದೃಷ್ಟವಂತರು. ಇವರ ಜೀವನದಲ್ಲಿ ಸುಖ-ಸಂಪತ್ತಿಗೆ ಯಾವುದೇ ರೀತಿ ಕೊರತೆಯಿರುವುದಿಲ್ಲ.
ಇದನ್ನೂ ಓದಿ: ಕೇತುವಿನ ಚಲನೆಯಲ್ಲಿ ಬದಲಾವಣೆ , ಬಹಳ ಎಚ್ಚರದಿಂದ ಇರಬೇಕು ಈ ರಾಶಿಯವರು
ದೇಹದ ಎಡಭಾಗದಲ್ಲಿ ಮೆಚ್ಚೆ
ಕಾಲ್ಬೆರಳು ದುಂಡಗಿನ ಮತ್ತು ಕೆಂಪು ಬಣ್ಣದಲ್ಲಿರುವ ಮಹಿಳೆಯರು ತುಂಬಾ ಅದೃಷ್ಟವಂತರು(Lucky Moles). ಅಂತಹ ಮಹಿಳೆಯರನ್ನು ಗಂಡನಿಗೆ ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ ದೇಹದ ಎಡಭಾಗದಲ್ಲಿ ಮಚ್ಚೆ ಇರುವ ಮಹಿಳೆಯರನ್ನು ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ.
(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS Kannada ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.