ಷಟ್ಟಿಲ ಏಕಾದಶಿಯಂದು 6 ರೀತಿಯಲ್ಲಿ ಎಳ್ಳನ್ನು ಬಳಸಿ: ಅದೃಷ್ಟ ನಿಮ್ಮದಾಗುತ್ತದೆ

ಷಟ್ಟಿಲ ಏಕಾದಶಿಯ ದಿನದಂದು ಎಳ್ಳನ್ನು 6 ರೀತಿಯಲ್ಲಿ ಬಳಸುತ್ತಾರೆ. ಹೀಗೆ ಮಾಡುವುದರಿಂದ ಜೀವನದಲ್ಲಿ ದುರಾದೃಷ್ಟ ದೂರವಾಗುತ್ತದೆ ಮತ್ತು ಅದೃಷ್ಟ ಸುಧಾರಿಸುತ್ತದೆ ಎಂಬ ನಂಬಿಕೆ ಇದೆ.

Written by - Puttaraj K Alur | Last Updated : Jan 25, 2022, 10:17 PM IST
  • ಮಾಘ ಕೃಷ್ಣಪಕ್ಷದ 11ನೇ ದಿನಾಂಕವನ್ನು ಷಟ್ಟಿಲ ಏಕಾದಶಿ ಎಂದು ಕರೆಯಲಾಗುತ್ತದೆ
  • ಈ ದಿನ ಸ್ನಾನ, ದಾನ, ನೈವೇದ್ಯ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆಂಬ ನಂಬಿಕೆ ಇದೆ
  • ಷಟ್ಟಿಲ ಏಕಾದಶಿಯಂದು ಎಳ್ಳಿನಿಂದ ಹವನ ಮಾಡುವುದು ತುಂಬಾ ಪ್ರಯೋಜನಕಾರಿ
ಷಟ್ಟಿಲ ಏಕಾದಶಿಯಂದು 6 ರೀತಿಯಲ್ಲಿ ಎಳ್ಳನ್ನು ಬಳಸಿ: ಅದೃಷ್ಟ ನಿಮ್ಮದಾಗುತ್ತದೆ title=
ಜ.28ರ ಶುಕ್ರವಾರ ಷಟ್ಟಿಲ ಏಕಾದಶಿ ನಡೆಯಲಿದೆ

ನವದೆಹಲಿ: ಮಾಘ ಕೃಷ್ಣ ಪಕ್ಷದ 11ನೇ ದಿನಾಂಕವನ್ನು ಷಟ್ಟಿಲ ಏಕಾದಶಿ ಎಂದು ಕರೆಯಲಾಗುತ್ತದೆ. ಈ ಬಾರಿ ಜನವರಿ 28ರ ಶುಭ ಶುಕ್ರವಾರದಂದು ಷಟ್ಟಿಲ ಏಕಾದಶಿ ನಡೆಯಲಿದೆ. ಈ ಏಕಾದಶಿ(Shattila Ekadashi 2022)ಯ ವಿಶೇಷ ಮಹತ್ವವನ್ನು ಪುರಾಣಗಳಲ್ಲಿ ಹೇಳಲಾಗಿದೆ. ಈ ದಿನ ಸ್ನಾನ, ದಾನ, ನೈವೇದ್ಯ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಇದಲ್ಲದೇ ಈ ದಿನ ಎಳ್ಳನ್ನು 6 ರೀತಿಯಲ್ಲಿ ಉಪಯೋಗಿಸುತ್ತಾರೆ. ಹೀಗಿರುವಾಗ ಷಟ್ಟಿಲ ಏಕಾದಶಿಯಂದು 6 ರೀತಿಯಲ್ಲಿ ಎಳ್ಳನ್ನು ಹೇಗೆ ಬಳಸಬೇಕು ಅನ್ನೋದರ ಬಗ್ಗೆ ತಿಳಿದುಕೊಳ್ಳಿರಿ.

1) ಮೊದಲನೆಯದಾಗಿ ಎಳ್ಳ(Sesame)ನ್ನು ನೀರಿನಲ್ಲಿ ಮಿಶ್ರಣ ಮಾಡಿ. ನಂತರ ಈ ನೀರಿನಿಂದ ಸ್ನಾನ ಮಾಡಿ. ಸ್ನಾನ ಮಾಡುವಾಗ ‘ಓಂ ನಮೋ ಭಗವತೇ ವಾಸುದೇವಾಯ ನಮಃ’ ಎಂಬ ಮಂತ್ರವನ್ನು ಪಠಿಸಿ. ಇದರ ನಂತರ ಹಳದಿ ಬಟ್ಟೆಗಳನ್ನು ಧರಿಸಿ ಮತ್ತು ಸೂರ್ಯನಿಗೆ ನೀರನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಜೀವನದಲ್ಲಿ ದುರದೃಷ್ಟ ದೂರವಾಗುತ್ತದೆ. ಇದರೊಂದಿಗೆ ಅದೃಷ್ಟವೂ ಬರುತ್ತದೆ.

2) ಷಟ್ಟಿಲ ಏಕಾದಶಿಯ ದಿನದಂದು ಉಪವಾಸ ಮಾಡುವುದು ಒಳ್ಳೆಯದು. ಆದರೆ ಉಪವಾಸ ಇರಲು ಸಾಧ್ಯವಾಗದವರು ಎಳ್ಳಿನ ಎಣ್ಣೆಯಿಂದ ಮಸಾಜ್ ಮಾಡಬೇಕು. ಇದರಿಂದ ರೋಗಗಳು ಗುಣವಾಗುತ್ತವೆ. ಇದರೊಂದಿಗೆ ಚರ್ಮ ರೋಗಗಳು ಮತ್ತು ನಿಶ್ಯಕ್ತಿ ಇತ್ಯಾದಿ ಸಮಸ್ಯೆ ದೂರವಾಗುತ್ತದೆ.

ಇದನ್ನೂ ಓದಿ: Shani Rashi Parivartan 2022: ಶನಿ ರಾಶಿ ಬದಲಾವಣೆ, ಈ 3 ರಾಶಿಯವರಿಗೆ ಕೆಟ್ಟ ದಿನಗಳು ಆರಂಭ

3) ಷಟ್ಟಿಲ ಏಕಾದಶಿಯಂದು ಎಳ್ಳಿನಿಂದ ಹವನ ಮಾಡುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದಕ್ಕಾಗಿ ಹಸುವಿನ ತುಪ್ಪದಲ್ಲಿ ಎಳ್ಳನ್ನು ಬೆರೆಸಿ. ಇದರ ನಂತರ ‘ಓಂ ನಮೋ ಭಗವತೇ ವಾಸುದೇವಾಯ ನಮಃ’ ಈ ಮಂತ್ರವನ್ನು ಪಠಿಸುತ್ತಾ ಹವನ ಮಾಡಿ. ಇದಲ್ಲದೆ ಕನಕಧಾರಾ ಸ್ತೋತ್ರ ಅಥವಾ ಶ್ರೀಸೂಕ್ತವನ್ನು ಪಠಿಸುವಾಗ ಹವನವನ್ನು ಮಾಡುವುದರಿಂದ ತಾಯಿ ಲಕ್ಷ್ಮಿದೇವಿ(LaxmiDevi) ವಿಶೇಷ ಆಶೀರ್ವಾದ ನೀಡುತ್ತಾಳೆ. ಇದರೊಂದಿಗೆ ನಿಮ್ಮ ಜೀವನದ ಬಡತನವು ನಾಶವಾಗುತ್ತದೆ.

4) ಏಕಾದಶಿಯ ದಿನ ಎಳ್ಳು ಬೆರೆಸಿದ ನೀರನ್ನು ಸೇವಿಸುವುದು ಒಳ್ಳೆಯದು. ಇದಕ್ಕಾಗಿ ಎಳ್ಳನ್ನು ಕುಡಿಯುವ ನೀರಿನಲ್ಲಿ ಬೆರೆಸಿ ಮತ್ತು ದಿನವಿಡೀ ಕುಡಿಯಿರಿ. ಇದು ಅನೇಕ ರೋಗಗಳನ್ನು ಗುಣಪಡಿಸುತ್ತದೆ. ಇದಲ್ಲದೇ ದಕ್ಷಿಣಾಭಿಮುಖವಾಗಿ ಪೂರ್ವಜರಿಗೆ ತರ್ಪಣವನ್ನೂ ಮಾಡಬಹುದು. ಹೀಗೆ ಮಾಡುವುದರಿಂದ ಪೂರ್ವಜರ ಆಶೀರ್ವಾದ ಸಿಗುತ್ತದೆ. ಇದು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.

5) ಏಕಾದಶಿಯಂದು ಎಳ್ಳನ್ನು(Sesame) ದಾನ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ. ಮಹಾಭಾರತದ ಪ್ರಕಾರ ಷಟ್ಟಿಲ ಏಕಾದಶಿಯಂದು ಎಳ್ಳನ್ನು ದಾನ ಮಾಡುವ ವ್ಯಕ್ತಿಯು ನರಕಯಾತನೆಯಿಂದ ಪಾರಾಗುತ್ತಾನೆ. ಇದಲ್ಲದೇ ಈ ದಿನ ಎಳ್ಳಿನ ಖಾದ್ಯಗಳನ್ನು ದಾನ ಮಾಡುವುದು ಕೂಡ ಶ್ರೇಯಸ್ಕರವೆಂದು ನಂಬಲಾಗಿದೆ.

ಇದನ್ನೂ ಓದಿ: ಮುಂದಿನ 10 ದಿನಗಳವರೆಗೆ ಈ 3 ರಾಶಿಗಳಿಗೆ ತ್ರಿಗ್ರಹ ಯೋಗ: ಉದ್ಯೋಗ-ವ್ಯವಹಾರದಲ್ಲಿ ಅದ್ಭುತ ಪ್ರಗತಿ

6) ಷಟ್ಟಿಲ ಏಕಾದಶಿಯ ದಿನದಂದು ಉಪವಾಸ ಮಾಡುವವರು ಅಥವಾ ಉಪವಾಸ ಮಾಡದವರು ಎಳ್ಳಿನಿಂದ ಮಾಡಿದ ಭಕ್ಷ್ಯಗಳನ್ನು ತಿನ್ನಬೇಕು. ಇದಲ್ಲದೆ ಸಂಜೆ ಎಳ್ಳಿನ ಭಕ್ಷ್ಯಗಳನ್ನು ತಯಾರಿಸಿ ಮತ್ತು ಅದನ್ನು ಲಕ್ಷ್ಮಿದೇವಿಗೆ ಮತ್ತು ವಿಷ್ಣುವಿಗೆ ಅರ್ಪಿಸಬೇಕು.

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News