ಭಾರತದ ಅನೇಕ ಭಾಗಗಳಲ್ಲಿ, ತಾಪಮಾನ ಏರಿಕೆಯಿಂದಾಗಿ ಜನರು ಬಳಲುತ್ತಿದ್ದಾರೆ. ಬಿಸಿಲಿನ ಶಾಖವನ್ನು ತಪ್ಪಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇನ್ನು ದೇಹವು ಅಗತ್ಯಕ್ಕಿಂತ ಹೆಚ್ಚು ಶಾಖವನ್ನು ಪಡೆದರೆ, ನಂತರ ಅನೇಕ ರೋಗಗಳ ಅಪಾಯವನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ದೇಹವು ತಂಪಾಗಿರುವಂತೆ ಮಾಡುವುದು ಉತ್ತಮ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ಎಲೆಯನ್ನು ಸೇವಿಸಿದರೆ ಸಾಕು ರಕ್ತದಲ್ಲಿನ ಸಕ್ಕರೆ ಪ್ರಮಾಣ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆ


ಬೇಸಿಗೆಯಲ್ಲಿ ಆಹಾರದ ಬಗ್ಗೆ ಕಾಳಜಿ ವಹಿಸಿ
ಬೇಸಿಗೆಯಲ್ಲಿ, ನಿಮ್ಮ ಆಹಾರದ ಬಗ್ಗೆ ನೀವು ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಅದರ ಕೆಟ್ಟ ಪರಿಣಾಮವು ಹೊಟ್ಟೆಯ ಮೇಲೆ ಕಂಡುಬರಬಹುದು. ದೇಹದ ಉಷ್ಣತೆ ಕಾಪಾಡಲು ಉಪಯುಕ್ತವಾಗುವಂತಹ ಆಹಾರಗಳ ಬಗ್ಗೆ ನಾವು ಇಂದು ನಿಮಗೆ ತಿಳಿಸುತ್ತೇವೆ. 


1. ಮೊಸರು
ಮೊಸರನ್ನು ಆರೋಗ್ಯದ ನಿಧಿ ಎಂದು ಪರಿಗಣಿಸಲಾಗುತ್ತದೆ. ಇದನ್ನು ಹಲವು ವಿಧಗಳಲ್ಲಿ ತಿನ್ನಬಹುದು. ಇದು ಬೇಸಿಗೆಯಲ್ಲಿ ಹೊಟ್ಟೆಯನ್ನು ತಂಪಾಗಿಸುತ್ತದೆ, ಇದರಿಂದಾಗಿ ಹೊಟ್ಟೆಯ ಸಮಸ್ಯೆಗಳನ್ನು ತಪ್ಪಿಸಬಹುದು. ನೀವು ಮೊಸರನ್ನು ನೇರವಾಗಿ ತಿನ್ನಬಹುದು ಇಲ್ಲವೇ ಮಜ್ಜಿಗೆ ಅಥವಾ ಲಸ್ಸಿ ಮಾಡಿಯೂ ಸೇವಿಸಬಹುದು.


2. ಸೌತೆಕಾಯಿ
ಸೌತೆಕಾಯಿಯು ಫೈಬರ್‌ನ ಸಮೃದ್ಧ ಮೂಲವಾಗಿದೆ. ಜೊತೆಗೆ ಅದರಲ್ಲಿ ಹೆಚ್ಚಾಗಿ ನೀರಿನ ಅಂಶವಿದೆ. ಇದನ್ನು ತಿನ್ನುವುದರಿಂದ  ದೇಹದಲ್ಲಿ ನೀರಿನ ಕೊರತೆ ಉಂಟಾಗುವುದಿಲ್ಲ. ಸೌತೆಕಾಯಿ ದೇಹವನ್ನು ತಂಪಾಗಿಸುತ್ತದೆ. ನೀವು ನೇರವಾಗಿ ಅಥವಾ ಸಲಾಡ್ ರೂಪದಲ್ಲಿ ತಿನ್ನಬಹುದು.


3. ಸೋರೆಕಾಯಿ
ಸೋರೆಕಾಯಿಯು ಸಾಕಷ್ಟು ನೀರಿನ ಅಂಶವನ್ನು ಹೊಂದಿರುವುದರಿಂದ ದೇಹವನ್ನು ತಂಪಾಗಿಸುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ಹೊಟ್ಟೆಯ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ಅಡುಗೆ ಮಾಡುವಾಗ, ಹೆಚ್ಚು ಎಣ್ಣೆ ಬಳಸದಂತೆ ನೋಡಿಕೊಳ್ಳಿ. ಉತ್ತಮ ಫಲಿತಾಂಶಕ್ಕಾಗಿ ಸೋರೆಕಾಯಿ ರಸವನ್ನು ಕುಡಿಯಬಹುದು.


4. ಪುದೀನಾ
ಪುದೀನವನ್ನು ಬೇಸಿಗೆಯ ಆಹಾರವೆಂದು ಪರಿಗಣಿಸಲಾಗುತ್ತದೆ. ಪುದೀನಾವು ತಂಪಾಗಿರುತ್ತದೆ. ನಿಂಬೆ ನೀರಿನೊಂದಿಗೆ ಬೆರೆಸಿ ಕುಡಿಯುವುದರಿಂದ ತಾಜಾತನವನ್ನು ನೀಡುತ್ತದೆ. ಜೊತೆಗೆ ಇದರ ಚಟ್ನಿಯನ್ನು ತಿನ್ನುವುದು ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನವನ್ನು ನೀಡುತ್ತದೆ.


5. ಈರುಳ್ಳಿ
ಈರುಳ್ಳಿ ಅನೇಕ ರೋಗಗಳಿಗೆ ರಾಮಬಾಣ ಎಂದು ಹೇಳಲಾಗುತ್ತದೆ. ಹಸಿ ಈರುಳ್ಳಿಯನ್ನು ತಿನ್ನುವುದರಿಂದ ಹೀಟ್ ಸ್ಟ್ರೋಕ್ ಅನ್ನು ತಪ್ಪಿಸಬಹುದು. ಇದರ ತಂಪಾದ ಪರಿಣಾಮದಿಂದಾಗಿ, ಇದು ಬೇಸಿಗೆಯಲ್ಲಿ ದೇಹಕ್ಕೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ. ಇದನ್ನು ಸಲಾಡ್ ರೂಪದಲ್ಲಿ ತಿನ್ನುವುದು ಉತ್ತಮ.


ಇದನ್ನೂ ಓದಿ: Name Astrology: ಪ್ರೀತಿಗಾಗಿ ಪ್ರಾಣವನ್ನೇ ಕೊಡ್ತಾರೆ ಈ ಹೆಸರಿನ ಹುಡುಗಿಯರು..!


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.