ನವದೆಹಲಿ: ಜ್ಯೋತಿಷ್ಯದಲ್ಲಿ ಭಗವಾನ್ ಸೂರ್ಯನಿಗೆ ಗ್ರಹಗಳ ರಾಜನೆಂದು ಹೇಳಲಾಗಿದೆ. ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. 2023ರ ಹೊಸ ವರ್ಷದ ಜನವರಿ 14ರಂದು ಸೂರ್ಯನ ಪುತ್ರ ಶನಿ ಮಕರ ರಾಶಿಯಲ್ಲಿ ಸಾಗಲಿದೆ. ಪ್ರತಿ ವರ್ಷ ಸಂಭವಿಸುವ ಸೂರ್ಯನ ಈ ರಾಶಿ ಬದಲಾವಣೆಯನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ.


COMMERCIAL BREAK
SCROLL TO CONTINUE READING

ಸಂಕ್ರಮಣವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವು ರಾಶಿಗಳಿಗೆ ಇದು ಮಂಗಳಕರವೆಂದು ಸಾಬೀತುಪಡಿಸುತ್ತದೆ ಮತ್ತು ಕೆಲವರಿಗೆ ಇದು ಅಶುಭವೂ ಆಗಿರಬಹುದು. ಇಂದು ನಾವು ಅಂತಹ ರಾಶಿಯ ಜನರ ಬಗ್ಗೆ ತಿಳಿಸಿಕೊಡಲಿದ್ದೇವೆ. ಯಾರಿಗೆ ಸೂರ್ಯನ ಈ ಸಂಕ್ರಾಂತಿಯು ತುಂಬಾ ಪ್ರಯೋಜನಕಾರಿ ಎಂಬುದನ್ನು ತಿಳಿಯಿರಿ.


ಮಕರ ರಾಶಿ: ಜನವರಿ 14ರಂದು ಸೂರ್ಯ ಮಕರ ರಾಶಿಯಲ್ಲಿ ಸಾಗುತ್ತಾನೆ. ಈ ಕಾರಣದಿಂದ ಶನಿ ಮತ್ತು ಸೂರ್ಯನ ಸಂಯೋಗವಿರುತ್ತದೆ, ಇದರಿಂದಾಗಿ ಈ ರಾಶಿಯ ಜನರು ಅನಿರೀಕ್ಷಿತ ಲಾಭಗಳನ್ನು ಪಡೆಯುತ್ತಾರೆ. ನೀವು ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ, ಯಶಸ್ಸಿಯಾಗುತ್ತೀರಿ. ಧನಲಾಭದಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ.


ಇದನ್ನೂ ಓದಿ: Vastu Tips : ಮನೆಯ ಈ ದಿಕ್ಕಿಗೆ ಕಾಲು ಮಾಡಿ ತಪ್ಪಿಯೂ ಮಲಗಬೇಡಿ, ಭಾರೀ ಅಪಾಯ ತಪ್ಪಿದ್ದಲ್ಲ!


ಧನು ರಾಶಿ: ಸೂರ್ಯನು ಧನು ರಾಶಿಯ 2ನೇ ಮನೆಯಲ್ಲಿ ಸಾಗುತ್ತಾನೆ. ಹೀಗಾಗಿ ವ್ಯಾಪಾರ ಮಾಡುವವರು ವಿತ್ತೀಯ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಈ ಅವಧಿಯಲ್ಲಿ ಯಶಸ್ಸನ್ನು ಪಡೆಯಬಹುದು. ನಿಮ್ಮ ಹಣ ಬೇರಡೆ ಎಲ್ಲಾದರೂ ಸಿಲುಕಿದ್ದರೆ ಅದನ್ನು ಮರಳಿ ಪಡೆಯುವ ಸಾಧ್ಯತೆ ಇದೆ.


ಕನ್ಯಾ ರಾಶಿ: ಮಕರ ರಾಶಿಯಲ್ಲಿ ಸೂರ್ಯನ ಸಂಚಾರದಿಂದ ಕನ್ಯಾ ರಾಶಿಯವರಿಗೆ ವಿಶೇಷ ಲಾಭ ದೊರೆಯಲಿದೆ. ಸೂರ್ಯನು ಈ ರಾಶಿಯಿಂದ 5ನೇ ಮನೆಯಲ್ಲಿ ಪ್ರಯಾಣಿಸಲಿದ್ದಾನೆ. ಇದರೊಂದಿಗೆ ಕನ್ಯಾ ರಾಶಿಯವರಿಗೆ ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆಯುತ್ತಾರೆ.


ತುಲಾ ರಾಶಿ: ಸೂರ್ಯನ ಈ ಸಂಕ್ರಮಣವು ಈ ರಾಶಿಯ ಸ್ಥಳೀಯರಿಗೆ ಒಳ್ಳೆಯ ಸುದ್ದಿಯನ್ನು ತರುತ್ತಿದೆ. ಸೂರ್ಯನು ತುಲಾ ರಾಶಿಯ 4ನೇ ಮನೆಯಲ್ಲಿ ಸಾಗುತ್ತಾನೆ, ಈ ಕಾರಣದಿಂದ ಉದ್ಯಮಿಗಳು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಇವರು ದೊಡ್ಡ ವ್ಯವಹಾರದಿಂದ ದೊಟ್ಟಮಟ್ಟದ ಲಾಭ ಪಡೆಯುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಯಾವುದೇ ರೀತಿಯ ವ್ಯವಹಾರದಲ್ಲಿ ಹೂಡಿಕೆಯು ಅತ್ಯಂತ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ಈ ಸಮಯದಲ್ಲಿ ಸಂತೋಷ ಮತ್ತು ಸಮೃದ್ಧಿಯ ಸಾಧನಗಳು ಸಹ ಹೆಚ್ಚಾಗುತ್ತದೆ.


ಇದನ್ನೂ ಓದಿVastu Tips: ಸೂರ್ಯಾಸ್ತದ ಬಳಿಕ ಮರೆತೂ ಕೂಡ ಈ ಕೆಲಸಗಳನು ಮಾಡಬೇಡಿ, ಕಾರಣ ಇಲ್ಲಿದೆ


(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)


https://bit.ly/3hDyh4G


Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.