Vastu Tips: ಸೂರ್ಯಾಸ್ತದ ಬಳಿಕ ಮರೆತೂ ಕೂಡ ಈ ಕೆಲಸಗಳನು ಮಾಡಬೇಡಿ, ಕಾರಣ ಇಲ್ಲಿದೆ

Vastu Tips For Money: ವಾಸ್ತು ಶಾಸ್ತ್ರದ ಪ್ರಕಾರ ಸೂರ್ಯಾಸ್ತದ ಬಳಿಕ ಕೆಲ ಕೆಲಸಗಳಮಾಡಬಾರದು ಎನ್ನಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಈ ಕೆಲಸಗಳನ್ನು ಮಾಡಿದರೆ, ನಿಮಗೆ ಬರಬೇಕಾದ ಹಣ ನಿಮ್ಮ ಕೈಸೇರುವುದಿಲ್ಲ ಮತ್ತು ಹಿಂದಿರುಗಿ ಹೋಗುತ್ತದೆ ಎನ್ನಲಾಗಿದೆ.  

Written by - Nitin Tabib | Last Updated : Jan 3, 2023, 03:32 PM IST
  • ವಾಸ್ತು ಶಾಸ್ತ್ರದಲ್ಲಿ ಕೆಲ ಕೆಲಸಗಳನ್ನು ಉಲ್ಲೇಖಿಸಲಾಗಿದ್ದು,
  • ಅವುಗಳನ್ನು ಸೂರ್ಯಾಸ್ತದ ಬಳಿಕ ಮಾಡುವುದರಿಂದ ತಾಯಿ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ
  • ಮತ್ತು ಭಾಗ್ಯದ ಬೆಂಬಲ ಸಿಗುವುದಿಲ್ಲ ಎನ್ನಲಾಗಿದೆ.
Vastu Tips: ಸೂರ್ಯಾಸ್ತದ ಬಳಿಕ ಮರೆತೂ ಕೂಡ ಈ ಕೆಲಸಗಳನು ಮಾಡಬೇಡಿ, ಕಾರಣ ಇಲ್ಲಿದೆ title=
Vastu Tips

Vastu Tips For Money: ಹಿಂದೂ ಧರ್ಮಶಾಸ್ತ್ರಗಳ ಪ್ರಕಾರ, ಸೂರ್ಯಾಸ್ತದ ಬಳಿಕ ಕೆಲ ಕೆಲಸಗಳನ್ನು ಮಾಡಬಾರದು ಎನ್ನಲಾಗಿದೆ. ಈ ಕೆಲಸಗಳನ್ನು ಸೂರ್ಯಾಸ್ತದ ಬಳಿಕ ಮಾಡುವುದರಿಂದ ವ್ಯಕ್ತಿಗೆ ದುರಾದೃಷ್ಟ ಬರುತ್ತದೆ ಎನ್ನಲಾಗಿದೆ. ಇದರ ಜೊತೆಗೆ ವ್ಯಕ್ತಿ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ ಎನ್ನಲಾಗಿದೆ. ವಾಸ್ತು ಶಾಸ್ತ್ರದಲ್ಲಿ ಕೆಲ ಕೆಲಸಗಳನ್ನು ಉಲ್ಲೇಖಿಸಲಾಗಿದ್ದು, ಅವುಗಳನ್ನು ಸೂರ್ಯಾಸ್ತದ ಬಳಿಕ ಮಾಡುವುದರಿಂದ ತಾಯಿ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ ಮತ್ತು ಭಾಗ್ಯದ ಬೆಂಬಲ ಸಿಗುವುದಿಲ್ಲ ಎನ್ನಲಾಗಿದೆ. ಸೂರ್ಯಾಸ್ತದ ಬಳಿಕ ಯಾವ ಕೆಲಸಗಳನ್ನು ಮಾಡಬಾರದು ತಿಳಿದುಕೊಳ್ಳೋಣ ಬನ್ನಿ,

1.ಅರಿಶಿಣ ದಾನ- ವಾಸ್ತು ಶಾಸ್ತ್ರದ ಪ್ರಕಾರ ಸೂರ್ಯಾಸ್ತದ ಬಳಿಕ ಅರಿಶಿಣವನ್ನು ಎಂದಿಗೂ ಕೂಡ ದಾನ ಮಾಡಬಾರದು ಎನ್ನಲಾಗಿದೆ. ಏಕೆಂದರೆ ಸಾಮಾನ್ಯವಾಗಿ ಅರಿಶಿನವನ್ನು ಶುಭ ಅಥವಾ ಮಂಗಳ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಇನ್ನೊಂದೆಡೆ ದೇವಗುರು ಬೃಹಸ್ಪತಿಯೊಂದಿಗೆ ಅರಿಶಿಣ ನೇರ ಸಂಬಂಧ ಹೊಂದಿದೆ. ಹೀಗಾಗಿ ಸಂಜೆ ಹೊತ್ತು ಅರಿಶಿಣ ದಾನ ಮಾಡಿದರೆ, ದೇವಗುರು ಬೃಹಸ್ಪತಿ ಮುನಿಸಿಕೊಳ್ಳುತ್ತಾರೆ ಮತ್ತು ಮನೆಯಲ್ಲಿ ಆರ್ಥಿಕ ಪ್ರಗತಿ ನಿಂತುಹೋಗುತ್ತದೆ ಎನ್ನಲಾಗಿದೆ. 

2. ಪೊರಕೆಯಿಂದ ಕಸಗೂಡಿಸಬೇಡಿ- ಹಿಂದೂ ಧರ್ಮದಲ್ಲಿ ಪೊರಕೆಗೆ ತಾಯಿ ಲಕ್ಷ್ಮಿಯ ಸ್ವರೂಪ ಎನ್ನಲಾಗಿದೆ. ನಂಬಿಕೆಗಳ ಪ್ರಕಾರ ಸಂಜೆಯ ಹೊತ್ತು ಮನೆಯಲ್ಲಿ ಪೋರಕೆಯಿಂದ ಕಸಗೂಡಿಸಬಾರದು ಎನ್ನಲಾಗಿದೆ. ಈ ರೀತಿ ಮಾಡುವುದರಿಂದ ತಾಯಿ ಲಕುಮಿ ಮುನಿಸಿಕೊಳ್ಳುತ್ತಾಳೆ ಎನ್ನಲಾಗಿದೆ. ಸೂರ್ಯಾಸ್ತದ ಬಳಿಕ ಮನೆಯಲ್ಲಿ ಕಸಗೂದಿಸುವುದರಿಂದ ತಾಯಿ ಲಕ್ಷ್ಮಿ ಮನೆಗೆ ಆಗಮಿಸುವುದಿಲ್ಲ ಎನ್ನಲಾಗುತ್ತದೆ.

3. ಸೂರ್ಯಾಸ್ತದ ಬಳಿಕ ದಾನ ಮಾಡಬೇಡಿ- ವಿಷಯ ತಜ್ಞರ ಪ್ರಕಾರ ಸಂಜೆ ಹೊತ್ತು ದಾನ ಮಾಡುವುದರಿಂದ ದೂರ ಉಳಿಯಬೇಕು ಎನ್ನಲಾಗಿದೆ. ಅದರಲ್ಲಿಯೂ ವಿಶೇಷವಾಗಿ ಹಾಲು, ಮೊಸರು, ಅರಿಶಿಣ ಹಾಗೂ ಸಕ್ಕರೆಯನ್ನು ದಾನವಾಗಿ ಅಥವಾ ಇತರರಿಗೆ ಕೊಡಬಾರದು ಎನ್ನಲಾಗಿದೆ. ಇದೂ ಕೂಡ ತಾಯಿ ಲಕ್ಷ್ಮಿಯ ಮುನಿಸಿಗೆ ಕಾರಣವಾಗುತ್ತದೆ. 

ಇದನ್ನೂ ಓದಿ-Dream Interpretation: ತಾಯಿ ಲಕ್ಷ್ಮಿ ನಿಮ್ಮ ಮನೆಗೆ ಆಗಮಿಸುವ ಸಂಕೇತ ಈ ಕನಸುಗಳು

4. ಸ್ನಾನ ಮಾಡಬೇಡಿ- ಜೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯಾಸ್ತದ ಬಳಿಕ ಸ್ನಾನ ಮಾಡಬಾರದು ಎನ್ನಲಾಗಿದೆ. ಇದೂ ಕೂಡ ತಾಯಿ ಲಕ್ಷ್ಮಿಯ ಮುನಿಸಿಗೆ ಕಾರಣವಾಗುತ್ತದೆ. ಇದಲ್ಲದೆ ಸಂಜೆಯ ಹೊತ್ತು ಸ್ನಾನ ಮಾಡಿ ಹಣೆಗೆ ತಿಲಕ ಇಟ್ಟುಕೊಳ್ಳುವುದು ಕೂಡ ವರ್ಜಿತ ಎನ್ನಲಾಗಿದೆ 

ಇದನ್ನೂ ಓದಿ-Taming Thyroid: ಕ್ಯಾಮೊಮೈಲ್ ಟೀ ಆರೋಗ್ಯ ಲಾಭಗಳ ಕುರಿತು ನಿಮಗೆಷ್ಟು ಗೊತ್ತು?

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News