Surya Gochar February 2023:  ಜ್ಯೋತಿಷ್ಯ ಶಾಸ್ತ್ರವು ನಮ್ಮ ಜೀವನದಲ್ಲಿ ಹಲವು ತೊಂದರೆಗಳು ಮತ್ತು ಸಮಸ್ಯೆಗಳನ್ನು ಪರಿಹರಿಸುತ್ತದೆ. ಹಲವಾರು ಗ್ರಂಥಗಳಲ್ಲಿ ಗ್ರಹಗಳ ರಾಶಿ ಪರಿವರ್ತನೆ ನಮ್ಮ ಜೀವನದಲ್ಲಿ ಹೇಗೆ ಬದಲಾವಣೆಗಳನ್ನು ತರುತ್ತದೆ ಎಂಬುದರ ಕುರಿತು ಉಲ್ಲೇಖಿಸಲಾಗಿದೆ. ಗ್ರಹಗಳ ರಾಜ ಸೂರ್ಯ ದೇವ ಶೀಘ್ರದಲ್ಲೇ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಸೂರ್ಯನ ಈ ಸಂಚಾರದಿಂದಾಗಿ ಸಮಾಜದಲ್ಲಿ ಗೌರವ, ಆರೋಗ್ಯ ಮತ್ತು ಆರ್ಥಿಕ ಲಾಭಗಳು ಕಂಡುಬರುತ್ತವೆ.


COMMERCIAL BREAK
SCROLL TO CONTINUE READING

ಸೂರ್ಯನ ಈ ರಾಶಿ ಪರಿವರ್ತನೆ ಯಾವಾಗ?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಫೆಬ್ರವರಿ ರಂದು ಬೆಳಗ್ಗೆ 9.57 ಕ್ಕೆ ಸೂರ್ಯನ ಕುಂಭ ರಾಶಿ ಸಂಕ್ರಮಣ ನಡೆಯಲಿದೆ. ಶನಿ ಈಗಾಗಲೇ ಕುಂಭ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ, ಸೂರ್ಯ ಶನಿ ಯುತಿ ನೆರವೇರಲಿದೆ. ಈ ಎರಡೂ ಗ್ರಹಗಳ ಮೈತ್ರಿಯಿಂದಾಗಿ 3 ರಾಶಿಯವರಿಗೆ ಭಾರಿ ಅದೃಷ್ಟ ಒಲಿಯಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ.



ಧನು ರಾಶಿ: ಕುಂಭ ರಾಶಿಯಲ್ಲಿ ಸೂರ್ಯನ ಸಂಚಾರ ಧನು ರಾಶಿಯ ಜನರ ಅದೃಷ್ಟವನ್ನು ಹೆಚ್ಚಿಸಲಿದೆ. ಈ ರಾಶಿಯ ಜನರಿಗೆ ಸರ್ಕಾರಿ ನೌಕರಿ ಸಿಗುವ ಸಾಧ್ಯತೆ ಇದೆ. ಸಮಯ ನಿಮ್ಮದಾಗಿದೆ. ಹೀಗಾಗಿ ಸಂಪೂರ್ಣ ಪರಿಶ್ರಮದಿಂದ ಸಿದ್ಧತೆಯನ್ನು ಮುಂದುವರಿಸಿ, ಒಳ್ಳೆಯ ಸುದ್ದಿ ಸಿಗುವ ಎಲ್ಲಾ ಸಾಧ್ಯತೆಗಳಿವೆ. ಹೊಸ ವ್ಯಾಪಾರ ಆರಂಭಿಸಬಹುದು. ಈ ಕೆಲಸದಲ್ಲಿ ತಂದೆಯ ಸಹಾಯವನ್ನು ತೆಗೆದುಕೊಳ್ಳಿ, ಅದು ನಿಮಗೆ ಪ್ರಯೋಜನವನ್ನು ನೀಡುತ್ತದೆ. ಸೂರ್ಯನ ಪ್ರಭಾವವನ್ನು ಹೆಚ್ಚಿಸಲು, ಪ್ರತಿದಿನ ಸೂರ್ಯ ದೇವರಿಗೆ ಅರ್ಘ್ಯ  ಅರ್ಪಿಸಿ.


ಇದನ್ನೂ ಓದಿ-Money Astrology: ಈ 4 ರಾಶಿಗಳ ಜನರ ಗಳಿಕೆ ಕಡಿಮೆ, ಆದರೂ ಆಗರ್ಭ ಶ್ರೀಮಂತರಾಗ್ತಾರಂತೆ! ನಿಮ್ಮ ರಾಶಿ ಇದರಲ್ಲಿದೆಯಾ?

ಕನ್ಯಾ ರಾಶಿ: ಗ್ರಹಗಳ ರಾಜನ ಈ ಸಂಕ್ರಮಣ ಸಮಾಜದಲ್ಲಿ ನಿಮ್ಮ ಘನತೆ ಗೌರವವನ್ನು ಹೆಚ್ಚಿಸಲಿದೆ. ನಿಮ್ಮ ಹೋರಾಟಕ್ಕೆ ನೀವು ಪ್ರತಿಫಲವನ್ನು ಪಡೆಯುವ ಸಮಯ ಇದು. ವಿರೋಧಿಗಳು ನಿಮ್ಮ ವಿರುದ್ಧ ಪಿತೂರಿಗಳನ್ನು ನಡೆಸುತ್ತಾರೆ. ಆದರೆ ನಿಮ್ಮ ವಿವೇಕ ಮತ್ತು ತಿಳುವಳಿಕೆಯಿಂದ ನೀವು ಅವರ ಪಿತೂರಿಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗುವಿರಿ. ಉದ್ಯೋಗಸ್ಥರಿಗೆ ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ನಿಮ್ಮ ನಡವಳಿಕೆ ಮತ್ತು ಕೆಲಸಕ್ಕೆ  ಪ್ರಶಂಸೆ ವ್ಯಕ್ತವಾಗಲಿದೆ. ಸಮಾಜದಲ್ಲಿ ಒಳ್ಳೆಯ ಇಮೇಜ್ ನಿಮ್ಮದಾಗಲಿದೆ.


ಇದನ್ನೂ ಓದಿ-Auspicious Yog February 2023: ಫೆಬ್ರುವರಿ ತಿಂಗಳಲ್ಲಿ ರೂಪುಗೊಳ್ಳುತ್ತಿದೆ ಮಾಲವ್ಯ ಯೋಗ, ಶುಕ್ರ ದೆಸೆಯಿಂದ 5 ರಾಶಿಗಳ ಜನರಿಗೆ ಭಾರಿ ಧನಲಾಭ


ವೃಷಭ ರಾಶಿ: ಸೂರ್ಯ ದೇವರ ಸಂಕ್ರಮಣದಿಂದಾಗಿ ವೃಷಭ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ. ಬಹಳ ದಿನಗಳಿಂದ ಉದ್ಯೋಗ ಬದಲಾಯಿಸುವ ಯೋಚನೆಯಲ್ಲಿದ್ದ ಈ ರಾಶಿಯವರಿಗೆ ಒಳ್ಳೆಯ ಉದ್ಯೋಗಾವಕಾಶಗಳು ಒದಗಿ ಬರಲಿವೆ. ನೀವು ಉತ್ತಮ ಕಂಪನಿಯಿಂದ ಉದ್ಯೋಗ ಪ್ರಸ್ತಾಪ ಪತ್ರವನ್ನು ಪಡೆಯಬಹುದು. ಮಾರ್ಚ್ 15 ರ ಹೊತ್ತಿಗೆ ಉದ್ಯಮಿಗಳಿಗೆ ದೊಡ್ಡ ಲಾಭದ ಸೂಚನೆಗಳಿವೆ. ನೀವು ಬಾಡಿಗೆ ಮನೆ ಬಿಟ್ಟು ನಿಮ್ಮ ಕನಸಿನ ಮನೆಗೆ ಶಿಫ್ಟ್ ಆಗಬಹುದು. ಸಮಾಜದಲ್ಲಿ ನಿಮ್ಮ ಕೀರ್ತಿ ಹೆಚ್ಚಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.


ಇದನ್ನೂ ಓದಿ-Planetary Transit 2023: 4 ಗ್ರಹಗಳ ಗೋಚರ 5 ರಾಶಿಗಳ ಜನರ ಭಾಗ್ಯವನ್ನೇ ಬದಲಾಯಿಸಲಿವೆ


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.