Auspicious Yog February 2023: ಫೆಬ್ರುವರಿ ತಿಂಗಳಲ್ಲಿ ರೂಪುಗೊಳ್ಳುತ್ತಿದೆ ಮಾಲವ್ಯ ಯೋಗ, ಶುಕ್ರ ದೆಸೆಯಿಂದ 5 ರಾಶಿಗಳ ಜನರಿಗೆ ಭಾರಿ ಧನಲಾಭ

Malavya Mahapurush Yog 2023: ಮಾಲವ್ಯ ಯೋಗದ ವ್ಯಕ್ತಿಯ ಮೇಲೆ ಯಾವಾಗಲು ಶುಕ್ರನ ಪ್ರಭಾವವಿರುತ್ತದೆ. ಹೀಗಾಗಿ ಇಂತಹ ವ್ಯಕ್ತಿಯ ಭಾಗ್ಯ ತುಂಬಾ ಬಲಿಷ್ಠವಾಗಿರುತ್ತದೆ.  

Written by - Nitin Tabib | Last Updated : Feb 3, 2023, 01:22 PM IST
  • ಈ ಯೋಗವು ಗುರುವಿನ ರಾಶಿಯಲ್ಲಿ ರೂಪುಗೊಳ್ಳಲಿದೆ,
  • ಆದ್ದರಿಂದ ಮೀನ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಪ್ರಗತಿಯಂತಹ ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ.
  • ಇದಲ್ಲದೆ ವೃಷಭ, ಸಿಂಹ, ಧನು ರಾಶಿ ಮತ್ತು ಕುಂಭ ರಾಶಿಯವರಿಗೆ ಇದರ ಅನೇಕ ಲಾಭದಾಯಕ ಫಲಿತಾಂಶಗಳು ಸಿಗಲಿವೆ.
Auspicious Yog February 2023: ಫೆಬ್ರುವರಿ ತಿಂಗಳಲ್ಲಿ ರೂಪುಗೊಳ್ಳುತ್ತಿದೆ ಮಾಲವ್ಯ ಯೋಗ, ಶುಕ್ರ ದೆಸೆಯಿಂದ 5 ರಾಶಿಗಳ ಜನರಿಗೆ ಭಾರಿ ಧನಲಾಭ title=
ಫೆಬ್ರುವರಿಯಲ್ಲಿ ಮಾಲವ್ಯ ಮಹಾಪುರುಷ ಯೋಗ ನಿರ್ಮಾಣ

Malavya Yog 2023: ಹರ್ಷ ಮತ್ತು ಉಲ್ಲಾಸದ ಮಾಸ ಎಂದೇ ಪರಿಗಣಿಸಲಾಗುವ ಫಾಲ್ಗುಣ ಮಾಸ ಉತ್ತರ ಭಾರತದ ಪಂಚಾಗದ ಪ್ರಕಾರ ಫೆಬ್ರವರಿ 6, 2023 ರಿಂದ ಆರಂಭಗೊಂಡು ಮಾರ್ಚ್ 7, 2023ಕ್ಕೆ ಮುಕ್ತಾಯಗೊಳ್ಳಲಿದೆ. ಇನ್ನೊಂದೆಡೆ ದಕ್ಷಿಣ ಭಾರತದ ಪಂಚಾಗದ ಪ್ರಕಾರ ಇದು ಫೆಬ್ರುವರಿ 21, 2023 ರಿಂದ ಆರಂಭಗೊಂಡು ಮಾರ್ಚ್ 21, 2023 ರವರೆಗೆ ಇರಲಿದೆ. ಹಿಂದೂ ಪಂಚಾಂಗದ ಪ್ರಕಾರ ಇದು ವರ್ಷದ ಕೊನೆಯ ತಿಂಗಳು. ಇದಾದ ಬಳಿಕ ಚೈತ್ರ ಮಾಸ ಆರಂಭಗೊಳ್ಳುತ್ತದೆ.  ಫಾಲ್ಗುಣ ಮಾಸದಲ್ಲಿ ಗ್ರೀಷ್ಮ ಋತು ಆರಂಭಗೊಳ್ಳುತ್ತದೆ. 

ರೂಪುಗೊಳ್ಳಲಿದೆ ಮಾಲವ್ಯ ಯೋಗ
ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಾಲವ್ಯ ಯೋಗವು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ. ಶುಕ್ರ 15 ಫೆಬ್ರವರಿ 2023 ರಂದು ಕುಂಭ ರಾಶಿಯಿಂದ ತನ್ನ ಉತ್ಕೃಷ್ಟ ರಾಶಿಯಾದ ಮೀನ ರಾಶಿಗೆ ಸಂಚರಿಸಲಿದೆ. ಶುಕ್ರನು ಮೀನ ರಾಶಿಯನ್ನು ಪ್ರವೇಶಿಸಿದ ತಕ್ಷಣ ಮಾಲವ್ಯ ರಾಜಯೋಗವು ರೂಪುಗೊಳ್ಳಲಿದೆ. ಮಾಲವ್ಯ ಯೋಗವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ತುಂಬಾ ವಿಶೇಷ ಮತ್ತು ಮಂಗಳಕರ ಎಂದು ಪರಿಗಣಿಸಲಾಗುತ್ತದೆ.  ಏಕೆಂದರೆ ಇದು ಐದು ಮಹಾಪುರುಷ ಯೋಗಗಳಲ್ಲಿ ಒಂದಾಗಿದೆ.

ಈ ಯೋಗದ ರೂಪುಗೊಳ್ಳುವಿಕೆಯಿಂದ ಯಾವ ರಾಶಿಗಳ ಜನರು ಅಪಾರ ಪ್ರಯೋಜನ ಪಡೆಯುವ ಸಾಧ್ಯತೆಯಿದೆ? ತಿಳಿದುಕೊಳ್ಳೋಣ. ಈ ಯೋಗವು ಗುರುವಿನ ರಾಶಿಯಲ್ಲಿ ರೂಪುಗೊಳ್ಳಲಿದೆ, ಆದ್ದರಿಂದ ಮೀನ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಪ್ರಗತಿಯಂತಹ ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ. ಇದಲ್ಲದೆ ವೃಷಭ, ಸಿಂಹ, ಧನು ರಾಶಿ ಮತ್ತು ಕುಂಭ ರಾಶಿಯವರಿಗೆ ಇದರ ಅನೇಕ ಲಾಭದಾಯಕ ಫಲಿತಾಂಶಗಳು ಸಿಗಲಿವೆ.
ಮಾಲವ್ಯ ಯೋಗ 2023-ರಾಶಿಗನುಗುಣವಾಗಿ ಉಪಾಯ ಅನುಸರಿಸಿ

ಮೇಷ ರಾಶಿ
ಮನೆಯಿಂದ ಹೊರಡುವ ಮೊದಲು ಪ್ರತಿದಿನ ಸಕ್ಕರೆ ಬೆರೆಸಿದ ನೀರನ್ನು ಕುಡಿಯಿರಿ. ಪ್ರತಿದಿನ ತಾಯಿಯ ಸೇವೆ ಮಾಡಿ ಅವರ ಆಶೀರ್ವಾದ ಪಡೆಯಿರಿ. ಅಗತ್ಯವಿರುವವರಿಗೆ ಕೆಂಪು ಅಥವಾ ಮಾಣಿಕ್ಯ ಬಣ್ಣದ ಬಟ್ಟೆಗಳನ್ನು ದಾನ ಮಾಡಿ.

ವೃಷಭ ರಾಶಿ
ಪ್ರತಿನಿತ್ಯ ಮನೆಯ ಈಶಾನ್ಯ ಮೂಲೆಯಲ್ಲಿ ತುಪ್ಪದ ದೀಪವನ್ನು ಹಚ್ಚಿ. ಪ್ರತಿದಿನ ಕನಕಧಾರಾ ಸ್ತೋತ್ರವನ್ನು ಪಠಿಸಿ.

ಮಿಥುನ ರಾಶಿ
ಬಡವರಿಗೆ ಅಥವಾ ದೇವಸ್ಥಾನದಲ್ಲಿ ಮೊಸರು, ಹಾಲು ಅಥವಾ ಸಕ್ಕರೆಯನ್ನು ದಾನ ಮಾಡಿ. ಪ್ರತಿದಿನ ಶಿವಲಿಂಗಕ್ಕೆ ನೀರನ್ನು ಅರ್ಪಿಸಿ.

ಕರ್ಕ ರಾಶಿ
ಚಂದ್ರನ ಬೆಳಕಿನಲ್ಲಿ ಕುಳಿತು ಚಂದ್ರದೇವನ ಮಂತ್ರಗಳನ್ನು 108 ಬಾರಿ ಜಪಿಸಿ. ಹಾಲು ಮತ್ತು ಮೊಸರು ದಾನ ಮಾಡಿ. ಪ್ರತಿದಿನ ಶಿವನ ಆರಾಧನೆ ಮಾಡಿ.

ಸಿಂಹ ರಾಶಿ
ನೀರಿಗೆ ಬೆಲ್ಲವನ್ನು ಸೇರಿಸಿ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ. ನಿತ್ಯ ತಾಯಿ ಲಕ್ಷ್ಮಿಯನ್ನು ಪೂಜಿಸಿ. 

ಕನ್ಯಾ ರಾಶಿ 
ಹಸುವಿಗೆ ಹಸಿರು ಸೊಪ್ಪುಗಳನ್ನು ತಿನ್ನಿಸಿ. ಪ್ರತಿದಿನ ತಾಯಿ ಲಕ್ಷ್ಮಿಯನ್ನು ಪೂಜಿಸಿ ಮತ್ತು ಆಕೆಗೆ ಕೆಂಪು ಹೂವುಗಳನ್ನು ಅರ್ಪಿಸಿ.

ತುಲಾ ರಾಶಿ
ಬಿಳಿ ಬಟ್ಟೆ ಧರಿಸಿ. ಪ್ರತಿದಿನ ಶಿವನ ಆರಾಧನೆ ಮಾಡಿ. ಶಿವನಿಗೆ ರುದ್ರಾಭಿಷೇಕ ಮಾಡಿ.

ವೃಶ್ಚಿಕ ರಾಶಿ
ಎರಡು ಚಮಚ ಹಸಿ ಹಾಲನ್ನು ನೀರಿಗೆ ಹಾಕಿ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿ. ಚಂದ್ರ ದೇವನ ಮಂತ್ರಗಳನ್ನು ಪಠಿಸಿ. ಶಿವನನ್ನು ಆರಾಧಿಸಿ.

ಧನು ರಾಶಿ
ತುಳಸಿಯನ್ನು ಪ್ರತಿದಿನ ಪೂಜಿಸಬೇಕು ಮತ್ತು ಮನೆಯ ಈಶಾನ್ಯ ಮೂಲೆಯಲ್ಲಿ ತುಪ್ಪದ ದೀಪವನ್ನು ಬೆಳಗಿಸಬೇಕು. ತುಪ್ಪ, ಬಿಳಿ ಚಂದನ ಮತ್ತು ಹಾಲು ದಾನ ಮಾಡಿ.

ಇದನ್ನೂ ಓದಿ-Astro Tips: 5 ರೂ. ನಾಣ್ಯದ ಈ ಉಪಾಯ ಮಾಡಿ, ರಾತ್ರೋರಾತ್ರಿ ಅದೃಷ್ಟ ಖುಲಾಯಿಸುತ್ತದೆ!

ಮಕರ ರಾಶಿ
ತಾಯಿ ಲಕುಮಿಯ ಧ್ಯಾನ ಮಾಡಿ ಇಷ್ಟಾರ್ಥ ಪೂರೈಕೆಗೆ ಪ್ರಾರ್ಥನೆ ಸಲ್ಲಿಸಿ. ಕೆಂಪು ಹೂವುಗಳನ್ನು ಅರ್ಪಿಸುವ ಮೂಲಕ ಭಕ್ತಿ ಭಾವದಿಂದ ಲಕ್ಷ್ಮಿಯನ್ನು ಪೂಜಿಸಿ. ಹಸಿ ಹಾಲನ್ನು ನೀರಿನಲ್ಲಿ ಬೆರೆಸಿ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿ.

ಇದನ್ನೂ ಓದಿ-Planetary Transit 2023: 4 ಗ್ರಹಗಳ ಗೋಚರ 5 ರಾಶಿಗಳ ಜನರ ಭಾಗ್ಯವನ್ನೇ ಬದಲಾಯಿಸಲಿವೆ

ಕುಂಭ ರಾಶಿ
ಪ್ರತಿದಿನ ಶಿವನನ್ನು ಆರಾಧಿಸಿ ಮತ್ತು ಶಿವಲಿಂಗಕ್ಕೆ ನೀರನ್ನು ಅರ್ಪಿಸಿ. ಬಡವರಿಗೆ ಕಪ್ಪು ಬಟ್ಟೆ ದಾನ ಮಾಡಿ.

ಇದನ್ನೂ ಓದಿ-Monthly Love Horoscope: ಫೆಬ್ರವರಿ ತಿಂಗಳು ರಾಶಿಗಳ ಜನರ ಪಾಲಿಗೆ ಅದ್ಭುತವಾಗಿದೆ, ಬಿಂದಾಸ್ ಪ್ರಪೋಸ್ ಮಾಡಿ!

ಮೀನ ರಾಶಿ
ಬಡವರಿಗೆ ಅಥವಾ ದೇವಸ್ಥಾನದಲ್ಲಿ ಬಿಳಿ ಚಂದನ, ತುಪ್ಪ, ಹಾಲು, ಮೊಸರು ಇತ್ಯಾದಿಗಳನ್ನು ದಾನ ಮಾಡಿ. ಪ್ರತಿದಿನ ವಿಷ್ಣು ಸಹಸ್ರನಾಮ ಪಠಿಸಿ. ಪ್ರತಿನಿತ್ಯ ಹಣೆಗೆ ಕುಂಕುಮದ ತಿಲಕವನ್ನು ಇಟ್ಟುಕೊಳ್ಳಿ. ಬೆಳ್ಳಿ ಲೋಟದಿಂದ ನೀರು ಕುಡಿಯಿರಿ.

ಇದನ್ನೂ ಓದಿ-Astro Tips: 5 ರೂ. ನಾಣ್ಯದ ಈ ಉಪಾಯ ಮಾಡಿ, ರಾತ್ರೋರಾತ್ರಿ ಅದೃಷ್ಟ ಖುಲಾಯಿಸುತ್ತದೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News