ಇನ್ನೆರಡು ದಿನಗಳಲ್ಲಿ ಈ ನಾಲ್ಕು ರಾಶಿಯವರ ಭವಿಷ್ಯ ಬೆಳೆಗಲಿದ್ದಾನೆ ಸೂರ್ಯ
Surya Rashi Parivartan August 2022: 2 ದಿನಗಳವರೆಗೆ, ಗ್ರಹಗಳ ರಾಜ ಸೂರ್ಯ ಸಿಂಹರಾಶಿಯನ್ನು ಪ್ರವೇಶಿಸಲಿದ್ದಾನೆ. ಸೂರ್ಯನ ಈ ರಾಶಿಚಕ್ರ ಬದಲಾವಣೆಯು 4 ರಾಶಿಯವರ ಜೀವನದಲ್ಲಿ ಅದೃಷ್ಟ ತರಲಿದೆ.
Surya Rashi Parivartan August 2022 : ಜ್ಯೋತಿಷ್ಯದಲ್ಲಿ, ಸೂರ್ಯನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಸೂರ್ಯನ ಸ್ಥಾನದಲ್ಲಿನ ಸಣ್ಣ ಬದಲಾವಣೆಯಾದರೂ ಅದರ ಪರಿಣಾಮ ದ್ವಾದಶ ರಾಶಿಗಳ ಮೇಲೆ ಬೀರುತ್ತದೆ. ಸೂರ್ಯನು ಸಿಂಹ ರಾಶಿಯ ಅಧಿಪತಿಯಾಗಿದ್ದು, ಆಗಸ್ಟ್ 17, 2022 ರಂದು ಸಿಂಹ ರಾಶಿಯನ್ನು ಪ್ರವೇಶಿಸಲಿದ್ದಾನೆ. ಸೂರ್ಯನು ಪ್ರಸ್ತುತ ಕರ್ಕಾಟಕದಲ್ಲಿದ್ದು ಸಿಂಹ ರಾಶಿಗೆ ಪ್ರವೇಶಿಸುವುದರಿಂದ ಜನರ ಜೀವನದಲ್ಲಿ ದೊಡ್ಡ ಮಟ್ಟದ ಬದಲಾವಣೆಯನ್ನು ತರಲಿದ್ದಾನೆ. ಸೂರ್ಯನ ಈ ರಾಶಿ ಬದಲಾವಣೆಯು 4 ರಾಶಿಯವರಿಗೆ ಬಹಳ ಶುಭಕರವಾಗಿರುತ್ತದೆ. ಜಾತಕದಲ್ಲಿ ಸೂರ್ಯನು ಬಲವಾದ ಸ್ಥಾನದಲ್ಲಿದ್ದರೆ, ಈ ಸಂಕ್ರಮಣ ಅವರ ಅದೃಷ್ದ ಬಾಗಿಲನ್ನೇ ತೆರೆಯುತ್ತದೆ.
ಆಗಸ್ಟ್ 17 ರಿಂದ ಸೂರ್ಯನಂತೆ ಬೆಳಗಲಿದೆ ಈ ರಾಶಿಯವರ ಅದೃಷ್ಟ :
ಮೇಷ: ಸೂರ್ಯನ ಸಂಚಾರವು ಮೇಷ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ತಂದು ಕೊಡಲಿದೆ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡುವರು. ವೇತನ ಪಡೆಯುವ ವರ್ಗದವರು ಕೆಲಸದಲ್ಲಿ ಬಡ್ತಿ ಪಡೆಯಬಹುದು. ನಿಮ್ಮ ಕೆಲಸಕ್ಕೆ ಮೆಚ್ಚುಗೆ ದೊರೆಯಲಿದೆ. ಹಣದ ಹರಿವು ಉತ್ತಮವಾಗಿರಲಿದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ (Surya Rashi Parivartan). ಒಟ್ಟಾರೆಯಾಗಿ, ಈ ಸಮಯವು ತುಂಬಾ ಮಂಗಳಕರವಾಗಿರುತ್ತದೆ.
ಇದನ್ನೂ ಓದಿ : ಜನ್ಮಾಷ್ಟಮಿ ದಿನದಂದು ರಾಶಿಗನುಗುಣವಾಗಿ ಈ ಕೆಲಸ ಮಾಡಿದರೆ ಜೀವನಪೂರ್ತಿ ಸಂತೋಷವನ್ನೇ ಕರುಣಿಸುತ್ತಾನೆ ಶ್ರೀಕೃಷ್ಣ
ಕರ್ಕಾಟಕ: ಸೂರ್ಯನ ಸಂಕ್ರಮಣವು ಕರ್ಕ ರಾಶಿಯವರಿಗೆ ಬಹಳಷ್ಟು ಹಣವನ್ನು ನೀಡಲಿದೆ. ಹೊಸ ಹೊಸ ಆದಾಯದಿಂದ ಹಣ ಪಡೆಯಬಹುದು. ಭವಿಷ್ಯಕ್ಕಾಗಿ ಹಣ ಉಳಿಸುವುದು ಸಾಧ್ಯವಾಗುತ್ತದೆ. ಆದಾಯ ಹೆಚ್ಚಲಿದೆ. ಉದ್ಯೋಗ ಮತ್ತು ವ್ಯವಹಾರ ಎರಡಕ್ಕೂ ಉತ್ತಮ ಸಮಯ.
ಸಿಂಹ: ಸೂರ್ಯನು ಸಿಂಹ ರಾಶಿಯ ಅಧಿಪತಿಯಾಗಿದ್ದು, ಸೂರ್ಯನು ಈ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಸಿಂಹ ರಾಶಿಯ ಜನರ ಮೇಲೆ ಈ ಸಂಕ್ರಮಣವು ಅತ್ಯಂತ ಮಂಗಳಕರ ಪರಿಣಾಮ ಬೀರುತ್ತದೆ. ಅವರ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಕೆಲಸಕ್ಕೆ ಉತ್ತಮ ಫಲಿತಾಂಶ ಸಿಗಲಿದೆ. ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗಲಿದೆ. ಆರೋಗ್ಯವೂ ಚೆನ್ನಾಗಿರುತ್ತದೆ.
ಇದನ್ನೂ ಓದಿ : Sun Transit : ಸೂರ್ಯ ಪರಿವರ್ತನೆ : ಮೀನ ರಾಶಿಯವರಿಗೆ ಶುಭ ಫಲ, ನಿಮ್ಮ ಪ್ರತಿಷ್ಠೆ ಹೆಚ್ಚಾಗುವುದು!
ಮೀನ: ಸೂರ್ಯನ ಸಂಚಾರವು ಮೀನ ರಾಶಿಯವರಿಗೆ ಯಶಸ್ಸನ್ನು ತರುತ್ತದೆ. ಪರೀಕ್ಷೆ-ಸಂದರ್ಶನದಲ್ಲಿ ಯಶಸ್ಸು ಸಿಗಲಿದೆ. ಉದ್ಯೋಗದಲ್ಲಿ ಲಾಭವಾಗಲಿದೆ. ಹಣಕಾಸಿನ ವಿಚಾರದಲ್ಲಿ ದೊಡ್ಡ ಸುಧಾರಣೆ ಕಂಡುಬರಬಹುದು. ಅನಿರೀಕ್ಷಿತ ಹಣ ಕೈ ಸೇರಲಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.