ಬೆಂಗಳೂರು : ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸುವುದನ್ನು ಸಂಕ್ರಮಣ ಎಂದು ಕರೆಯಲಾಗುತ್ತದೆ. ಸೂರ್ಯನು ಜುಲೈ 16ರ ರಾತ್ರಿ ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಚಂದ್ರ ಕರ್ಕ ರಾಶಿಯ ಅಧಿಪತಿ. ಚಂದ್ರನ ಮನೆಗೆ ಸೂರ್ಯನ ಪ್ರವೇಶವು ವಿವಿಧ ರಾಶಿಚಕ್ರ ಚಿಹ್ನೆಗಳ ಮೇಲೆ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಸೂರ್ಯ ಸಂಕ್ರಮಣದಿಂದ ಮೇಷ ರಾಶಿಯವರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 


COMMERCIAL BREAK
SCROLL TO CONTINUE READING

ಉದ್ಯೋಗ-ವ್ಯವಹಾರದಲ್ಲಿ ಅಡೆತಡೆ : 
ಮೇಷ ರಾಶಿಯ ಜನರು ಮಾನಸಿಕ ಮತ್ತು ದೈಹಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈ ರಾಶಿಯ ಜನರು ಎಲ್ಲೇ ಕೆಲಸ ಮಾಡುತ್ತಿರಲಿ ಅಥವಾ ವ್ಯಾಪಾರ ಮಾಡುತ್ತಿರಲಿ ಅವರ ಕೆಲಸದ ಕ್ಷೇತ್ರದಲ್ಲಿ ವಿವಿಧ ರೀತಿಯ ಮಾನಸಿಕ ಒತ್ತಡವನ್ನು ಎದುರಿಸಬೇಕಾಗುತ್ತದೆ. 


ಇದನ್ನೂ ಓದಿ : ಮನೆಯಲ್ಲಿ ಈ ಸಸ್ಯವನ್ನು ನೆಟ್ಟರೆ ಇರಲಿದೆ ಲಕ್ಷ್ಮೀ ಕಟಾಕ್ಷ


ಕೆಲಸದಲ್ಲಿ ಅಡಚಣೆಗಳು :
ಗ್ರಹಗಳ ಸ್ಥಾನದಲ್ಲಿ ಬದಲಾವಣೆಯಾದಾಗ ಅದು ರಾಶಿಯ ಮೇಲೆ ಕೂಡಾ ಪರಿಣಾಮ ಬೀರುತ್ತದೆ. ಸೂರ್ಯ ಸಂಕ್ರಮಣದಿಂದ ಮೇಷ ರಾಶಿಯವರ ಪ್ರತಿಯೊಂದು ಕೆಲಸದಲ್ಲಿಯೂ ಬಾಧೆ ಉಂಟಾಗುತ್ತದೆ. ಹಾಗಾಗಿ ಯಾವುದೇ ಕೆಲಸ ಮಾಡಲು ಅವಸರ ಮಾಡುವ ಅಗತ್ಯವಿಲ್ಲ. ಹೊಸ ಕೆಲಸವನ್ನು ಈ ಸಮಯದಲ್ಲಿ ಆರಂಭಿಸದೇ ಇರುವುದು ಒಳ್ಳೆಯದು. ಪ್ರತಿ ಕೆಲಸವನ್ನೂ ತಾಳ್ಮೆಯಿಂದ ಪೂರೈಸಬೇಕು. ಎಲ್ಲಾ ಸಂದರ್ಭಗಳಲ್ಲಿಯೂ ಶಾಂತವಾಗಿರಲು ಪ್ರಯತ್ನಿಸಿ. ಇಲ್ಲವಾದರೆ ಕೆಲಸ ಕೆಟ್ಟು ಬಿಡಬಹುದು. 


ಆರೋಗ್ಯದ ಬಗ್ಗೆ ಗಮನ ಅಗತ್ಯ :  
ಆರೋಗ್ಯದ ದೃಷ್ಟಿಯಿಂದ, ದೇಹದಲ್ಲಿ ಕೆಲವು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಯಾವುದೇ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ಈ ಅವಧಿಯಲ್ಲಿ ಆರೋಗ್ಯದ ವಿಷಯದಲ್ಲಿ ಜಾಗರೂಕರಾಗಿರಬೇಕು. ಕುಟುಂಬಕ್ಕೆ ಸಂಬಂಧಿಸಿದಂತೆ, ವೈವಾಹಿಕ ಜೀವನವು ಸಂತೋಷವಾಗಿರುವುದಿಲ್ಲ. ಮದುವೆಯಾಗಬೇಕು ಎಂದಿರುವವರಿಗೆ ಮಾಡುವೆ ಕಾರ್ಯಗಳಿಗೂ ವಿಘ್ನ ಎದುರಾಗಬಹುದು. 


ಇದನ್ನೂ ಓದಿ : Kaal Sarp Dosh: ನೌಕರಿ ಮತ್ತು ವ್ಯಾಪಾರದಲ್ಲಿ ಭಯಂಕರ ಕಷ್ಟಕ್ಕೆ ಕಾರಣ ಈ ದೋಷ, ಶ್ರಾವಣ ಸೋಮವಾರ ಈ ಉಪಾಯ ಮಾಡಿ


ನಷ್ಟ ಉಂಟಾಗಬಹುದು: 
ಆಸ್ತಿಗೆ ಸಂಬಂಧಿಸಿದಂತೆ ಹಲವು ರೀತಿಯ ಸಮಸ್ಯೆಗಳು ಉಂಟಾಗಬಹುದು. ಆಸ್ತಿಗೆ ಸಂಬಂಧಿಸಿದಂತೆ ವಿವಾದಗಳು ಏಳಬಹುದು. ಭೂಮಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ಆ ಯೋಚನೆಯನ್ನು ಸದ್ಯಕ್ಕೆ ಕೈ ಬಿಡುವುದು ಒಳ್ಳೆಯದು.  ಈ ಸಮಯದಲ್ಲಿ ಗೌರವವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಅದು ಕಚೇರಿಯಾಗಿರಲಿ ಅಥವಾ ಸಾಮಾಜಿಕ ಕ್ಷೇತ್ರವಾಗಿರಲಿ, ಮೇಲಾಧಿಕಾರಿಗಳು ಅಥವಾ  ಜನರಿಂದ ಸಣ್ಣ ಸಣ್ಣ ತಪ್ಪುಗಳಿಗೂ ಬಹಳ ಟೀಕೆಯನ್ನು ಕೇಳಬೇಕಾಗುತ್ತದೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.